ನವದೆಹಲಿ: ಜೂನ್ 8 ರಿಂದ 17 ರವರೆಗೆ ನಡೆಯಲಿರುವ ಸಿಖ್ರ ಹಬ್ಬದ ಪ್ರಯುಕ್ತ ಯಾತ್ರಾರ್ಥಿಗಳಿಗೆ ಪಾಕಿಸ್ತಾನ ಮಂಗಳವಾರ 163 ವೀಸಾಗಳನ್ನು ನೀಡಿದೆ. ಗುರು ಅರ್ಜನ್ ದೇವ್ ಅವರ ಹುತಾತ್ಮ ದಿನದ ಮುನ್ನಾದಿನದಂದು ಪಾಕಿಸ್ತಾನದ ಹೈಕಮಿಷನ್ ಈ ಕ್ರಮ ತೆಗೆದುಕೊಂಡಿದೆ.
ಪಾಕಿಸ್ತಾನದ ಹೈಕಮಿಷನ್ ಪತ್ರಿಕಾ ಪ್ರಕಟಣೆಯನ್ನು ಓದಿದ ಚಾರ್ಜ್ ಡಿ' ಅಫೇರ್ಸ್ ಅಫ್ತಾಬ್ ಹಸನ್ ಖಾನ್, ಯಾತ್ರಾರ್ಥಿಗಳಿಗೆ ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಇದೇ ವೇಳೆ ಯಾತ್ರೆಗೆ ಶುಭವಾಗಲಿ ಎಂದು ಹಾರೈಸಿದರು.
ವೀಸಾಗಳ ವಿತರಣೆಯು 1974 ರ ಧಾರ್ಮಿಕ ದೇಗುಲಗಳಿಗೆ ಭೇಟಿ ನೀಡುವ ಪಾಕಿಸ್ತಾನ - ಭಾರತ ಪ್ರೋಟೋಕಾಲ್‌ನ ಚೌಕಟ್ಟಿನ ಅಡಿ ಒಳಗೊಂಡಿದೆ. ಪ್ರತಿ ವರ್ಷ, ಭಾರತದಿಂದ ಹೆಚ್ಚಿನ ಸಂಖ್ಯೆಯ ಸಿಖ್ ಯಾತ್ರಿಗಳು ವಿವಿಧ ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಾರೆ.
ಇದನ್ನೂ ಓದಿ: ನೂಪುರ್ ಶರ್ಮಾ ವಿರುದ್ಧ ತನಿಖೆಗೆ ಮುಂಬೈ ಸರ್ಕಾರ ಸೂಚನೆ.. ನೋಟಿಸ್ ನೀಡಿದ ಪೊಲೀಸ್ ಇಲಾಖೆ
ನವದೆಹಲಿಯಿಂದ ನೀಡಲಾದ ವೀಸಾಗಳು ಇತರ ದೇಶಗಳಿಂದ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಿಖ್ ಯಾತ್ರಾರ್ಥಿಗಳಿಗೆ ನೀಡಲಾದ ವೀಸಾಗಳಿಗೆ ಹೆಚ್ಚುವರಿಯಾಗಿವೆ. ಭೇಟಿಯ ಸಮಯದಲ್ಲಿ, ಯಾತ್ರಾರ್ಥಿಗಳು ಪಂಜಾಬ್ ಸಾಹಿಬ್, ನಂಕಾನಾ ಸಾಹಿಬ್ ಮತ್ತು ಕರ್ತಾರ್ಪುರ್ ಸಾಹಿಬ್ಗೆ ಹೋಗುತ್ತಾರೆ. ಯತ್ರಾರ್ಥಿಗಳು ಜೂನ್ 8 ರಂದು ಪಾಕಿಸ್ತಾನವನ್ನು ಪ್ರವೇಶಿಸಿ, ಜೂನ್ 17, 2022 ರಂದು ಭಾರತಕ್ಕೆ ಹಿಂತಿರುಗುತ್ತಾರೆ ಎಂದು ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.