ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್‌ನಿಂದ ಮೃತಪಟ್ಟರ ಸಂಖ್ಯೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ನಿನ್ನೆ ಒಂದೇ ದಿನ 357 ಮಂದಿ ಮಹಾಮಾರಿ ಸೋಂಕಿಗೆ ಬಲಿಯಾಗಿದ್ದಾರೆ. ದೆಹಲಿಯಲ್ಲಿ ಆಕ್ಸಿಜನ್ ಕೊರತೆ ತೀವ್ರವಾಗುತ್ತಿದ್ದು, ಅಗತ್ಯ ಪ್ರಮಾಣದಲ್ಲಿ ಆಮ್ಲಜನಕ ಪೂರೈಸುವಂತೆ ಅಲ್ಲಿನ ಆಸ್ಪತ್ರೆಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನು ಪರಿ ಪರಿಯಾಗಿ ಬೇಡಿಕೊಳ್ಳುತ್ತಿವೆ.
ದೆಹಲಿಯ ಪೆನತಾಮೆಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ತೀವ್ರ ಸ್ವರೂಪ ಪಡೆದಿದೆ. ಇಲ್ಲಿನ 50 ಮಂದಿ ಸೋಂಕಿತರಿಗೆ ಆಮ್ಲಜನಕದ ತುರ್ತು ಅವಶ್ಯಕತೆ ಇದೆ. ಈ ಬಗ್ಗೆ ಮಾಹಿತಿ ನೀಡಿದ ಆಸ್ಪತ್ರೆಯ ಮ್ಯಾನೇಜರ್ ದೀಪಕ್ ಸೇಥಿ, 50 ಸಿಲಿಂಡರ್‌ಗಳನ್ನು ರಿಫಿಲ್ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ಆದ್ರೆ ಒಂದೂ ಸಿಲಿಂಡರ್‌ಗೂ ಆಕ್ಸಿಜನ್ ತುಂಬಿಸಲು ಸಾಧ್ಯವಾಗಿಲ್ಲ. ಕನಿಷ್ಠ 50 ಮಂದಿ ರೋಗಿಗಳಿಗೆ ಆಕ್ಸಿಜನ್ ಬೆಂಬಲ ಬೇಕೇ ಬೇಕು. ಹಲವರು ವೆಂಟಿಲೇಟರ್‌ನಲ್ಲಿ ಇದ್ದಾರೆ. ರಿಫಿಲ್ ಕೇಂದ್ರದಲ್ಲಿ ನೂಕು ನಗ್ಗುಲು ಇದೆ. ಹೀಗಾಗಿ ದೆಹಲಿ ಹಾಗೂ ಕೇಂದ್ರ ಸರ್ಕಾರ ನಮಗೆ ಸಹಾಯ ಮಾಡಬೇಕು ಎಂದು ಕೋರಿದ್ದಾರೆ.
ಇದನ್ನೂ ಓದಿ: ಕೊವ್ಯಾಕ್ಸಿನ್ ಬೆಲೆ ನಿಗದಿ: ಖಾಸಗಿ ಆಸ್ಪತ್ರೆಗೆ 1,200 ರೂ., ರಾಜ್ಯ ಸರ್ಕಾರಗಳಿಗೆ 600 ರೂ.!