ನವದೆಹಲಿ: ಸಂಸದ ಅಸಾದುದ್ದೀನ್ ಓವೈಸಿ ಪಕ್ಷದ ಅಧ್ಯಕ್ಷರೊಬ್ಬರು ಹಿಂದೂಗಳನ್ನು ಪರೋಕ್ಷವಾಗಿ ಟೀಕಿಸುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದು, ಅವರ ವಿರುದ್ಧ ಕೋಮು ಸೌಹಾರ್ದತೆಗೆ ಧಕ್ಕೆ ತಂದ ಆರೋಪದ ಮೇಲೆ ಕೇಸ್ ಜಡಿಯಲಾಗಿದೆ.
ಉತ್ತರಪ್ರದೇಶದ ಸಂಭಾಲ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ, ಎಐಎಂಐಎಂ ಪಕ್ಷದ ರಾಜ್ಯ ಅಧ್ಯಕ್ಷ ಶೌಕತ್ ಅಲಿ, ಮುಸ್ಲಿಂ ಸಮುದಾಯವನ್ನು ಟೀಕಿಸುವವರು ಒಬ್ಬ ಮಹಿಳೆಯನ್ನು ಮದುವೆಯಾಗಿ, ಮೂವರು ಪ್ರೇಯಸಿಯರನ್ನು ಹೊಂದಿರುತ್ತಾರೆ. ಆ ಮೂಲಕ ಅಕ್ರಮವಾಗಿ ಮಕ್ಕಳು ಹುಟ್ಟು ಹಾಕುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಹಿಂದೂಗಳನ್ನೇ ಉದ್ದೇಶಿಸಿ ಟೀಕಿಸಿದ ಮಾತಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಶೌಕತ್ ಅಲಿಯ ಮಾತಿನ ಹುರುಳು: ವೈರಲ್ ಆದ ವೀಡಿಯೊದಲ್ಲಿರುವಂತೆ, ಮುಸ್ಲಿಮರು ಎರಡು ಮದುವೆಯಾದರೂ ಇಬ್ಬರೂ ಮಹಿಳೆಯರನ್ನು ಗೌರವಿಸುತ್ತಾರೆ. "ನೀವು" ಒಂದೇ ಮದುವೆಯಾದರೂ, ಮೂವರನ್ನು ಇಟ್ಟುಕೊಂಡಿರುತ್ತೀರಿ. ನಿಮ್ಮಂತ ಹುಳು, ಕೀಟಗಳ ಬೆದರಿಕೆಗೆ ಬಗ್ಗಲ್ಲ. ನೀವು ಮೊಘಲ್ ಚಕ್ರವರ್ತಿಗಳ ಮುಂದೆ ನಡುಬಗ್ಗಿಸಿದವರು ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ನೆಲೆ ಕಳೆದುಕೊಳ್ಳಲು ಪ್ರಾರಂಭಿಸಿದಾಗ ಅದು ಮುಸ್ಲಿಮರ ಹಿಂದೆ ಬೀಳುತ್ತದೆ. ನಮ್ಮ ಸಮುದಾಯದ ಜನಸಂಖ್ಯೆಯನ್ನು ಕುಗ್ಗಿಸಲು ನೀತಿ ರೂಪಿಸುವ ಬಗ್ಗೆ ಮಾತನಾಡುತ್ತಿದೆ. ಮುಸ್ಲಿಮರನ್ನು ಟೀಕಿಸುವವರು ಮದುವೆಯಾದರೂ, ಪ್ರೇಯಸಿರನ್ನು ಹೊಂದಿರುತ್ತಾರೆ. ಅವರಿಗೆ ಯಾವುದೇ ಮರ್ಯಾದೆ ಇರುವುದಿಲ್ಲ. ಆದರೆ, ನಾವು ಎರಡು ವಿವಾಹವಾದರೂ, ಇಬ್ಬರನ್ನೂ ಗೌರವದಿಂದ ಕಾಣುತ್ತೇವೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಮೊಘಲ್ ಚಕ್ರವರ್ತಿ ಅಕ್ಬರ್ ಅವರು ರಜಪೂತ ರಾಜಕುಮಾರಿ ಜೋಧಾಬಾಯಿ ಅವರನ್ನು ವಿವಾಹದ ಉದಾಹರಣೆ ನೀಡಿ, ಮುಸ್ಲಿಮರು ನಿಮ್ಮವರನ್ನು ವರಿಸಿ ಕೈ ಹಿಡಿದಿದ್ದೇವೆ. ನೀವು ನಮಗೇ ಬೆದರಿಕೆ ಹಾಕುತ್ತಿದ್ದೀರಿ. 832 ವರ್ಷಗಳಿಂದ ನಿಮ್ಮಂತಹ ಕ್ರಿಮಿಕೀಟ, ಹುಳುಗಳನ್ನು ಆಳಿದ್ದೇವೆ ಎಂದು ಭಾಷಣ ಮಾಡಿದ್ದಾರೆ.
ನಾವು ಈರುಳ್ಳಿ, ಕ್ಯಾರೆಟ್ ಮೂಲಂಗಿ ಅಲ್ಲ: ನಮಗಿಂತ ಜಾತ್ಯತೀತರು ಯಾರಿದ್ದಾರೆ?. ಒಬ್ಬ ಸಾಧು, ಮುಸ್ಲಿಮರನ್ನು ಕಡಿಯಬೇಕು ಎಂದು ಹೇಳುತ್ತಾರೆ. ನಾವೇನಾದರೂ ಕ್ಯಾರೆಟ್, ಮೂಲಂಗಿ, ಈರುಳ್ಳಿಯಂತೆ ಕಾಣುತ್ತೇವೆಯೇ ಎಂದು ಪ್ರಶ್ನಿಸಿದ್ದಾರೆ.
ಓದಿ: ಮಡಿಕೇರಿಯಲ್ಲಿ 50 ಕಡೆ ಪೆಟ್ರೋಲ್ ಬಾಂಬ್ ಹಾಕುವ ಸಂಭಾಷಣೆ ವೈರಲ್: ಇಬ್ಬರು ಆರೋಪಿಗಳು ವಶಕ್ಕೆ