ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಸೆಪ್ಟೆಂಬರ್ 17 ರಿಂದ ಅಕ್ಬೋಬರ್ 1ರವರೆಗೆ ದೇಶಾದ್ಯಂತ ಸ್ವಯಂಪ್ರೇರಿತ ಬೃಹತ್ ರಕ್ತದಾನ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಒಂದೇ ದಿನ ಒಂದು ಲಕ್ಷಕ್ಕೂ ಹೆಚ್ಚು ಜನರು ರಕ್ತದಾನ ಮಾಡುವ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.
ಇಲ್ಲಿನ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ಶಿಬಿರದಲ್ಲಿ ರಕ್ತದಾನ ಮಾಡಿ ಬಳಿಕ ಮಾತನಾಡಿದ ಅವರು, ರಕ್ತದಾನ ಅಮೃತ ಮಹೋತ್ಸವದ ಅಂಗವಾಗಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಬಯಸುವವರು ಆರೋಗ್ಯ ಸೇತು ಆ್ಯಪ್ ಮತ್ತು ಇ-ರಕ್ತಕೋಶ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ನಾಗರಿಕರನ್ನು ಒತ್ತಾಯಿಸಿದರು.
-
1,00,000 पार….#RaktdaanAmritMahotsav https://t.co/JgTH7o3PIP pic.twitter.com/kpi9GFLixr
— Dr Mansukh Mandaviya (@mansukhmandviya) September 17, 2022 " class="align-text-top noRightClick twitterSection" data="
">1,00,000 पार….#RaktdaanAmritMahotsav https://t.co/JgTH7o3PIP pic.twitter.com/kpi9GFLixr
— Dr Mansukh Mandaviya (@mansukhmandviya) September 17, 20221,00,000 पार….#RaktdaanAmritMahotsav https://t.co/JgTH7o3PIP pic.twitter.com/kpi9GFLixr
— Dr Mansukh Mandaviya (@mansukhmandviya) September 17, 2022
ಇದನ್ನೂ ಓದಿ:ಪ್ರಧಾನಿ ಜನ್ಮದಿನ ಹಿನ್ನೆಲೆ: ರಕ್ತದಾನ ಮಾಡಿ ಶುಭಾಶಯ ಕೋರಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ
"ಮೋದಿ ಜನ್ಮದಿನದಂದು ವಿಶ್ವ ದಾಖಲೆಯಾಗಿದ್ದು, ಇದನ್ನು ತಿಳಿಸಲು ತುಂಬಾ ಸಂತೋಷವಾಗುತ್ತಿದೆ. ದೇಶಾದ್ಯಂತ 6,000 ರಕ್ತದಾನ ಶಿಬಿರಗಳನ್ನು ತೆರೆಯಲಾಗಿದೆ. ಎರಡು ಲಕ್ಷಕ್ಕೂ ಹೆಚ್ಚು (2,07,313) ದಾನಿಗಳು ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಜೊತೆಗೆ, ತಡರಾತ್ರಿ 10.25 ರ ವರೆಗೆ ಒಟ್ಟು 1,00,506 ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಮೋದಿ ಹುಟ್ಟುಹಬ್ಬ: ರಕ್ತದಾನ ಮಾಡಿದ ಆರೋಗ್ಯ ಸಚಿವ, ಕಸಗೂಡಿಸಿದ ರೈಲ್ವೆ ಮಂತ್ರಿ
ರಕ್ತದಾನ ಅಮೃತ ಮಹೋತ್ಸವವು ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿದೆ. ರಕ್ತದಾನದ ಬಗ್ಗೆ ಅರಿವು ಮೂಡಿಸುವ ಜತೆಗೆ ಒಂದೇ ದಿನದಲ್ಲಿ ದೇಶಾದ್ಯಂತ ಒಂದು ಲಕ್ಷ ಯುನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಲಾಗಿದೆ. ರಕ್ತದಾನ ಕೇವಲ ರಾಷ್ಟ್ರೀಯ ಅಗತ್ಯವನ್ನು ಪೂರೈಸುವುದಲ್ಲದೇ ಸಮಾಜ ಮತ್ತು ಮಾನವೀಯ ಸೇವೆಯಾಗಿದೆ ಎಂದು ಸಚಿವರು ಹೇಳಿದರು.