ನವದೆಹಲಿ: ಈ ವರ್ಷದ ಎರಡನೇ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಬರೋಬ್ಬರಿ 11.42 ಲಕ್ಷ ಪ್ರಕರಣಗಳನ್ನು ದೇಶಾದ್ಯಂತ 5,129 ಬೆಂಚುಗಳ ಮೂಲಕ ವಿಲೇವಾರಿ ಮಾಡಲಾಗಿದೆ ಎಂದು ರಾಷ್ಟ್ರೀಯ ಕಾನೂನು ಸೇವೆಗಳ ಅಧಿಕಾರಿಗಳು (ನಲ್ಸಾ) ತಿಳಿಸಿದ್ದಾರೆ.
ಸಾಂಕ್ರಾಮಿಕ ರೋಗವಾದ ಕೊರೊನಾವನ್ನು ಗಮನದಲ್ಲಿರಿಸಿಕೊಂಡು ಕಾನೂನು ಸೇವೆಗಳ ಅಧಿಕಾರಿಗಳು ರಾಷ್ಟ್ರೀಯ ಲೋಕ ಅದಾಲತ್ ಅನ್ನು ಯಶಸ್ವಿಯಾಗಿ ನಡೆಸಿದ್ದಾರೆ ಎಂದು ನಲ್ಸಾದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ನ್ಯಾಯಮೂರ್ತಿ ಯು ಯು ಲಲಿತ್ ಹೇಳಿದ್ದಾರೆ.
4 ಗಂಟೆಯ ಹೊತ್ತಿಗೆ ಸುಮಾರು 35.53 ಕ್ಕೂ ಹೆಚ್ಚು ಪ್ರಕರಣಗಳನ್ನು ತೆಗೆದುಕೊಳ್ಳಲಾಗಿದೆ ಎಂದು ನಲ್ಸಾ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅದರಲ್ಲಿ ಸುಮಾರು 22.50 ಲಕ್ಷ ಪ್ರಕರಣಗಳು ಪೂರ್ವ ಮೊಕದ್ದಮೆ ಪ್ರಕರಣಗಳಾಗಿದ್ದು, ಸುಮಾರು 13.03 ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ ಎಂದು ಮಾಹಿತಿ ನೀಡಲಾಗಿದೆ.
ವರ್ಚುವಲ್ ಕಾನ್ಫರೆನ್ಸಿಂಗ್ ಮೂಲಕ ನಡೆದ ಲೋಕ ಅದಾಲತ್‌ಗಳ ಕಾರ್ಯವನ್ನು ನ್ಯಾಯಮೂರ್ತಿ ಲಲಿತ್ ಅವರೇ ಮೇಲ್ವಿಚಾರಣೆ ನಡೆಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನ್ಯಾಯಮೂರ್ತಿ ಲಲಿತ್ ಅವರು ಈ ವೇಳೆ ದೇಶದ ವಿವಿಧ ಜಿಲ್ಲಾ ನ್ಯಾಯಾಲಯಗಳಲ್ಲಿನ ಲೋಕ ಅದಾಲತ್ ನ್ಯಾಯಪೀಠಗಳ ಅಧ್ಯಕ್ಷರೊಂದಿಗೆ ಸಂವಹನ ನಡೆಸಿದ್ದಾರೆ. ಆಂಧ್ರಪ್ರದೇಶದ ಹೈಕೋರ್ಟ್ (ಅಮರಾವತಿ) ಮತ್ತು ರಾಜಸ್ಥಾನದ ಹೈಕೋರ್ಟ್ (ಜೋಧ್ಪುರ್) ನಲ್ಲಿ ಲೋಕ ಅದಾಲತ್ ನ್ಯಾಯಪೀಠಗಳ ಕಾರ್ಯ ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ಹೆಚ್ಚಿಗೆ ಗಮನ ಹರಿಸಿದ್ದಾರೆ.
ದೇಶದ ನ್ಯಾಯ ವ್ಯವಸ್ಥೆಯಲ್ಲಿ ನ್ಯಾಯ ಬಾಕಿ ಕಡಿಮೆ ಮಾಡಲು ರಾಷ್ಟ್ರೀಯ ಲೋಕ ಅದಾಲತ್‌ಗಳು ಕಡ್ಡಾಯವಾಗಿದೆ ಎಂಬ ಅಂಶಕ್ಕೆ ಅವರು ಒತ್ತು ನೀಡಿದ್ದಾರೆ ಎಂದು ಲಲಿತ್ ಅವರನ್ನು ಉದ್ದೇಶಿಸಿ ನಲ್ಸಾ ಮಾಹಿತಿ ನೀಡಿದೆ.