ETV Bharat / bharat

ಜೂನ್ 7 ರಿಂದ ಓವಲ್​ನಲ್ಲಿ  ICC ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ - ದೀರ್ಘ ಸ್ವರೂಪದ ಒಂದು ವಾರದ ಅವಧಿಯ ಪಂದ್ಯಾವಳಿ

ಟೆಸ್ಟ್​ ವಿಶ್ವಕಪ್​ನ ಫೈನಲ್ ಪಂದ್ಯಾವಳಿಯು ಜೂನ್ 7 ರಿಂದ 11ರವರೆಗೆ ನಡೆಯಲಿದೆ. ಈ ಪಂದ್ಯವು ಇಂಗ್ಲೆಂಡ್​ನ ಓವಲ್​ನಲ್ಲಿ ನಡೆಯಲಿದೆ.

Oval to host ICC World Test Championship 2023 final from June 7

author img

By

Published : Feb 8, 2023, 5:30 PM IST

ದುಬೈ: ಐಸಿಸಿ ವಿಶ್ವಕಪ್ ಟೆಸ್ಟ್ ಚಾಂಪಿಯನ್ ಶಿಪ್ ನ ಎರಡನೇ ಆವೃತ್ತಿಯ ಫೈನಲ್ ಪಂದ್ಯವು ಜೂನ್ 7 ರಿಂದ 11 ರ ನಡುವೆ ಇಂಗ್ಲೆಂಡ್​​ನ ಓವಲ್ ಮೈದಾನದಲ್ಲಿ ನಡೆಯಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬುಧವಾರ ದೃಢಪಡಿಸಿದೆ. ಜೂನ್ 12 ರಿಸರ್ವ ದಿನವಾಗಿರಲಿದೆ. 2021 ರಲ್ಲಿ ನಡೆದ ಪ್ರಥಮ ಟೆಸ್ಟ್​ ವಿಶ್ವ ಕಪ್ ಪಂದ್ಯಾವಳಿಯಲ್ಲಿ ನ್ಯೂಜಿಲ್ಯಾಂಡ್​ ಜಯಗಳಿಸಿತ್ತು. ಆಗ ನ್ಯೂಜಿಲ್ಯಾಂಡ್​ ​ ತಂಡವು ಭಾರತವನ್ನು 8 ವಿಕೆಟ್​ಗಳಿಂದ ಸೋಲಿಸಿತ್ತು.

ಫೈನಲ್ ಪಂದ್ಯ ನಡೆಯಲಿರುವ ದಕ್ಷಿಣ ಲಂಡನ್​ನಲ್ಲಿರುವ ಸ್ಥಳವು ಶ್ರೀಮಂತ ಇತಿಹಾಸ ಹೊಂದಿದ್ದು, 100 ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಯೋಜಿಸಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಟೆಸ್ಟ್ ಕ್ಯಾಲೆಂಡರ್‌ನಲ್ಲಿ ಸ್ಮರಣೀಯ ಘಟನೆಯಾಗಿದೆ ಮತ್ತು ಇದು ಆಟದ ದೀರ್ಘ ಸ್ವರೂಪದ ಒಂದು ವಾರದ ಅವಧಿಯ ಪಂದ್ಯಾವಳಿಯಾಗಿದೆ. ಟೆಸ್ಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಈವರೆಗೆ 24 ಸರಣಿಗಳಲ್ಲಿ 61 ಟೆಸ್ಟ್ ಪಂದ್ಯಗಳನ್ನು ಆಡಲಾಗಿದೆ. ಫೈನಲ್​ನಲ್ಲಿ ಆಡಲಿರುವ ಎರಡು ದೇಶಗಳು ಯಾವವು ಎಂಬುದು ಇನ್ನೂ ಗೊತ್ತಾಗಿಲ್ಲವಾದರೂ ಫೈನಲಿಸ್ಟ್‌ಗಳನ್ನು ನಿರ್ಧರಿಸಲು ಮುಂಬರುವ ವಾರಗಳಲ್ಲಿ ಸಾಕಷ್ಟು ಮಹತ್ವದ ಪಂದ್ಯಗಳು ನಡೆಯಲಿವೆ.

ಆಸ್ಟ್ರೇಲಿಯಾ ಪ್ರಸ್ತುತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತ ಎರಡನೇ ಸ್ಥಾನದಲ್ಲಿದೆ. ಎರಡೂ ತಂಡಗಳು ಫೆಬ್ರವರಿ 9 ರಿಂದ ನಾಲ್ಕು ಟೆಸ್ಟ್ ಸರಣಿಯಲ್ಲಿ ಆಡಲಿವೆ. ಒಟ್ಟು ಆರು ತಂಡಗಳು ಅರ್ಹತೆ ಪಡೆಯುವ ಅವಕಾಶವನ್ನು ಹೊಂದಿದ್ದರೂ, ಅಗ್ರ ಎರಡು ಸ್ಥಾನಗಳಿಗೆ ಸವಾಲು ಹಾಕುವ ಮುಂಚೂಣಿಯಲ್ಲಿರುವವರಲ್ಲಿ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ಪ್ರಮುಖವಾಗಿವೆ.

ನವದೆಹಲಿ: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬುಧವಾರ (ಫೆಬ್ರವರಿ 8) ನಾಗ್ಪುರ ಪಿಚ್ ಕುರಿತು ಆಸ್ಟ್ರೇಲಿಯಾ ಮಾಧ್ಯಮಗಳ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ್ದು, ಕ್ರಿಕೆಟ್‌ನತ್ತ ಗಮನ ಹರಿಸಬೇಕೇ ಹೊರತು ಪಿಚ್‌ ಬಗ್ಗೆ ಅಲ್ಲ ಎಂದು ಹೇಳಿದ್ದಾರೆ. ಬಹುನಿರೀಕ್ಷಿತ ಬಾರ್ಡರ್ ಗವಾಸ್ಕರ್ ಟ್ರೋಫಿ (ಬಿಜಿಟಿ) 2022-23 ರ ಮೊದಲ ಟೆಸ್ಟ್ ನಾಳೆ (ಫೆಬ್ರವರಿ 9) ನಾಗ್ಪುರದಲ್ಲಿ ಪ್ರಾರಂಭವಾಗಲಿದೆ ಮತ್ತು ಆಸ್ಟ್ರೇಲಿಯಾದ ಮಾಧ್ಯಮಗಳು ಈಗಾಗಲೇ ನಾಗ್ಪುರ ಪಿಚ್‌ನ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಎತ್ತಲು ಪ್ರಾರಂಭಿಸಿವೆ.

ಆಸ್ಟ್ರೇಲಿಯಾದ ಮಾಧ್ಯಮಗಳ ಪ್ರಕಾರ, ಭಾರತೀಯ ಬೌಲರ್‌ಗಳಿಗೆ ಸಹಾಯ ಮಾಡುವ ತಂತ್ರದ ಭಾಗವಾಗಿ ನಾಗ್ಪುರ ಪಿಚ್‌ನ ಮಧ್ಯಭಾಗಕ್ಕೆ ಮಾತ್ರ ನೀರುಹಾಕಲಾಗಿದೆ ಮತ್ತು ರೋಲಿಂಗ್ ಮಾಡಲಾಗಿದೆ ಮತ್ತು ಕೆಲವು ಪ್ರದೇಶಗಳನ್ನು ಒಣಗಲು ಬಿಡಲಾಗಿದೆ ಎಂದು ವರದಿ ಮಾಡಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ರೋಹಿತ್, ಇತ್ನಾ ಪಿಚ್ ಮತ್ ದೇಖೋ, ಕ್ರಿಕೆಟ್ ಖೇಲೋ. ಅಲ್ಲಿ ಆಡಲಿರುವ ಎಲ್ಲ 22 ಯುವಕರು ಗುಣಮಟ್ಟದ ಆಟಗಾರರೇ ಆಗಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಖೇಲೋ ಇಂಡಿಯಾ ಯೂತ್ ಗೇಮ್ಸ್: ​ಚಿನ್ನಕ್ಕೆ ಮುತ್ತಿಕ್ಕಿದ ನಟ ಮಾಧವನ್ ಪುತ್ರ ವೇದಾಂತ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.