ನವದೆಹಲಿ: ಸಂಘರ್ಷ ಪೀಡಿತ ಉಕ್ರೇನ್‌ನಿಂದ ಭಾರತೀಯರನ್ನು ಕರೆತರುವ ಆಪರೇಷನ್ ಗಂಗಾ ಕಾರ್ಯಾಚರಣೆ ಚಾಲ್ತಿಯಲ್ಲಿದೆ. ಸುಮಾರು 219 ಭಾರತೀಯರನ್ನು ಹೊತ್ತ ವಿಶೇಷ ವಿಮಾನ ಹಂಗೇರಿಯಿಂದ ಹೊರಟು ಶುಕ್ರವಾರ ದೆಹಲಿ ತಲುಪಿದೆ. ಗುರುವಾರ ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ನಿಂದ ಹೊರಟಿದ್ದ ವಿಮಾನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಭಾರತೀಯ ವಿದ್ಯಾರ್ಥಿಗಳನ್ನು ಗೃಹ ವ್ಯವಹಾರಗಳ ರಾಜ್ಯ ಸಚಿವ ನಿಸಿತ್ ಪ್ರಮಾಣಿಕ್ ಬರಮಾಡಿಕೊಂಡು ಅವರ ಜೊತೆ ಸಂವಾದ ನಡೆಸಿದ್ದಾರೆ.
ಸಂವಾದದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಿಸಿತ್ ಪ್ರಮಾಣಿಕ್, ಉಕ್ರೇನ್‌ನಲ್ಲಿ ಸಿಲುಕಿರುವ ಎಲ್ಲ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವಲ್ಲಿ ನಾವು ಯಶಸ್ವಿಯಾಗುತ್ತಿದ್ದೇವೆ. ಪ್ರಧಾನಿ ಮೋದಿ ಅವರ ಮಾರ್ಗದರ್ಶನದಲ್ಲಿ ನಿಯೋಜಿಸಲಾದ ನಾಲ್ವರು ಸಚಿವರು ಶ್ರಮಿಸುತ್ತಿದ್ದಾರೆ. ವಿದ್ಯಾರ್ಥಿಗಳು ಭಾರತ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದು, ಸಂತೋಷ ವ್ಯಕ್ತಪಡಿದ್ದಾರೆ ಎಂದಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನಾಗರಿಕ ವಿಮಾನಯಾನ ಸಚಿವಾಲಯದ ಸಹಕಾರದೊಂದಿಗೆ ಭಾರತೀಯ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಶೀಘ್ರವಾಗಿ ಕರೆತರಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಎಂ ಸಿಂಧಿಯಾ, ಕಿರಣ್ ರಿಜಿಜು ಮತ್ತು ನಿವೃತ್ತ ಜನರಲ್ ವಿಕೆ ಸಿಂಗ್ ಅವರನ್ನು ಆಪರೇಷನ್ ಗಂಗಾ ಕಾರ್ಯಾಚರಣೆಗೆ ನಿಯೋಜನೆ ಮಾಡಲಾಗಿದೆ. ಅವರು ಉಕ್ರೇನ್ನ ನೆರೆಹೊರೆಯ ರಾಷ್ಟ್ರಗಳಿಗೆ ಎಂದು ನಿಸಿತ್ ಪ್ರಮಾಣಿಕ್ ಹೇಳಿದ್ದಾರೆ.
-
#WATCH | Two C-17 Indian Air Force aircraft, carrying 210 Indian passengers each from #Ukraine, lands at their home base in Hindan near Delhi from Bucharest (Romania) & Budapest (Hungary).
— ANI (@ANI) March 4, 2022 " class="align-text-top noRightClick twitterSection" data="
MoS Defence Ajay Bhatt receives the students.#OperationGanga pic.twitter.com/WYolmwtOVi
">#WATCH | Two C-17 Indian Air Force aircraft, carrying 210 Indian passengers each from #Ukraine, lands at their home base in Hindan near Delhi from Bucharest (Romania) & Budapest (Hungary).
— ANI (@ANI) March 4, 2022
MoS Defence Ajay Bhatt receives the students.#OperationGanga pic.twitter.com/WYolmwtOVi#WATCH | Two C-17 Indian Air Force aircraft, carrying 210 Indian passengers each from #Ukraine, lands at their home base in Hindan near Delhi from Bucharest (Romania) & Budapest (Hungary).
— ANI (@ANI) March 4, 2022
MoS Defence Ajay Bhatt receives the students.#OperationGanga pic.twitter.com/WYolmwtOVi
ಮತ್ತೊಂದು ವಿಮಾನ ಮುಂಬೈಗೆ: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಹೊತ್ತ ಮತ್ತೊಂದು ಏರ್ ಇಂಡಿಯಾ ವಿಮಾನ ಮುಂಬೈ ತಲುಪಿದೆ. 0ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ ವಿಮಾನವು 180 ಭಾರತೀಯರನ್ನು ಈ ವಿಮಾನ ಕರೆತಂದಿದೆ. ಕೇಂದ್ರ ಸಚಿವ ರಾವ್ಸಾಹೇಬ್ ದಾನ್ವೆ ವಿದ್ಯಾರ್ಥಿಗಳನ್ನು ಬರಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಉಕ್ರೇನ್ - ರಷ್ಯಾ ಯುದ್ಧ: ಅಮೆರಿಕದಿಂದ ಟಿಪಿಎಸ್ ವಿಸ್ತರಣೆ.. ಮಾಜಿ ಚಾನ್ಸೆಲರ್ ವಿರುದ್ಧ ಜರ್ಮನಿಯಲ್ಲಿ ಅಸಮಾಧಾನ
ಮುಂದಿನ ಎರಡು ದಿನಗಳಲ್ಲಿ ವಿಶೇಷ ವಿಮಾನಗಳ ಮೂಲಕ 7,400ಕ್ಕೂ ಹೆಚ್ಚು ಮಂದಿಯನ್ನು ಕರೆತರುವ ನಿರೀಕ್ಷೆಯಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಇಷ್ಟು ಮಾತ್ರವಲ್ಲದೇ ಇಂದು 3,500 ಮಂದಿಯನ್ನು ಮತ್ತು ಮಾರ್ಚ್ 5ರಂದು 3,900ಕ್ಕೂ ಹೆಚ್ಚು ಮಂದಿಯನ್ನು ಕರೆತರುವ ನಿರೀಕ್ಷೆಯಿದೆ.