ETV Bharat / bharat

ಸೋಂಕಿನಿಂದ ಗುಣಮುಖರಾದವರಿಗೆ ಒಂದು ಡೋಸ್​ ಲಸಿಕೆ ಸಾಕು: ಬಿಹೆಚ್​ಯು ಅಧ್ಯಯನ ವರದಿ - ಬಿಹೆಚ್​ಯು ಅಧ್ಯಯವ ವರದಿ

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಜನರು ಕೇವಲ ಒಂದು ಡೋಸ್​ ಲಸಿಕೆ ಪಡೆದರೆ ಸಾಕು. ಅದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿಜ್ಞಾನಿಗಳ ಅಧ್ಯಯನದಲ್ಲಿ ಕಂಡು ಬಂದಿದೆ.

ಕೊರೊನಾ ವ್ಯಾಕ್ಸಿನ್​
ಕೊರೊನಾ ವ್ಯಾಕ್ಸಿನ್​
author img

By

Published : May 31, 2021, 10:57 PM IST

ವಾರಣಾಸಿ (ಉತ್ತರ ಪ್ರದೇಶ): ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಜನರಿಗೆ ಮತ್ತೆ ರೋಗ ಬರುವುದನ್ನು ತಡೆಯಲು ಕೇವಲ ಒಂದು ಡೋಸ್ ಲಸಿಕೆ ಸಾಕು ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿಜ್ಞಾನಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ವಿಶೇಷವೆಂದರೆ, ಪ್ರಸ್ತುತ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಎಂಬ ಎರಡು ಲಸಿಕೆಗಳನ್ನು ದೇಶದಲ್ಲಿ ಅನುಮೋದಿಸಲಾಗಿದೆ. ಕೋವಿಡ್ -19 ಅನ್ನು ನಿಯಂತ್ರಣಕ್ಕೆ ತರಲು ಜನರು ಎರಡೂ ಲಸಿಕೆಗಳ ಎರಡು ಪ್ರಮಾಣವನ್ನು ತೆಗೆದುಕೊಳ್ಳಬೇಕಾಗುತ್ತದೆ.

ಬಿಎಚ್‌ಯುನ ಪ್ರಾಣಿಶಾಸ್ತ್ರ ವಿಭಾಗದ ಪ್ರೊಫೆಸರ್ ಜ್ಞಾನೇಶ್ವರ್ ಚೌಬೆ ಮತ್ತು ನರವಿಜ್ಞಾನ ವಿಭಾಗದ ಪ್ರೊಫೆಸರ್ ವಿಜಯ್ ನಾಥ್ ಮಿಶ್ರಾ ಅವರ ತಂಡ ನಡೆಸಿದ ಅಧ್ಯಯನದ ಪ್ರಕಾರ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಜನರು ಕೇವಲ ಒಂದು ಡೋಸ್​ ಲಸಿಕೆ ಪಡೆದರೆ ಸಾಕು. ಅದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ತಿಳಿಸಿದೆ.

ಪ್ರೊಫೆಸರ್ ಚೌಬೆ ಅವರು 20 ಜನರ ಮೇಲೆ ನಡೆಸಿದ ಅಧ್ಯಯನದಲ್ಲಿ, ಸೋಂಕಿನಿಂದ ಚೇತರಿಸಿಕೊಂಡ ಜನರಲ್ಲಿ ಪ್ರತಿಕಾಯಗಳನ್ನು ವೇಗವಾಗಿ ತಯಾರಿಸಲಾಗುತ್ತದೆ ಎಂದು ಕಂಡುಬಂದಿದೆ. ಆದರೆ, ಆರೋಗ್ಯವಂತ ಜನರಲ್ಲಿ ಪ್ರತಿಕಾಯಗಳನ್ನು ತಯಾರಿಸಲು 3 ರಿಂದ 4 ವಾರಗಳು ಬೇಕಾಗುತ್ತದೆ ಎಂದು ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.