ETV Bharat / bharat

ಪ್ಯಾನ್- ಆಧಾರ್ ಲಿಂಕ್ ಮಾಡಲು ನಾಲ್ಕೇ ದಿನಗಳು ಬಾಕಿ.. ಲಿಂಕ್​ ಆಗದಿದ್ರೆ ನಿಮ್ಮ ಕಾರ್ಡ್​ ನಿಷ್ಕ್ರಿಯ

ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು ಕೇವಲ 4 ದಿನಗಳು ಮಾತ್ರ ಉಳಿದಿವೆ. ನೀವು ಇನ್ನೂ ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡದಿದ್ದರೆ, ಕೂಡಲೇ ಮಾಡಿ. ನಿಮಗೆ ಮಾರ್ಚ್ 31ರವರೆಗೆ ಸಮಯವಿದೆ. ಇಲ್ಲದಿದ್ದರೆ, ಭಾರೀ ದಂಡವನ್ನು ಪಾವತಿಸಬೇಕಾಗುತ್ತದೆ. ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

PAN Aadhar Link
ಪ್ಯಾನ್- ಆಧಾರ್ ಲಿಂಕ್
author img

By

Published : Mar 27, 2023, 6:15 PM IST

ನವದೆಹಲಿ: 2023ರ ಮಾರ್ಚ್ 31ರೊಳಗೆ ಆಧಾರ್ ಜೊತೆಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) 2022ರ ಜೂನ್ 30ನಂತರ ಆಧಾರ್ ಕಾರ್ಡ್‌ನೊಂದಿಗೆ ಪ್ಯಾನ್​ ಕಾರ್ಡ್ ಅನ್ನು ಲಿಂಕ್ ಮಾಡಲು ಒಂದು ಸಾವಿರ ರೂಪಾಯಿಗಳ ವಿಳಂಬ ಶುಲ್ಕವನ್ನು ವಿಧಿಸಲಾಗುತ್ತಿದೆ. ಮಾರ್ಚ್ 31ರೊಳಗೆ ದಂಡವನ್ನು ಪಾವತಿಸದೇ ಆಧಾರ್ ಕಾರ್ಡ್‌ನೊಂದಿಗೆ ಪ್ಯಾನ್‌ಕಾರ್ಡ್ ಲಿಂಕ್ ಮಾಡಿಸಿಕೊಳ್ಳಿ. ಇಲ್ಲದಿದ್ದರೆ, ನಿಮ್ಮ ಪ್ಯಾನ್ ನಿಷ್ಕ್ರಿಯವಾಗುತ್ತದೆ. ಈ ಕಾರಣದಿಂದಾಗಿ ನೀವು ಹಣಕಾಸಿನ ವ್ಯವಹಾರಗಳು ಅಥವಾ ಹಣಕಾಸಿನ ಕೆಲಸಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಸ್ಯೆಗಳನ್ನು ತಪ್ಪಿಸಲು, ಇಂದೇ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಿಕೊಳ್ಳಿ.

10 ಸಾವಿರದವರೆಗೆ ದಂಡ ವಿಧಿಸಬಹುದು: ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದ್ದು, ಆದಷ್ಟು ಬೇಗ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವಂತೆ ಜನರನ್ನು ಒತ್ತಾಯಿಸಿದೆ. ಇಲ್ಲದಿದ್ದರೆ, ನೀವು ನಂತರ ಭಾರೀ ದಂಡವನ್ನು ಪಾವತಿಸಬೇಕಾಗಬಹುದು. ಮಾರ್ಚ್ 31ರೊಳಗೆ ಎರಡೂ ದಾಖಲೆಗಳನ್ನು ಲಿಂಕ್ ಮಾಡಲು ಕೇವಲ 1,000 ರೂ.ಗಳನ್ನು ದಂಡವಾಗಿ ಪಾವತಿಸಬೇಕಾಗುತ್ತದೆ. ಅದೇ ಸಮಯದಲ್ಲಿ, ಏಪ್ರಿಲ್ 1ರಿಂದ ಪ್ಯಾನ್ ಅನ್ನು ಪುನಃ ಸಕ್ರಿಯಗೊಳಿಸಲು 10,000 ರೂ. ದಂಡವನ್ನು ಪಾವತಿಸಬೇಕಾಗುತ್ತದೆ. ಇದರ ನಂತರವೇ ನಿಮ್ಮ ಪ್ಯಾನ್‌ಕಾರ್ಡ್ ಅನ್ನು ಸಕ್ರಿಯಗೊಳಿಸಲಾಗುತ್ತದೆ.

ಪ್ಯಾನ್​ ನಿಷ್ಕ್ರಿಯವಾದರೆ ಆಗುವ ಅನಾನುಕೂಲಗಳೇನು ಗೊತ್ತಾ?: ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಿದ್ದರೆ, ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ. ಇದರೊಂದಿಗೆ, ನೀವು ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಇತ್ಯಾದಿಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ. ಗಮನಾರ್ಹವಾಗಿ, 50,000ಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ, ಆಧಾರ್ ಕಾರ್ಡ್ ಅಗತ್ಯವಿದೆ. ಸರ್ಕಾರ ಪ್ಯಾನ್ ಮತ್ತು ಆಧಾರ್ ಅನ್ನು ಏಕೆ ಲಿಂಕ್ ಮಾಡುತ್ತಿದೆ ಎಂಬ ಈ ಪ್ರಶ್ನೆಗೆ ಉತ್ತರವೆಂದರೆ, ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವ ಮೂಲಕ ಯಾವುದೇ ರೀತಿಯ ವ್ಯವಹಾರವನ್ನು ಟ್ರ್ಯಾಕ್ ಮಾಡಬಹುದು. ಇದು ತೆರಿಗೆ ವಂಚನೆ ಹಾಗೂ ವಂಚನೆಯ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಪ್ಯಾನ್- ಆಧಾರ್ ಲಿಂಕ್ ಮಾಡುವುದು ಹೇಗೆ ಗೊತ್ತಾ?

  • ಮೊದಲನೆಯದಾಗಿ ಪ್ಯಾನ್​ ಕಾರ್ಡ್ ಹೊಂದಿರುವವರ ಆದಾಯ ತೆರಿಗೆ www.incometax.gov.in ನ ಇ-ಫೈಲಿಂಗ್ ವೆಬ್‌ಸೈಟ್‌ಗೆ ಹೋಗಬೇಕು.
  • ನೀವು ಇಲ್ಲಿ ನೋಂದಾಯಿಸದಿದ್ದರೆ, ಮೊದಲು ನೋಂದಾಯಿಸಿ.
  • ಬಳಕೆದಾರ ಐಡಿ, ಪಾಸ್ವರ್ಡ್ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಲಾಗ್ ಇನ್ ಮಾಡಿ.
  • ನಂತರ ನಿಮ್ಮ ಮುಂದೆ ಪಾಪ್ ಅಪ್ ವಿಂಡೋ ತೆರೆದುಕೊಳ್ಳುತ್ತದೆ. ಅದರಲ್ಲಿ ಆಧಾರ್‌ಗೆ ಲಿಂಕ್ ಮಾಡಲಾದ ಪ್ಯಾನ್ ಆಯ್ಕೆಯು ಗೋಚರಿಸುತ್ತದೆ.
  • ಈ ಆಯ್ಕೆಯಲ್ಲಿ, ನಿಮ್ಮ ಪ್ಯಾನ್ ಪ್ರಕಾರ, ನಿಮ್ಮ ಹೆಸರು, ಹುಟ್ಟಿದ ದಿನಾಂಕ ಸೇರಿದಂತೆ ವೈಯಕ್ತಿಕ ಮಾಹಿತಿಯನ್ನು ಈಗಾಗಲೇ ಭರ್ತಿ ಆಗಿರುತ್ತದೆ.
  • ಬಳಿಕ, ವೆಬ್‌ಸೈಟ್‌ನಲ್ಲಿ ನೀಡಿರುವ ನಿಮ್ಮ ಆಧಾರ್ ಮತ್ತು ಪ್ಯಾನ್ ಮಾಹಿತಿಯನ್ನು ಪರಿಶೀಲಿಸಬೇಕು.
  • ಇದರ ನಂತರ ಲಿಂಕ್ ನೌ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
  • ಇಷ್ಟೆಲ್ಲಾ ಮಾಡಿದ ನಂತರ, ನಿಮಗೆ ಮೇಸೆಜ್​ಯೊಂದು ಬರುತ್ತದೆ, ಅದರಲ್ಲಿ ನಿಮ್ಮ ಪ್ಯಾನ್ ಮತ್ತು ಆಧಾರ್ ಅನ್ನು ಯಶಸ್ವಿಯಾಗಿ ಲಿಂಕ್ ಮಾಡಲಾಗಿದೆ ಎಂದು ಬರೆಯಲಾಗುತ್ತದೆ.

ನೀವು ಈಗಾಗಲೇ ಆಧಾರ್ ಮತ್ತು ಪ್ಯಾನ್ ಲಿಂಕ್ ಹೊಂದಿದ್ದೀರಾ ಎಂದು ಪರಿಶೀಲಿಸಿ..

  • ಇ-ಫೈಲಿಂಗ್ ಪೋರ್ಟಲ್ ಮುಖಪುಟದಲ್ಲಿ, 'ಕ್ವಿಕ್ ಲಿಂಕ್ಸ್' ಗೆ ಹೋಗಿ ಮತ್ತು ಲಿಂಕ್ ಆಧಾರ್ ಸ್ಥಿತಿಯ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಆಧಾರ್ ಸ್ಥಿತಿಯನ್ನು ವೀಕ್ಷಿಸಿ ಲಿಂಕ್ ಅನ್ನು ಕ್ಲಿಕ್ ಮಾಡಿ.
  • ನಂತರ ಯಶಸ್ವಿ ಪರಿಶೀಲನೆಯ ನಂತರ, ನಿಮ್ಮ ಲಿಂಕ್ ಆಧಾರ್ ಸ್ಥಿತಿಯ ಕುರಿತು ಸಂದೇಶವನ್ನು ಪ್ರದರ್ಶಿಸಲಾಗುತ್ತದೆ.

ಇದನ್ನೂ ಓದಿ: ಅಮೃತ್ ಪಾಲ್ ಸಿಂಗ್ ನೇಪಾಳದಲ್ಲಿ ಅಡಗಿದ್ದಾನೆ: ಭಾರತೀಯ ರಾಯಭಾರ ಕಚೇರಿ ಹೇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.