ಮುಂಬೈ(ಮಹಾರಾಷ್ಟ್ರ): ವಾಕಿಂಗ್ಗೆ ಬಂದ ಮೂವರು ಯುವ ಪ್ರವಾಸಿಗರಲ್ಲಿ ಯುವಕನೊಬ್ಬ ಮುಳುಗಿ ಮೃತಪಟ್ಟಿದ್ದು, ಇಬ್ಬರು ಯುವಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಲಸೋಪರ ಕಲಾಂಬ್ ಕಡಲತೀರದಲ್ಲಿ ನಡೆದಿದೆ. ಈ ಘಟನೆಯಿಂದ ಕಲಾಂಬ್ ಕಡಲತೀರದಲ್ಲಿ ಸುತ್ತಾಡಲು ಬರುವ ಪ್ರವಾಸಿಗರ ಜೀವಕ್ಕೆ ಅಪಾಯವಿದೆ ಎಂಬ ಚರ್ಚೆ ನಡೆಯುತ್ತಿದೆ.
ಮೂವರು ಯುವಕರು ಸಮುದ್ರದ ನೀರಿನಲ್ಲಿ ಸ್ನಾನ ಮಾಡಲು ತೆರಳಿದ್ದರು. ಆದರೆ, ಆ ಸಮಯದಲ್ಲಿ ಅಲೆಗಳ ಏರಿಳಿತಕ್ಕೆ ಸಿಲುಕಿದರು. ಬಳಿಕ ಅಲೆಗಳ ಸೆಳತಕ್ಕೆ ಮೂವರು ಸಮುದ್ರದ ಪಾಲಾಗುತ್ತಿದ್ದರು. ಇದನ್ನು ಕಂಡ ಕಲಾಂಬ್‌ನ ಅನಿಕೇತ್ ನಾಯ್ಕ್ ಮತ್ತು ನಿಖಿಲ್ ನಿಜೈ ಅವರು ಆಳ ಸಮುದ್ರಕ್ಕೆ ಇಳಿದು ಇಬ್ಬರು ಯುವಕರ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಸಾಯಿಯ ಗವ್ರೈ ಪದಾದ ರೋಹಿತ್ ಯಾದವ್ (20) ಮತ್ತು ರಾಮಮಂದಿರದ ಆಜಾದ್ ಚಾಲಿಯ ರಾಹುಲ್ ರಾಜ್‌ಭರ್ (20) ಬದಕುಳಿದಿದ್ದು, ಜೋಗೇಶ್ವರಿಯ ರಾಜನ್ ಮೌರ್ಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಅರ್ನಾಳ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಓದಿ: ಸುಳ್ಯ: ಮುಸ್ಲಿಂ ಯುವಕನನ್ನು ನದಿಗೆ ಹಾರಿ ರಕ್ಷಿಸಿದ ಹಿಂದೂ ಯುವಕ