ETV Bharat / bharat

ಇಲ್ಲೊಂದು ಒಂದು ರೂಪಾಯಿ ಆಸ್ಪತ್ರೆ: ಬಡವರಿಗಾಗಿ ವೈದ್ಯರ ಉದಾರ ಸೇವೆ.. ಎಲ್ಲಿದೆ ಈ ಹಾಸ್ಪಿಟಲ್​? - ಅತ್ಯಲ್ಪ ಶುಲ್ಕದಲ್ಲಿ ಉತ್ತಮ ಚಿಕಿತ್ಸೆ

ಸಾಮಾನ್ಯವಾದ ಜ್ವರ, ನೆಗಡಿ ಎಂದು ಆಸ್ಪತ್ರೆಗೆ ಹೋದರೆ ವೈದ್ಯರ ಶುಲ್ಕ ಸೇರಿ ಮಾತ್ರೆ, ಚುಚ್ಚುಮದ್ದು, ಟಾನಿಕ್​ ಎಲ್ಲಾ ಸೇರಿ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಹಾಗಾಗಿ ಬಡವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಾರೆ. ಹೀಗಿರುವಾಗ ಇಲ್ಲೊಂದು ಆಸ್ಪತ್ರೆಯಲ್ಲಿ ಕೇವಲ ಒಂದು ರೂಪಾಯಿ ಪಡೆದು ಬಡವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇದೀಗ ಈ ಒಂದು ರೂಪಾಯಿ ಜಿಜಿ ಆಸ್ಪತ್ರೆ ತುಂಬಾ ಫೇಮಸ್​ ಆಗಿದೆ.

ತೆಲಂಗಾಣದಲ್ಲೊಂದು ಒಂದು ರೂಪಾಯಿ ಆಸ್ಪತ್ರೆ
ತೆಲಂಗಾಣದಲ್ಲೊಂದು ಒಂದು ರೂಪಾಯಿ ಆಸ್ಪತ್ರೆ
author img

By

Published : Sep 23, 2022, 4:17 PM IST

ಹೈದರಾಬಾದ್​​: ಇಲ್ಲಿನ ರಾಮ್ ನಗರದಲ್ಲಿರುವ ಗಂಗಯ್ಯ ಗಾರಿ ಆಸ್ಪತ್ರೆ (ಜಿಜಿ)ಯಲ್ಲಿ ಕೇವಲ ಒಂದು ರೂಪಾಯಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಷಯ ನಗರದೆಲ್ಲೆಡೆ ಹರಡುತ್ತಿದ್ದಂತೆ ಜಿಜಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯೂ ಹೆಚ್ಚಾಗಿದೆ. ಇದರಿಂದ ಸುತ್ತಮುತ್ತಲಿನ ಜನರು ಮಾತ್ರವಲ್ಲದೇ, ನಗರದ ವಿವಿಧ ಭಾಗಗಳಿಂದ ರೋಗಿಗಳು ಈ ಆಸ್ಪತ್ರೆಗೆ ಬರುತ್ತಿದ್ದಾರೆ. ಅತ್ಯಲ್ಪ ಶುಲ್ಕದಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತಿರುವ ಹಿನ್ನೆಲೆ ಹೆಚ್ಚು ಸಂಖ್ಯೆಯನ್ನು ಬಡ ರೋಗಿಗಳು ಬರುತ್ತಿದ್ದಾರೆ.

ಜಿಜಿ ಆಸ್ಪತ್ರೆಯಲ್ಲಿ ಆರ್ಥೋಪೆಡಿಕ್ ವಿಭಾಗ, ಸ್ತ್ರೀರೋಗ ವಿಭಾಗ, ಪೀಡಿಯಾಟ್ರಿಕ್, ಜನರಲ್ ಫಿಸಿಶಿಯನ್, ಜನರಲ್ ಸರ್ಜನ್ ಮತ್ತು ಡರ್ಮಟಾಲಜಿ ವಿಭಾಗಗಳಿವೆ. ಇವುಗಳೊಂದಿಗೆ ರಕ್ತ ಮತ್ತು ಮೂತ್ರ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅಲ್ಟ್ರಾಸೌಂಡ್ ಮತ್ತು ಎಕ್ಸ್-ರೇ ಘಟಕಗಳು ಸಹ ಲಭ್ಯವಿದೆ.

ಅಲ್ಲಿ ನಡೆಸುವ ಎಲ್ಲಾ ಲ್ಯಾಬ್ ಪರೀಕ್ಷೆಗಳಿಗೆ ಡಯಾಗ್ನೋಸ್ಟಿಕ್ ಸೆಂಟರ್​ನಲ್ಲಿ ಶೇ.50 ರಷ್ಟು ರಿಯಾಯಿತಿ ಶುಲ್ಕವನ್ನು ಮಾತ್ರ ಪಡೆಯಲಾಗುತ್ತಿದೆ ಎಂದು ಜಿಜಿ ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ. ವೈದ್ಯರ ಪರೀಕ್ಷೆ ಬಳಿಕ ಅಲ್ಲಿರುವ ಔಷಧಾಲಯದಲ್ಲಿ ಔಷಧ ಖರೀದಿಸಿದರೆ ಶೇ.40ರಷ್ಟು ರಿಯಾಯಿತಿ ನೀಡಲಾಗುತ್ತದೆ.

ಇದನ್ನೂ ಓದಿ: ದುಬಾರಿ ಆಸ್ಪತ್ರೆ ವೆಚ್ಚ ಭರಿಸಲು ಬೇಕೇ ಬೇಕು ಆರೋಗ್ಯ ವಿಮೆ

ಆಸ್ಪತ್ರೆಯಲ್ಲಿರುವ ಹಾಸಿಗೆಗಳಿಗೂ ಅತ್ಯಲ್ಪ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಸರಿಯಾಗಿ ಐದು ತಿಂಗಳ ಹಿಂದೆ ಆರಂಭವಾದಾಗ ಜಿ ಜಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ನಂತರ 300 ಒಪಿ ತಲುಪಿದೆ ಎನ್ನಲಾಗ್ತಿದೆ. ಸದ್ಯ OP 1,500 ತಲುಪಿದೆ.

ಅಧ್ಯಕ್ಷ ಗಂಗಾಧರ ಗುಪ್ತಾ ಮಾತನಾಡಿ, ಬಡವರಿಗೆ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡುವ ಆಲೋಚನೆಯೊಂದಿಗೆ ಗಂಗಯ್ಯ ಗಾರಿ ಆಸ್ಪತ್ರೆಯನ್ನು ಪ್ರಾರಂಭಿಸಲಾಗಿದೆ. ಆಸ್ಪತ್ರೆ ಆವರಣದಲ್ಲಿ ಹುಂಡಿ ಸಹ ಇಡಲಾಗಿದೆ. ಯಾರಾದರೂ ದೇಣಿಗೆ ನೀಡಿದ್ರೆ, ಆಸ್ಪತ್ರೆಯ ಅಭಿವೃದ್ಧಿಗೆ ಹಾಗೂ ವೈದ್ಯರ ಶುಲ್ಕಕ್ಕೆ ಖರ್ಚು ಮಾಡುವುದಾಗಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.