ಶ್ರೀನಗರ(ಜಮ್ಮು ಕಾಶ್ಮೀರ): ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಹೈಬ್ರಿಡ್ ಉಗ್ರಗಾಮಿಯನ್ನು ಹೊಡೆದುರುಳಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿ, ಶೋಪಿಯಾನ್ ಜಿಲ್ಲೆಯ ಹೆರ್ಮೈನ್ ಪ್ರದೇಶದಲ್ಲಿ ಉತ್ತರಪ್ರದೇಶದ ಇಬ್ಬರು ಕಾರ್ಮಿಕರ ಮೇಲೆ ಗ್ರೆನೇಡ್ ಎಸೆದು ಹತ್ಯೆ ಮಾಡಿದ್ದ ಆರೋಪದಡಿ ಬಂಧಿಸಲ್ಪಟ್ಟಿದ್ದ ಇಮ್ರಾನ್ ಬಶೀರ್ ಗನೈ ಹತನಾಗಿದ್ದಾನೆ.
ಬಂಧಿತ ಹೈಬ್ರಿಡ್ ಭಯೋತ್ಪಾದಕ ನೀಡಿದ ಮಾಹಿತಿ ಆಧಾರದ ಮೇಲೆ ಪೊಲೀಸ್ ಮತ್ತು ಭದ್ರತಾ ಪಡೆಗಳು ನಿರಂತರ ಕಾರ್ಯಾಚರಣೆ ಮುಂದುವರೆಸಿದವು. ಈ ವೇಳೆ ಇಮ್ರಾನ್ ಬಶೀರ್ ಗನೈ ಭಯೋತ್ಪಾದಕನ ಗುಂಡಿನ ದಾಳಿಯಿಂದ ಕೊಲ್ಲಲ್ಪಟ್ಟನು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಗ್ರೆನೇಡ್ ಎಸೆದು ಇಬ್ಬರು ಕಾರ್ಮಿಕರ ಹತ್ಯೆ.. ಎಲ್ಇಟಿ ಉಗ್ರನ ಸೆರೆಹಿಡಿದ ಸೇನೆ
ಉಗ್ರರ ಅಡಗುತಾಣ/ಸ್ಥಳದಿಂದ ದೋಷಾರೋಪಣೆಯ ಸಾಮಗ್ರಿಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಶೋಧ ಕಾರ್ಯಚರಣೆ ಮುಂದುವರೆದಿದೆ. ಇನ್ನೂ ಹೆಚ್ಚಿನ ವಿವರಗಳನ್ನು ಅನುಸರಿಸಲಾಗುವುದು ಎಂದು ಪೊಲೀಸರು ಟ್ವೀಟ್ನಲ್ಲಿ ತಿಳಿಸಿದ್ದಾರೆ.