ಮುಂಬೈ: ಯೂಟ್ಯೂಬರ್‌ನ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ 23.5 ಲಕ್ಷ ರೂ. ಬೇರೆಡೆಗೆ ವರ್ಗಾಯಿಸಿದ ಆರೋಪದ ಮೇಲೆ ಮೆಕ್ಯಾನಿಕಲ್ ಎಂಜಿನಿಯರ್‌ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೃತ್ಯ ಎಸಗಿದ ಆರೋಪಿಯನ್ನು ಲಲಿತ್ ದೇವ್ಕರ್ ಎಂದು ಗುರುತಿಸಲಾಗಿದೆ. ಸಾಮಾನ್ಯವಾಗಿ ವೆಬ್ ಸರಣಿಗಳು ಮತ್ತು ವಿವಿಧ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡುವ ಆಶಿಶ್ ಭಾಟಿಯಾ ಅವರು ಪ್ರತಿ ತಿಂಗಳು ಚಂದಾದಾರಿಕೆ ಮೂಲಕ ಪಾವತಿ ಹಣ ಪಡೆಯುತ್ತಿದ್ದರು. ಆದರೆ, ಅವರು ಏಪ್ರಿಲ್‌ನಲ್ಲಿ ಯಾವುದೇ ಪಾವತಿ ಸ್ವೀಕರಿಸಲಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.
ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಭಾಟಿಯಾ ಅವರಿಗೆ ಹ್ಯಾಕ್ ಮಾಡಲಾಗಿದೆ ಎಂಬುದು ಗಮನಕ್ಕೆ ಬಂದಿದೆ. ತದನಂತರ ಉತ್ತರ ಪ್ರದೇಶದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದರು.
ತನಿಖೆಯ ವೇಳೆ ದೇವ್ಕರ್ ಅವರು ತಮ್ಮ ಬ್ಯಾಂಕ್ ಖಾತೆ ಹ್ಯಾಕ್ ಮಾಡಿದ್ದಾರೆ. ಚಂದಾದಾರಿಕೆ ಮೊತ್ತವನ್ನು ತಮ್ಮ ಸ್ವಂತ ಖಾತೆಗೆ ತಿರುಗಿಸಿದ್ದಾರೆ. ದೇವ್ಕರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರಿಪಡಿಸಲಾಗಿದೆ. ಖಾತೆಯಿಂದ 20 ಲಕ್ಷ ರೂ. ಹಿಂದಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.