ETV Bharat / bharat

ಕಿವಿಯಲ್ಲಿ ನೋವು, ಶಿಳ್ಳೆ ಹೊಡೆದಂತೆ ಸದ್ದು, ಜುಮ್​ ಅಂದರೆ ಅದು ಒಮಿಕ್ರಾನ್​ ಸೋಂಕಿನ ಲಕ್ಷಣ!! - ಸ್ಟ್ಯಾನ್‌ಫೋರ್ಡ್ ವಿವಿಯಿಂದ ಒಮಿಕ್ರಾನ್​ ಪತ್ತೆ ಲಕ್ಷಣ ಅಧ್ಯಯನ

ಒಮಿಕ್ರಾನ್​ ತಳಿ ದೇಹದ ಹೃದಯ, ಮೆದುಳು, ಕಣ್ಣುಗಳಲ್ಲದೇ ಕಿವಿಯ ಮೇಲೂ ಪರಿಣಾಮ ಉಂಟು ಮಾಡುತ್ತಿದೆ. ವಿಶೇಷ ಮತ್ತು ಆತಂಕಕಾರಿ ಅಂಶವೆಂದರೆ ಹೊಸ ರೂಪಾಂತರಿಯು ಕೊರೊನಾ ಲಸಿಕೆ ಪಡೆದವರ ಮೇಲೂ ಸವಾರಿ ಮಾಡುತ್ತಿದೆ..

patients-tlif
ಒಮಿಕ್ರಾನ್​ ಸೋಂಕಿನ
author img

By

Published : Jan 22, 2022, 6:36 PM IST

ಕಿವಿಯಲ್ಲಿ ನೋವು, ಜುಮ್​ ಎನ್ನುವ ಅನುಭವ, ಶಿಳ್ಳೆ ಹಾಕಿದ ರೀತಿಯ ಸದ್ದು ವಿಪರೀತವಾಗಿದೆಯಾ?... ಹಾಗಿದ್ದರೆ ಅದು ಕೊರೊನಾದ ಹೊಸ ರೂಪಾಂತರಿ ಒಮಿಕ್ರಾನ್​ ಸೋಂಕಿನ ಲಕ್ಷಣವೇ ಸರಿ.

ಕೊರೊನಾದ ಹೊಸ ರೂಪಾಂತರಿ ಒಮಿಕ್ರಾನ್​ ಸೋಂಕಿನ ಗುಣಲಕ್ಷಣಗಳು ಸಾಮಾನ್ಯವಾಗಿ ಜ್ವರದ ಲಕ್ಷಣಗಳಂತೆಯೇ ಇವೆ. ಇದರಿಂದ ಒಮಿಕ್ರಾನ್​ ಅನ್ನು ಪತ್ತೆ ಹಚ್ಚುವಲ್ಲಿ ಸ್ವಲ್ಪ ಗೊಂದಲ ಉಂಟಾಗುವ ಸಾಧ್ಯತೆ ಇದೆ.

ಬ್ರಿಟನ್​ನ ​ಸ್ಟ್ಯಾನ್​ಫೋರ್ಡ್​ ವಿಶ್ವವಿದ್ಯಾಲಯದ ವಿಜ್ಞಾನಿಗಳು ಒಮಿಕ್ರಾನ್​ ಪತ್ತೆ ಹಚ್ಚುವ ಬಗ್ಗೆ ಅಧ್ಯಯನ ನಡೆಸಿದ್ದು, ಕಿವಿಯಲ್ಲಿ ಉಂಟಾಗುವ ಕಿರಿಕಿರಿಯಿಂದಲೂ ಒಮಿಕ್ರಾನ್​ ಪತ್ತೆ ಮಾಡಬಹುದು ಎಂದು ಕಂಡುಕೊಂಡಿದ್ದಾರೆ.

ಒಮಿಕ್ರಾನ್​ ತಳಿ ದೇಹದ ಹೃದಯ, ಮೆದುಳು, ಕಣ್ಣುಗಳಲ್ಲದೇ ಕಿವಿಯ ಮೇಲೂ ಪರಿಣಾಮ ಉಂಟು ಮಾಡುತ್ತಿದೆ. ವಿಶೇಷ ಮತ್ತು ಆತಂಕಕಾರಿ ಅಂಶವೆಂದರೆ ಹೊಸ ರೂಪಾಂತರಿಯು ಕೊರೊನಾ ಲಸಿಕೆ ಪಡೆದವರ ಮೇಲೂ ಸವಾರಿ ಮಾಡುತ್ತಿದೆ.

ಕಿವಿಯಲ್ಲಿ ನೋವುಂಟಾಗುವುದು, ಜುಮ್​ ಎನಿಸುವಿಕೆ, ಗಂಟೆ ಅಥವಾ ಶಿಳ್ಳೆ ಹಾಕಿದ ರೀತಿಯ ಸದ್ದು ಕೇಳಿಸಿದರೆ ಅದು ಒಮಿಕ್ರಾನ್​ನ ಲಕ್ಷಣಗಳಾಗಿವೆ. ನಿರ್ಲಕ್ಷ್ಯ ಮಾಡದೇ ಚಿಕಿತ್ಸೆಗೆ ಒಳಗಾಗಿ ಎಂದು ಅಧ್ಯಯನ ತಿಳಿಸಿದೆ.

ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಒಮಿಕ್ರಾನ್​ ಸೋಂಕಿತರ ಮೇಲೆ ಅಧ್ಯಯನ ನಡೆಸಿದಾಗ ಸೋಂಕಿತರು ಕಿವಿಯಲ್ಲಿ ನೋವು, ಜುಮ್ಮೆನಿಸುವಿಕೆ ಮತ್ತು ಸದ್ದಾಗುವುದನ್ನು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ: ಕೈರಾನಾದಿಂದ ಮನೆ ಮನೆ ಪ್ರಚಾರ ಆರಂಭಿಸಿದ ಅಮಿತ್ ಶಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.