ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಮಧ್ಯೆ ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಒಮಿಕ್ರಾನ್ ರೂಪಾಂತರಿ ಇದೀಗ ದಿನದಿಂದ ದಿನಕ್ಕೆ ತನ್ನ ವೇಗ ವಿಸ್ತರಿಸಿಕೊಳ್ಳುತ್ತಿದೆ. ಇದೇ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿರುವ ಕೇಂದ್ರ ಆರೋಗ್ಯ ಇಲಾಖೆ ಅನಗತ್ಯ ಪ್ರಯಾಣ ಹಾಗೂ ಜನಸಂದಣಿ ತಡೆಯುವಂತೆ ಸೂಚನೆ ನೀಡಿದೆ.
-
There are 101 Omicron cases across 11 states in the country: Lav Agrawal, Joint Secretary, Health Ministry pic.twitter.com/2OPjHBQ38b
— ANI (@ANI) December 17, 2021 " class="align-text-top noRightClick twitterSection" data="
">There are 101 Omicron cases across 11 states in the country: Lav Agrawal, Joint Secretary, Health Ministry pic.twitter.com/2OPjHBQ38b
— ANI (@ANI) December 17, 2021There are 101 Omicron cases across 11 states in the country: Lav Agrawal, Joint Secretary, Health Ministry pic.twitter.com/2OPjHBQ38b
— ANI (@ANI) December 17, 2021
ದೇಶದ 11 ರಾಜ್ಯಗಳಲ್ಲಿ 101 ಒಮಿಕ್ರಾನ್ ಸೋಂಕಿತ ಪ್ರಕರಣ ದಾಖಲಾಗಿದ್ದು, ದೇಶದ 19 ಜಿಲ್ಲೆಗಳಲ್ಲಿ ಕೊರೊನಾ ವೇಗವಾಗಿ ಹರಡುತ್ತಿದ್ದು, ಅಪಾಯದಲ್ಲಿವೆ ಎಂದು ಆರೋಗ್ಯ ಸಚಿವಾಲಯ ಎಚ್ಚರಿಸಿದೆ.
ಕೋವಿಡ್ ಮೂರನೇ ಅಲೆ ಎಚ್ಚರಿಕೆ ನೀಡಿರುವ ಆರೋಗ್ಯ ಸಚಿವಾಲಯ ಮಾಸ್ಕ್ ಬಳಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಅನಗತ್ಯ ಪ್ರಯಾಣ ತಡೆಯುವಂತೆ ಸೂಚನೆ ನೀಡಿದೆ. ಇದೇ ವೇಳೆ ಕೊರೊನಾ ಮಾರ್ಗಸೂಚಿ ಪಾಲನೆ ಮಾಡುವುದರ ಜೊತೆಗೆ ಸಾರ್ವಜನಿಕ ಸಮಾರಂಭಗಳಿಂದ ದೂರ ಉಳಿಯಲು ಮನವಿ ಮಾಡಿದೆ.
ದೆಹಲಿಯಲ್ಲಿ ನಿನ್ನೆ ಒಂದೇ ದಿನ 10 ಮಂದಿಯಲ್ಲಿ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದ್ದು ಮತ್ತಷ್ಟು ಆತಂಕ ಮೂಡಿಸಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದ್ದು, 40 ಜನರಲ್ಲಿ ಸೋಂಕು ಪತ್ತೆಯಾಗಿದೆ. ಉಳಿದಂತೆ ರಾಜಸ್ಥಾನದಲ್ಲಿ 17, ಕರ್ನಾಟಕ, ತೆಲಂಗಾಣದಲ್ಲಿ 8 ಪ್ರಕರಣ ದಾಖಲಾಗಿವೆ. ಇದರ ಜೊತೆಗೆ ಗುಜರಾತ್, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದಲ್ಲೂ ಹೊ ರೂಪಾಂತರ ವರದಿಯಾಗಿವೆ.
ಕೆಲ ರಾಜ್ಯಗಳಿಗೆ ಕೇಂದ್ರದ ಸೂಚನೆ
ಪ್ರಮುಖವಾಗಿ ಕೇರಳ, ಮಹಾರಾಷ್ಟ್ರ ಮಿಜೋರಾಂ, ನಾಗಾಲ್ಯಾಂಡ್, ರಾಜಸ್ಥಾನ, ಸಿಕ್ಕಿಂ, ಅರುಣಾಚಲಪ್ರದೇಶ ಹಾಗೂ ಪಶ್ಚಿಮ ಬಂಗಾಳದ ಕೆಲವೊಂದು ಜಿಲ್ಲೆಗಳಲ್ಲಿ ಶೇ. 5ರಿಂದ ಶೇ. 10ರ ಪ್ರಮಾಣದಲ್ಲಿ ಕೋವಿಡ್ ಸೋಂಕು ದಾಖಲಾಗುತ್ತಿದ್ದು, ಈ ಜಿಲ್ಲೆಗಳಲ್ಲಿ ಹೆಚ್ಚಿನ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಲಂಡನ್ನಲ್ಲಿ ಈಗಾಗಲೇ 11 ಸಾವಿರಕ್ಕೂ ಅಧಿಕ ಒಮಿಕ್ರಾನ್ ಪ್ರಕರಣ ದಾಖಲಾಗಿದ್ದು, ಬರುವ ದಿನಗಳಲ್ಲಿ ಭಾರತ ಸಹ ಇಂತಹ ತೊಂದರೆಗೊಳಗಾಗುವ ಸಾಧ್ಯತೆ ಇರುವ ಕಾರಣ ಈಗಿನಿಂದಲೇ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ತಿಳಿಸಿದೆ. ಪ್ರಮುಖವಾಗಿ ದಕ್ಷಿಣ ಆಫ್ರಿಕಾ, ನಾರ್ವೇ, ಕೆನಡಾ, ಯುಕೆಯಲ್ಲಿ ಪ್ರತಿದಿನ ಹೆಚ್ಚಿನ ಒಮಿಕ್ರಾನ್ ಪ್ರಕರಣ ಕಾಣಿಸಿಕೊಳ್ಳುತ್ತಿರುವ ಕಾರಣ, ಅಲ್ಲಿಂದ ಬರುತ್ತಿರುವ ಪ್ರವಾಸಿಗರ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ.
ಒಮಿಕ್ರಾನ್ ಅಪಾಯ ಎದುರಿಸುತ್ತಿರುವ ರಾಷ್ಟ್ರಗಳಿಂದ ಆಗಮಿಸುತ್ತಿರುವ ಪ್ರಯಾಣಿಕರಿಗೆ ಆರ್ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದ್ದು, ವರದಿ ಕೈ ಸೇರುವವರೆಗೂ ವಿಮಾನ ನಿಲ್ದಾಣದಿಂದ ಹೊರಬರಲು ಅನುಮತಿ ಇಲ್ಲ ಎಂದು ತಿಳಿಸಿದೆ.