ಭಿವಾನಿ (ಹರಿಯಾಣ): ನರ್ನಾಲ್ ಜಿಲ್ಲೆಯ ಸ್ಥಳೀಯರು ನಿರ್ಮಿಸಿದ್ದ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ದೇವಾಲಯವನ್ನು ಪುರಸಭೆ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ.
ಮುನ್ಸಿಪಲ್ ಕೌನ್ಸಿಲ್ ಅಧಿಕಾರಿ ಅಭಯ್ ಯಾದವ್ ನೇತೃತ್ವದಲ್ಲಿ ಪೊಲೀಸ್ ಭದ್ರತೆಯ ನಡುವೆ ದೇವಾಲಯವನ್ನು ನೆಲಸಮಗೊಳಿಸಿದ್ದು, ದೇವಾಲದೊಳಗಿದ್ದ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರ ಮೂರ್ತಿಯನ್ನ ವಶಕ್ಕೆ ಪಡೆದಿದ್ದಾರೆ.
ಈ ದೇವಸ್ಥಾನ ವಿವಾದಿತ ಸ್ಥಳದಲ್ಲಿದ್ದು, ಪಂಜಾಬ್ ಮತ್ತು ಹರಿಯಾಣ ಕೋರ್ಟ್ನಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ ಎಂದು ಪುರಸಭೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸ್ಥಳೀಯರು ಈ ವಿವಾದಿತ ಜಾಗದಲ್ಲೇ ದೇವಾಲಯ ನಿರ್ಮಿಸಿ ಬೆಳಗ್ಗೆ ಮತ್ತು ಸಂಜೆ ಆರತಿ ಬೆಳಗುತ್ತಿದ್ದರು. ಇದಕ್ಕೀಗ ಬ್ರೇಕ್ ಬಿದ್ದಿದೆ.
ಓದಿ: Video: ಪ್ರಿಯಕರನ ಮೇಲೆ ಕೋಪ.. ಮೆಟ್ರೋ ಸ್ಟೇಷನ್ನಲ್ಲಿ ಯುವತಿ ಆತ್ಮಹತ್ಯೆ ಯತ್ನ!