ETV Bharat / bharat

ಒಡಿಶಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: ಐವರು ದುರುಳರಿಂದ 6 ತಿಂಗಳು ಹೀನ ಕೃತ್ಯ! - ಒಡಿಸ್ಸಾ ಮೂಲದ ಬಾಲಕಿ ಸಾಮೂಹಿಕ ಅತ್ಯಾಚಾರ

ಸಂತ್ರಸ್ತೆ 2020ರ ಮಾರ್ಚ್‌ ತಿಂಗಳಲ್ಲಿ ಗೆಳತಿ ಜಮೀನಾಳನ್ನು ಭೇಟಿಯಾಗಲು ಹರಿಯಾಣದ ಹಿಸ್ಸಾರ್ ಬಂದಿದ್ದಳು. ಈ ವೇಳೆ ದುಷ್ಕರ್ಮಿಗಳು ಆಕೆಯ ಗೆಳತಿಯ ಸಹಾಯದಿಂದಲೇ ಅಪಹರಿಸಿ, ವಿವಿಧೆಡೆ ಕರೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು.

police station
ಪೊಲೀಸ್ ಠಾಣೆ
author img

By

Published : Apr 18, 2021, 7:33 PM IST

Updated : Apr 18, 2021, 7:39 PM IST

ಹಿಸಾರ್ (ಹರಿಯಾಣ): ಒಡಿಶಾ ಮೂಲದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಐವರು ಕಾಮುಕರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿ, ಬಲೆ ಬೀಸಿದ್ದಾರೆ.

ಪ್ರಕರಣದ ವಿವರ:

ಸಂತ್ರಸ್ತೆ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಆಕೆ 2020ರ ಮಾರ್ಚ್‌ ತಿಂಗಳಲ್ಲಿ ಗೆಳತಿ ಜಮೀನಾಳನ್ನು ಭೇಟಿಯಾಗಲು ಹರಿಯಾಣದ ಹಿಸ್ಸಾರ್ ಬಂದಿದ್ದಾಳೆ. ಈ ವೇಳೆ ಯುವತಿಯನ್ನು ದುರುಳರು ಅಪಹರಿಸಿದ್ದರು. ಬಳಿಕ ಆಕೆಯನ್ನು ರಾಜ್ಯದ ವಿವಿಧ ಕಡೆ ಕರೆದುಕೊಂಡು ಹೋಗಿದ್ದಾರೆ. ಹೀಗೆ ವಿವಿಧ ಪ್ರದೇಶಗಳಲ್ಲಿ ಬೆದರಿಕೆ ಹಾಕಿ ಆಕೆಯ ಮೇಲೆ ನಿರಂತರವಾಗಿ 6 ತಿಂಗಳ ಕಾಲ ಅತ್ಯಾಚಾರ ಮಾಡಿದ್ದಾರೆ.

ಯುವತಿಯೇ ಹೇಳಿರುವ ಪ್ರಕಾರ, ಯುವತಿಯನ್ನು ಬೇರೆ ಬೇರೆ ಯುವಕರಿಗೆ ವರ್ಗಾಯಿಸಿ, ಪ್ರಾಣ ಬೆದರಿಕೆ ಹಾಕಿ ದುಷ್ಕರ್ಮಿಗಳು ಅತ್ಯಾಚಾರಕ್ಕೆ ಒಳಪಡಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದೆ ರಿಂಕು, ವಿಜಯ್, ದೇವಾ, ಗೆಳತಿ ಜಮೀನಾ ಮತ್ತು ನರ್ಮಿಳಾ ಎಂಬ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

(ಸಂತ್ರಸ್ಥೆಯ ಖಾಸಗಿ ಮಾಹಿತಿಯನ್ನು ಕಾಪಾಡುವ ಬಗ್ಗೆ ಸುಪ್ರೀಂಕೋರ್ಟ್‌ ನಿರ್ದೇಶನವಿದೆ. ಹಾಗಾಗಿ, ವರದಿಯಲ್ಲಿ ಸಂತ್ರಸ್ತೆಯ ಹೆಸರು ಸೇರಿದಂತೆ ಇನ್ನುಳಿದ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.)

Last Updated : Apr 18, 2021, 7:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.