ETV Bharat / bharat

ಒಡಿಶಾ ರೈಲು ಅಪಘಾತ: 40 ಜನರು ವಿದ್ಯುತ್​ ಶಾಕ್​ನಿಂದಲೇ ಮೃತಪಟ್ಟಿರುವುದು ಬೆಳಕಿಗೆ! - ಕೆಲ ರಾಜ್ಯಗಳಿಗೆ ಮಾಹಿತಿ

ಒಡಿಶಾದ ರೈಲು ದುರಂತದಲ್ಲಿ ಮೊತ್ತೊಂದು ಭಯಾನಕ ಸಂಗತಿ ಹೊರ ಬಿದ್ದಿದೆ. ಸಾವನ್ನಪ್ಪಿರುವವರ ಪೈಕಿಯಲ್ಲಿ 40 ಜನರು ವಿದ್ಯುತ್​ ಶಾಕ್​ನಿಂದ ಮೃತಪಟ್ಟಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

Odisha train accident  40 people died due to electric shock  Odisha train accident update  ಒಡಿಶಾ ರೈಲು ಅಪಘಾತ  ವಿದ್ಯುತ್​ ಶಾಕ್​ನಿಂದಲೇ ಮೃತಪಟ್ಟಿರುವುದು ಬೆಳಕಿಗೆ  ಒಡಿಶಾದ ರೈಲು ದುರಂತ  ರೈಲು ದುರಂತದಲ್ಲಿ ಮೊತ್ತೊಂದು ಭಯಾನಕ ಸಂಗತಿ  ರೈಲು ದುರಂತದಲ್ಲಿ ಮೊತ್ತೊಂದು ಭಯಾನಕ ಸಂಗತಿ  ಕೋರಮಂಡಲ್ ಎಕ್ಸ್‌ಪ್ರೆಸ್ ಅಪಘಾತ  ಬಾಲೇಶ್ವರದ ಸರ್ಕಾರಿ ರೈಲ್ವೆ ಪೊಲೀಸ್ ಠಾಣೆ  ಒಡಿಶಾದ ಬಾಲೇಶ್ವರದಲ್ಲಿ ಸಂಭವಿಸಿದ ಅಪಘಾತ  ಕೆಲ ರಾಜ್ಯಗಳಿಗೆ ಮಾಹಿತಿ  ಡಿಎನ್ಎ ಮಾದರಿಗಳ ಸಂಗ್ರಹ
40 ಜನರು ವಿದ್ಯುತ್​ ಶಾಕ್​ನಿಂದಲೇ ಮೃತಪಟ್ಟಿರುವುದು ಬೆಳಕಿಗೆ
author img

By

Published : Jun 7, 2023, 10:00 AM IST

ಭುವನೇಶ್ವರ/ ಕಟಕ್: ಕೋರಮಂಡಲ್ ಎಕ್ಸ್‌ಪ್ರೆಸ್ ಅಪಘಾತಕ್ಕೀಡಾಗಿ ವಿದ್ಯುತ್ ಸ್ಪರ್ಶದಿಂದ ಸುಮಾರು 40 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಬಾಲೇಶ್ವರದ ಸರ್ಕಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ಇದೇ ತಿಂಗಳ 2 ರಂದು ಒಡಿಶಾದ ಬಾಲೇಶ್ವರದಲ್ಲಿ ಸಂಭವಿಸಿದ ಅಪಘಾತದಲ್ಲಿ ತುಂಡರಿಸಿದ ತಂತಿಗಳು ಕೆಲವು ರೈಲಿನ ಬೋಗಿಗಳಿಗೆ ತಾಗಿ ಅದರಲ್ಲಿದ್ದವರಿಗೆ ಆಘಾತವನ್ನುಂಟು ಮಾಡಿದೆ. ವಿದ್ಯುತ್ ಕಂಬಗಳು ಧರೆಗುರುಳಿದ್ದರಿಂದ ಈ ಘಟನೆ ನಡೆದಿರಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ವೈದ್ಯರು ಮೃತ ದೇಹಗಳನ್ನು ಪರೀಕ್ಷಿಸಿದಾಗ ಹಲವರ ದೇಹಗಳಲ್ಲಿ ಯಾವುದೇ ಬಾಹ್ಯ ಗಾಯಗಳು ಕಂಡು ಬಂದಿಲ್ಲ.

Odisha train accident  40 people died due to electric shock  Odisha train accident update  ಒಡಿಶಾ ರೈಲು ಅಪಘಾತ  ವಿದ್ಯುತ್​ ಶಾಕ್​ನಿಂದಲೇ ಮೃತಪಟ್ಟಿರುವುದು ಬೆಳಕಿಗೆ  ಒಡಿಶಾದ ರೈಲು ದುರಂತ  ರೈಲು ದುರಂತದಲ್ಲಿ ಮೊತ್ತೊಂದು ಭಯಾನಕ ಸಂಗತಿ  ರೈಲು ದುರಂತದಲ್ಲಿ ಮೊತ್ತೊಂದು ಭಯಾನಕ ಸಂಗತಿ  ಕೋರಮಂಡಲ್ ಎಕ್ಸ್‌ಪ್ರೆಸ್ ಅಪಘಾತ  ಬಾಲೇಶ್ವರದ ಸರ್ಕಾರಿ ರೈಲ್ವೆ ಪೊಲೀಸ್ ಠಾಣೆ  ಒಡಿಶಾದ ಬಾಲೇಶ್ವರದಲ್ಲಿ ಸಂಭವಿಸಿದ ಅಪಘಾತ  ಕೆಲ ರಾಜ್ಯಗಳಿಗೆ ಮಾಹಿತಿ  ಡಿಎನ್ಎ ಮಾದರಿಗಳ ಸಂಗ್ರಹ
40 ಜನರು ವಿದ್ಯುತ್​ ಶಾಕ್​ನಿಂದಲೇ ಮೃತಪಟ್ಟಿರುವುದು ಬೆಳಕಿಗೆ

ಕ್ಷೇತ್ರಕ್ಕೆ ಸಿಬಿಐ: ಉದ್ದೇಶಪೂರ್ವಕ ಯತ್ನ ಮತ್ತು ಕ್ರಿಮಿನಲ್ ನಿರ್ಲಕ್ಷ್ಯ ನಡೆದಿದೆ ಎಂದು ಶಂಕಿಸಿ ಘಟನೆಯ ತನಿಖೆಯ ಜವಾಬ್ದಾರಿಯನ್ನು ಸರ್ಕಾರವು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಿದ ನಂತರ ಕೇಂದ್ರೀಯ ತನಿಖಾ ದಳ (ಸಿಬಿಐ) ಮಂಗಳವಾರ ಮಧ್ಯಾಹ್ನ 2.15 ಕ್ಕೆ ಔಪಚಾರಿಕವಾಗಿ ಪ್ರಕರಣ ದಾಖಲಿಸಿದೆ. ಯಾರನ್ನಾದರೂ ಪ್ರಶ್ನಿಸುವುದು ಮತ್ತು ಸಾಕ್ಷ್ಯವನ್ನು ಸಂಗ್ರಹಿಸುವುದು ಅತ್ಯಗತ್ಯ. ಜಂಟಿ ನಿರ್ದೇಶಕ ವಿಭವ್ ಕುಮಾರ್ ಚೌಧರಿ ನೇತೃತ್ವದ ಆರು ಅಧಿಕಾರಿಗಳ ತಂಡವು ಬಾಲೇಶ್ವರದಲ್ಲಿ ಅಪಘಾತ ಸ್ಥಳಕ್ಕೆ ತಲುಪಿತ್ತು.

ಹಲವಾರು ಸಿಬ್ಬಂದಿಯಿಂದ ವಿವರಗಳನ್ನು ಕೇಳಲಾಯಿತು. ರಾಜ್ಯ ಪೊಲೀಸರು ಸಾಕ್ಷ್ಯ, ಹೇಳಿಕೆಗಳು ಮತ್ತು ಅಪಘಾತದ ಸ್ವರೂಪವನ್ನು ಪರಿಶೀಲಿಸಿದ್ದಾರೆ. ಮುಖ್ಯ ಮಾರ್ಗಕ್ಕೆ ನಿಗದಿಪಡಿಸಿದ ಮಾರ್ಗವನ್ನು ಲೂಪ್ ಲೈನ್‌ಗೆ ಬದಲಾಯಿಸಲು ಯಾರದಾದ್ರೂ ಕೈವಾಡ ನಡೆದಿದೆಯಾ ಎಂಬುದು ಎಂದು ರೈಲ್ವೆ ಅಧಿಕಾರಿಯೊಬ್ಬರು ತೀರ್ಮಾನಿಸಿದ್ದಾರೆ. ಭಾನುವಾರ ರಾತ್ರಿಯಿಂದ ಬಹನಾಗಾ ಬಜಾರ್ ರೈಲು ನಿಲ್ದಾಣದ ಮೂಲಕ 70 ರೈಲುಗಳು ಸಂಚರಿಸಿದವು.

ಕೆಲ ರಾಜ್ಯಗಳಿಗೆ ಮಾಹಿತಿ: ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆಯಾಗದ ಕಾರಣ ಎಪಿ, ತೆಲಂಗಾಣ, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸ್‌ಗಢ, ಬಿಹಾರ ಮತ್ತು ತಮಿಳುನಾಡು ರಾಜ್ಯಗಳಿಗೆ ಮಾಹಿತಿ ರವಾನಿಸಲಾಗಿದೆ ಎಂದು ಖುರ್ದಾ ರಸ್ತೆ ಡಿಆರ್‌ಎಂ ರಿಂಕೇಶ್ ರಾಯ್ ತಿಳಿಸಿದ್ದಾರೆ. ಆಯಾ ರಾಜ್ಯಗಳ ಯಾರಾದರೂ ನಾಪತ್ತೆಯಾಗಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಡಿಎನ್ಎ ಮಾದರಿಗಳ ಸಂಗ್ರಹ: ಮತ್ತೊಂದೆಡೆ- ಒಡಿಶಾ ಸರ್ಕಾರವು ಡಿಎನ್ಎ ಮಾದರಿಗಳ ಸಂಗ್ರಹವನ್ನು ಪ್ರಾರಂಭಿಸಿದೆ. ಭುವನೇಶ್ವರ್ ಏಮ್ಸ್ ಕುಟುಂಬ ಸದಸ್ಯರಿಂದ ಇವುಗಳನ್ನು ತೆಗೆದುಕೊಂಡು ಸತ್ತವರ ಡಿಎನ್‌ಎಗೆ ಹೊಂದಿಸುವ ಕೆಲಸವನ್ನು ಕೈಗೆತ್ತಿಕೊಂಡಿದೆ. ಜಾರ್ಖಂಡ್‌ನ ನಿವಾಸಿಯೊಬ್ಬರು ಉಪೇಂದ್ರ ಕುಮಾರ್ ಶರ್ಮಾ ಅವರ ದೇಹವನ್ನು ಹಚ್ಚೆ ಆಧಾರದ ಮೇಲೆ ಸೋಮವಾರ ಗುರುತಿಸಲಾಗಿದೆ. ಆದರೆ ಆ ಮೃತದೇಹವನ್ನು ಮಂಗಳವಾರ ಬೇರೆಯವರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ. ಡಿಎನ್‌ಎ ಪರೀಕ್ಷೆಯಿಂದ ಏನು ಪ್ರಯೋಜನ ಎಂದ ಕೆಲವರು ಪ್ರಶ್ನಿಸಿದ್ದಾರೆ. ಅಗತ್ಯ ಬಿದ್ದಲ್ಲಿ ಮೃತದೇಹಗಳನ್ನು ಆರು ತಿಂಗಳವರೆಗೆ ಸಂರಕ್ಷಿಸಲು ಐದು ಶೀತಲಕೃತ ಕಂಟೈನರ್‌ಗಳನ್ನು ಏರ್ಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾವಿನ ಸಂಖ್ಯೆ 288: ಒಡಿಶಾದ ಮುಖ್ಯ ಕಾರ್ಯದರ್ಶಿ (ಸಿಎಸ್) ಪ್ರದೀಪ್ ಕುಮಾರ್ ಜೆನಾ ಭುವನೇಶ್ವರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 288 ಕ್ಕೆ ಏರಿದೆ. ಈವರೆಗೆ 205 ಮೃತದೇಹಗಳನ್ನು ಗುರುತಿಸಲಾಗಿದ್ದು, ಉಳಿದವರ ವಿವರ ತಿಳಿದುಬಂದಿಲ್ಲ ಎಂದರು. 193 ಮೃತದೇಹಗಳನ್ನು ಭುವನೇಶ್ವರಕ್ಕೆ, 94 ಬಾಲೇಶ್ವರಕ್ಕೆ ಮತ್ತು ಒಂದನ್ನು ಭದ್ರಕ್‌ಗೆ ಸ್ಥಳಾಂತರಿಸಲಾಗಿದೆ ಎಂದು ವಿವರಿಸಿದರು.

ಓದಿ: ಮತ್ತೊಂದು ರೈಲು ದುರಂತ: ಭಾರತ್ ಪೆಟ್ರೋಲಿಯಂ ಡಿಪೋ ಬಳಿ ಹಳಿತಪ್ಪಿದ ಗೂಡ್ಸ್ ರೈಲಿನ 2 ಬೋಗಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.