ETV Bharat / bharat

ಹೊಸ ವರ್ಷಾಚರಣೆಯ ಅಡುಗೆಗೆ ಮೇಕೆಗಳ ಕದ್ದ ಪೊಲೀಸಪ್ಪ - ಹೊಸ ವರ್ಷಕ್ಕೆ ಪೊಲೀಸರಿಂದ ಮೇಕೆ ಕಳ್ಳತನ

ಒಡಿಶಾದ ಬಲಂಗೀರ್ ಜಿಲ್ಲೆಯ ಸಿಂಧೇಕೆಲಾ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮೇಕೆಗಳನ್ನು ಕದ್ದ ಆರೋಪವಿದ್ದು, ಆತನನ್ನು ಅಮಾನತು ಮಾಡಲಾಗಿದೆ.

Odisha cop steals goats to throw New Year feast
ಹೊಸ ವರ್ಷಾಚರಣೆಯ ಅಡುಗೆಗೆ ಮೇಕೆಗಳ ಕದ್ದ ಪೊಲೀಸಪ್ಪ
author img

By

Published : Jan 2, 2022, 3:52 AM IST

ಬಲಂಗೀರ್, ಒಡಿಶಾ : ಹೊಸ ವರ್ಷಾಚರಣೆಯನ್ನು ಅದ್ಧೂರಿಯಾಗಿ ಮಾಡಬೇಕೆಂದು ಕೆಲವರ ಆಸೆ. ಆದರೆ ಇಲ್ಲೊಬ್ಬ ಪೊಲೀಸಪ್ಪ ಮೇಕೆಗಳನ್ನು ಕದ್ದು, ಭರ್ಜರಿ ಭೋಜನ ತಯಾರಿಸಿ ತಿಂದು, ಈಗ ಅಮಾನತುಗೊಂಡಿದ್ದಾನೆ.

ಹೌದು, ಒಡಿಶಾದ ಬಲಂಗೀರ್ ಜಿಲ್ಲೆಯ ಸಿಂಧೇಕೆಲಾ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸುಮನ್ ಮಲ್ಲಿಕ್ ಎಂಬಾತ ತನ್ನ ಸ್ನೇಹಿತರೊಂದಿಗೆ ಸೇರಿ ಹೊಸ ವರ್ಷಕ್ಕೆ ಎರಡು ಮೇಕೆಗಳನ್ನು ಕದ್ದಿದ್ದಾನೆ.

ಇದು ಮೇಕೆಗಳ ಮಾಲೀಕರಿಗೆ ಗೊತ್ತಾಗಿದ್ದು, ಮೇಕೆಗಳನ್ನು ಬಿಟ್ಟುಬಿಡುವಂತೆ ಮನವಿ ಮಾಡಿದ್ದಾರೆ. ಆದರೆ ಒಪ್ಪದ ಸುಮನ್ ಮಲಿಕ್ ಹೊಸ ವರ್ಷಕ್ಕೆ ಮೇಕೆಗಳನ್ನು ಕಡಿದು ಭಾರಿ ಭೋಜನ ತಯಾರಿಸಿ, ಸವಿದಿದ್ದಾನೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಗ್ರಾಮಸ್ಥರು ಸಿಂಧೇಕೆಲಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಲಂಗೀರ್​ ಪೊಲೀಸ್ ವರಿಷ್ಠಾಧಿಕಾರಿಯು ಸುಮನ್ ಮಲ್ಲಿಕ್​ನನ್ನು ಅಮಾನತುಗೊಳಿಸಿ, ತನಿಖೆಗೆ ಆದೇಶಿಸಿದ್ದಾರೆ.

ಇದನ್ನೂ ಓದಿ: Viral Video: ಬೃಹತ್ ಹಾವು ಅಡಿಕೆ ಮರ ಹತ್ತೋದು ನೋಡಿದ್ದೀರಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.