ಪೂರ್ವ ಚಂಪಾರಣ್ (ಬಿಹಾರ): ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಅಶ್ಲೀಲ ನೃತ್ಯವನ್ನು ಪ್ರದರ್ಶಿಸಲಾಗಿದೆ. ಆರ್ಕೆಸ್ಟ್ರಾ ಹುಡುಗಿಯರ ಈ ನೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಎಸ್‌ಡಿಪಿಒ ಸಾಗರ್ ಕುಮಾರ್, ಅಶ್ಲೀಲ ನೃತ್ಯ ಮಾಡಿಸಿರುವ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ಪಲನ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಆನಂದ್ ಸಾಗರ್ ಗಮ್ಹರಿಯಾದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಳೆದ ಮೇ 15 ರಂದು ಆರ್ಕೆಸ್ಟ್ರಾ ಆಯೋಜಿಸಲಾಗಿದ್ದು ಈ ಸಂದರ್ಭದಲ್ಲಿ ಅಶ್ಲೀಲ ನೃತ್ಯ ಪ್ರದರ್ಶನ ನಡೆದಿದೆ.
ಶಿಕ್ಷಣ ಇಲಾಖೆಯ ಸೂಚನೆಗಳ ನಂತರ ಪ್ರಾಥಮಿಕ ಶಾಲಾ ಶಿಕ್ಷಕ ವಜೀರ್ ಮಿಯಾನ್ ಅವರ ಹೇಳಿಕೆಯ ಮೇಲೆ ಆರ್ಕೆಸ್ಟ್ರಾ ಆಯೋಜಕರು ಮತ್ತು ನೃತ್ಯ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: 34 ಗಂಟೆಯಲ್ಲಿ 472 KM ಸೈಕ್ಲಿಂಗ್... ಲೆಫ್ಟಿನೆಂಟ್ ಕರ್ನಲ್ ಗಿನ್ನಿಸ್ ದಾಖಲೆ