ETV Bharat / bharat

ಬ್ಯಾಂಕ್​ಗೆ ವಂಚನೆ ಆರೋಪ: ಮಹಾರಾಷ್ಟ್ರ ವಿಧಾನ ಪರಿಷತ್​ ಪ್ರತಿಪಕ್ಷ ನಾಯಕನಿಗೆ ನೋಟಿಸ್ - Notice to Pravin Darekar

ಮುಂಬೈ ಜಿಲ್ಲಾ ಸಹಕಾರ ಸಂಘದ ಚುನಾವಣೆಗೆ ಕಾರ್ಮಿಕ ಕೋಟಾದಲ್ಲಿ ಸ್ಪರ್ಧಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪವನ್ನು ಪ್ರವೀಣ್ ದಾರೆಕರ್ ಎದುರಿಸುತ್ತಿದ್ದಾರೆ. ಈ ಸಂಬಂಧ ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಕೇಸ್​ ದಾಖಲಾಗಿದೆ.

BJP leader Pravin Darekar
ಬಿಜೆಪಿ ಮುಖಂಡ ಪ್ರವೀಣ್ ದಾರೆಕರ್
author img

By

Published : Apr 3, 2022, 3:15 PM IST

ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಬಿಜೆಪಿ ನಾಯಕನ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಬ್ಯಾಂಕ್​ಗೆ ವಂಚನೆ ಪ್ರಕರಣದಲ್ಲಿ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ, ಬಿಜೆಪಿ ನಾಯಕ ಪ್ರವೀಣ್ ದಾರೆಕರ್ ಅವರಿಗೆ ಮುಂಬೈ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಮುಂಬೈ ಜಿಲ್ಲಾ ಸಹಕಾರ ಸಂಘದ ಚುನಾವಣೆಗೆ ಕಾರ್ಮಿಕ ಕೋಟಾದಲ್ಲಿ ಸ್ಪರ್ಧಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪವನ್ನು ಪ್ರವೀಣ್ ದಾರೆಕರ್ ಎದುರಿಸುತ್ತಿದ್ದಾರೆ. ಈ ಸಂಬಂಧ ಆಮ್​ ಆದ್ಮಿ ಪಕ್ಷದ ಮುಖಂಡ ಧನಂಜಯ್ ಶಿಂಧೆ ನೀಡಿದ ದೂರಿನ ಮೇರೆಗೆ ಮಾರ್ಚ್​ 14ರಂದು ಮುಂಬೈನ ಮಾತಾ ರಮಾಬಾಯಿ ಅಂಬೇಡ್ಕರ್ ಪೊಲೀಸ್ ಠಾಣೆಯಲ್ಲಿ ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಕೇಸ್​ ದಾಖಲಾಗಿದೆ.

ಇದೇ ಪ್ರಕರಣದ ಸಂಬಂಧ ಪ್ರವೀಣ್ ದಾರೆಕರ್ ನಿರೀಕ್ಷಣಾ ಜಾಮೀನಿಗಾಗಿ ಕೋರ್ಟ್​ ಮೊರೆ ಹೋಗಿದ್ದರು. ಆದರೆ, ಮಾ.25ರಂದು ಮುಂಬೈ ಸೆಷನ್ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತ್ತು. ಹೀಗಾಗಿ ಅವರು ತಮ್ಮ ಬಂಧನದಿಂದ ರಕ್ಷಣೆ ಕೋರಿ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಇದನ್ನೂ ಓದಿ: ಎಂಎನ್​​ಎಸ್​ ಕಚೇರಿ ಬಳಿ ಧ್ವನಿವರ್ಧಕ ಅಳವಡಿಕೆ.. ಹನುಮಾನ್ ಚಾಲೀಸಾ ಪಠಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.