ಪ್ರಯಾಗ್ರಾಜ್( ಉತ್ತರ ಪ್ರದೇಶ): ಮಹಾಮಾರಿ ಕೊರೊನಾ ಸಂದರ್ಭದಲ್ಲಿ ವಿವಿಧ ಆಸ್ಪತ್ರೆಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಇದೀಗ ಅಂತಹ ಘಟನೆ ಉತ್ತರ ಪ್ರದೇಶದಲ್ಲೂ ನಡೆದಿರುವುದು ಬೆಳಕಿಗೆ ಬಂದಿದೆ.
ಮಹಾಮಾರಿ ಕೊರೊನಾ ವೈರಸ್ ತಗುಲಿದ್ದ ಕಾರಣ 82 ವರ್ಷದ ಮೋತಿಲಾಲ್ ಅವರನ್ನ ಏಪ್ರಿಲ್ 13ರಂದು ಕೋವಿಡ್ ಕೇರ್ ಸೆಂಟರ್ಗೆ ದಾಖಲು ಮಾಡಲಾಗಿತ್ತು. ಏಪ್ರಿಲ್ 21ರವರೆಗೆ ಕುಟುಂಬಸ್ಥರು ನೀಡುತ್ತಿದ್ದ ಆಹಾರ, ಹಣ್ಣಿನ ರಸ ಹಾಗೂ ಬಟ್ಟೆಯನ್ನ ಆಸ್ಪತ್ರೆ ಸಿಬ್ಬಂದಿ ಆತನಿಗೆ ನೀಡುತ್ತಿದ್ದರು. ಇದಾದ ಬಳಿಕ ಆತ ಆಹಾರ ಹಾಗೂ ಬಟ್ಟೆ ನಿರಾಕರಣೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ವೇಳೆ, ತಂದೆಯೊಂದಿಗೆ ಮಾತನಾಡಲು ಅವಕಾಶ ನೀಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಆದರೆ, ಕೋವಿಡ್ ವಾರ್ಡ್ನಲ್ಲಿ ತಮ್ಮ ತಂದೆ ಇಲ್ಲದಿರುವುದನ್ನ ನೋಡಿ ಆಘಾತಕ್ಕೊಳಗಾಗಿದ್ದಾರೆ. ಈ ವೇಳೆ ಪ್ರಶ್ನೆ ಮಾಡಿದಾಗ ಚಿಕಿತ್ಸೆಗೆ ಸ್ಪಂದಿಸದೇ ಅವರು ಏಪ್ರಿಲ್ 17ರಂದು ಸಾವನ್ನಪ್ಪಿದ್ದಾಗಿ ತಿಳಿಸಿದ್ದಾರೆ. ಜತೆಗೆ ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಈಗಾಗಲೇ ಅವರ ಅಂತ್ಯಕ್ರಿಯೆ ಸಹ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
![UP man](https://etvbharatimages.akamaized.net/etvbharat/prod-images/11517562_236_11517562_1619226627250_2404newsroom_1619264439_574.png)
ಇದನ್ನೂ ಓದಿ: ಗರ್ಲ್ಫ್ರೆಂಡ್ ಕದ್ದ 'ರೆಮ್ಡೆಸಿವಿರ್' ಕಾಳ ಸಂತೆಯಲ್ಲಿ ಮಾರಾಟ.. ನರ್ಸಿಂಗ್ ಸಿಬ್ಬಂದಿ ಅರೆಸ್ಟ್!
ಆಸ್ಪತ್ರೆ ನಿರ್ಲಕ್ಷ್ಯದಿಂದ ತಂದೆ ಅಂತ್ಯಸಂಸ್ಕಾರ ನಡೆಸಲು ಸಾಧ್ಯವಾಗದಿರುವುದಕ್ಕೆ ಕುಟುಂಬದ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ. ಜತೆಗೆ ತಮ್ಮ ತಂದೆ ಸಾವಿಗೆ ಆಸ್ಪತ್ರೆ ನೇರ ಹೊಣೆಯಾಗಿದ್ದು, ಇದಕ್ಕೆ ನ್ಯಾಯ ದೊರಕಿಸುವಂತೆ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.