ETV Bharat / bharat

ಗುಜರಾತ್​​​ ಕ್ಯಾಬಿನೆಟ್​​ನಲ್ಲಿ ಎಲ್ಲರೂ ಹೊಸಬರೇ: ರೂಪಾಣಿ ಸಂಪುಟದ ಒಬ್ಬರಿಗೂ ಸಿಗದ ಮಂತ್ರಿಗಿರಿ! - ಗುಜರಾತ್​ನಲ್ಲಿ ನೂತನ ಸಚಿವ ಸಂಪುಟ

ಗುಜರಾತ್​ನಲ್ಲಿ ನೂತನವಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಎಲ್ಲ ಸಚಿವರೂ ಹೊಸಬರೇ ಆಗಿದ್ದು, ಈ ಹಿಂದೆ ವಿಜಯ್​ ರೂಪಾಣಿ ಸಂಪುಟದಲ್ಲಿದ್ದ ಯಾವುದೇ ಮಂತ್ರಿಗಳಿಗೆ ಮಣೆ ಹಾಕಿಲ್ಲ.

gujarat cabinet
gujarat cabinet
author img

By

Published : Sep 16, 2021, 7:35 PM IST

ಗಾಂಧಿನಗರ(ಗುಜರಾತ್​): ಗುಜರಾತ್​ ರಾಜಕೀಯದಲ್ಲಿ ದಿಢೀರ್​ ಬೆಳವಣಿಗೆ ನಡೆದ ಪರಿಣಾಮ ಸಿಎಂ ಸ್ಥಾನಕ್ಕೆ ವಿಜಯ್ ರೂಪಾಣಿ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್​ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಇದಾದ ಮೂರು ದಿನಗಳ ಬಳಿಕ ನೂತನ ಸಚಿವ ಸಂಪುಟ ರಚನೆಯಾಗಿದ್ದು, 24 ಮಂದಿ ನೂತನ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ಗುಜರಾತ್​​​ ಕ್ಯಾಬಿನೆಟ್​​ನಲ್ಲಿ ಎಲ್ಲರೂ ಹೊಸಬರೇ!

ಗಾಂಧಿನಗರದಲ್ಲಿರುವ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಆಚಾರ್ಯ ದೇವವೃತ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

ಹೊಸಬರಿಗೆ ಮಣೆ

ಗುಜರಾತ್​ನಲ್ಲಿ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವಿಜಯ್​ ರೂಪಾಣಿ ಸಂಪುಟದ ಯಾವುದೇ ಸಚಿವರಿಗೂ ಭೂಪೇಂದ್ರ ಪಟೇಲ್​​ ಸಂಪುಟದಲ್ಲಿ ಸ್ಥಾನ ನೀಡಿಲ್ಲ. ಮುಂದಿನ ವರ್ಷ ನಡೆಯಲಿರುವ ಗುಜರಾತ್​ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಎಲ್ಲ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಸಂಪುಟ ಸಚಿವರಾಗಿ ರಾಜೇಂದ್ರ ತ್ರಿವೇದಿ, ಜಿತು ವಾಘನಿ, ಋಷಿಕೇಶ ಪಟೇಲ್​, ರಾಘವ್​​ಜಿ ಪಟೇಲ್​, ಪೂರ್ಣೇಶ್​ ಮೋದಿ, ಕಾನುಭಾಯಿ ದೇಸಾಯಿ, ಕಿರೀಟ್​ಸಿನ್ಹಾ ರಾಣಾ, ನರೇಶ್​ ಪಟೇಲ್​, ಪ್ರದೀಪ್​ಸಿನ್ಹ್​ ಪಾರ್ಮಾರ್​ ಮತ್ತು ಅರ್ಜುನ್​ ಸಿಂಗ್​ ಚೌಹಾಣ್​ ಪ್ರಮಾಣ ಸ್ವೀಕರಿಸಿದ್ದಾರೆ.

Gujarat CM
ಗುಜರಾತ್ ನೂತನ ಸಿಎಂ ಭೂಪೇಂದ್ರ ಪಟೇಲ್​

ಉಳಿದಂತೆ ರಾಜ್ಯ ದರ್ಜೆಯ ಸ್ಥಾನಮಾನದೊಂದಿಗೆ ಹರ್ಷ ಸಾಂಘ್ವಿ, ಜಗದೀಶ್​ ಪಾಂಚಾಲ್​, ಬ್ರಿಜೇಶ್​ ಮೆರ್ಜಾ, ಜಿತು ಚೌಧರಿ, ಮನೀಶಾ ವಾಕಿಲ್​, ಮುಕೇಶ್​ ಪಟೇಲ್​, ನಿಮಿಶಾ ಸುತಾರ್​, ಅರವಿಂದ್ ರೈಯಾನಿ, ಕುಬೇರ್ ದಿಂಡೋರ್, ಕೀರ್ತಿಸಿನ್ಹ ವಘೇಲಾ, ರಾಜೇಂದ್ರಸಿನ್ಹ ಪರ್ಮಾರ್, ರಾಘವ ಜಿ ಮಕ್ವಾನಾ, ವಿನೋದ್ ಮೊರಾದಿಯಾ ಮತ್ತು ದೇವಭಾಯಿ ಮಲಮ್​ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ವಿಶೇಷವೆಂದರೆ ಈ ಹಿಂದೆ ಸ್ಪೀಕರ್​ ಆಗಿ ಸೇವೆ ಸಲ್ಲಿಸಿದ್ದ ರಾಜೇಂದ್ರ ತ್ರಿವೇದಿ ಕೂಡ ಭೂಪೇಂದ್ರ ಸಂಪುಟದಲ್ಲಿ ಸಚಿವರಾಗಿದ್ದಾರೆ.

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಗುಜರಾತ್​ ಮಾಜಿ ಮುಖ್ಯಮಂತ್ರಿ ವಿಜಯ್​ ರೂಪಾಣಿ, ಉಪಮುಖ್ಯಮಂತ್ರಿ ನಿತಿನ್​ ಪಟೇಲ್​, ಬಿಜೆಪಿ ಗುಜರಾತ್​ ಅಧ್ಯಕ್ಷ ಸಿ.ಆರ್.ಪಾಟೀಲ್​, ಬಿಜೆಪಿ ರಾಜ್ಯ ಉಸ್ತುವಾರಿ ಭೂಪೇಂದ್ರ ಯಾದವರ್​ ಮತ್ತು ಕೇಂದ್ರದ ವೀಕ್ಷಕರಾದ ಬಿ.ಎಲ್​.ಸಂತೋಷ್​ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.