ETV Bharat / bharat

ಮಗುವಿನ ಶವ ಬ್ಯಾಗ್‌ನಲ್ಲಿಟ್ಟುಕೊಂಡು ಸಾಗಿದ ತಂದೆ: ಹೀಗೊಂದು ಮನಕಲುಕುವ ಘಟನೆ..! - ಅಂಬ್ಯುಲೆನ್ಸ್‌ಗಾಗಿ 8 ಸಾವಿರ ರೂ ಕೇಳಿದ ಆರೋಪ

ಲಿಯಾಗಂಜ್ ನಿವಾಸಿ, ದಿನಗೂಲಿ ನೌಕರ ಅಸೀಮ್ ದೇವಶರ್ಮಾ ಶನಿವಾರ ರಾತ್ರಿ ತನ್ನ ಐದು ತಿಂಗಳ ಮಗನನ್ನು ಕಳೆದುಕೊಂಡರು. ಮಗುವಿನ ಶವವನ್ನು ಮನೆಗೆ ತರಲು, ಅಂಬ್ಯುಲೆನ್ಸ್‌ಗೆ 8 ಸಾವಿರ ರೂ. ಕೇಳಲಾಗಿತ್ತು ಎಂದು ಆರೋಪಿಸಲಾಗಿದೆ. ಬಳಿಕ ಅವರು ತಮ್ಮ ಮಗುವಿನ ಶವವನ್ನು ಬ್ಯಾಗ್‌ನಲ್ಲಿಟ್ಟುಕೊಂಡು ಮನೆಗೆ ಬಂದಿದ್ದಾರೆ.

A shockingly inhuman incident
ಮಗುವಿನ ಶವವನ್ನು ಬ್ಯಾಗ್‌ನಲ್ಲಿಟ್ಟುಕೊಂಡು ಸಾಗಿದ ತಂದೆ: ಮನಕಲಕುವ ಅಮಾನವೀಯ ಘಟನೆ
author img

By

Published : May 15, 2023, 5:45 PM IST

ಸಿಲಿಗುರಿ (ಪಶ್ಚಿಮ ಬಂಗಾಳ): ಆಂಬ್ಯುಲೆನ್ಸ್​ಗೆ ಹಣ ನೀಡಲು ಸಾಧ್ಯವಾಗದೇ ವ್ಯಕ್ತಿಯೊಬ್ಬರು ತನ್ನ ಮಗುವಿನ ಶವವನ್ನು ಚೀಲದಲ್ಲಿ ಹಾಕಿಕೊಂಡು ಹೋಗಿರುವ ಅಮಾನವೀಯ ಘಟನೆ ಭಾನುವಾರ ನಡೆದಿದೆ. ಉತ್ತರ ಬಂಗಾಳದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಭಾನುವಾರ ಈ ಘಟನೆಯೊಂದು ನಡೆದಿದೆ. ಆದರೆ, ಉತ್ತರ ಬಂಗಾಳದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಅಮಾನವೀಯ ಘಟನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಿರಾಕರಿಸಿದೆ. ಆಂಬ್ಯುಲೆನ್ಸ್ ಲಭ್ಯವಿಲ್ಲ ಎಂದು ಯಾವುದೇ ಸೂಚನೆ ಬಂದಿಲ್ಲ. ಇದು ನಮಗೆ ತಿಳಿದಿದ್ದರೆ, ವ್ಯವಸ್ಥೆ ಮಾಡಲಾಗುತ್ತಿತ್ತು. ವ್ಯಕ್ತಿ ಆಸ್ಪತ್ರೆಯ ಅಧಿಕಾರಿಗಳಿಗೆ ತಿಳಿಸಿಲ್ಲ. ಅವರು ಯಾವುದೇ ದೂರು ನೀಡಿಲ್ಲ. ದೂರು ನೀಡಿದ್ದರೆ, ತನಿಖೆ ನಡೆಸಲಾಗುತ್ತಿತ್ತು ಎಂದು ಉತ್ತರ ಬಂಗಾಳದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಇಂದ್ರಜಿತ್ ಸಹಾ ತಿಳಿಸಿದರು.

ನಮ್ಮ ಬಳಿ ಶವ ವಾಹನ, ಆಂಬ್ಯುಲೆನ್ಸ್ ಇಲ್ಲ: ಅಧೀಕ್ಷಕ ಸಂಜಯ್ ಮಲ್ಲಿಕ್ ಮಾತನಾಡಿ, ''ಅಂತಹ ಯಾವುದೇ ದೂರು ಬಂದರೂ ತ್ವರಿತವಾಗಿ ಪರಿಹರಿಸಲಾಗುತ್ತದೆ. ನಮ್ಮ ಬಳಿ ಶವ ವಾಹನ, ಆಂಬ್ಯುಲೆನ್ಸ್ ಇಲ್ಲ. ಆದರೆ, ರೋಗಿಯ ಕುಟುಂಬವು ಅಂತಹ ತೊಂದರೆಗಳನ್ನು ಎದುರಿಸಿದರೆ, ಆಸ್ಪತ್ರೆಯ ರೋಗಿಗಳ ಕ್ಷೇಮಾಭಿವೃದ್ಧಿ ಸಂಘದ ನಿಧಿಯಿಂದ ವ್ಯವಸ್ಥೆ ಮಾಡಲಾಗುತ್ತದೆ. ಆದರೆ, ಯಾರೂ ಕೂಡ ಈ ಸಮಸ್ಯೆಯೊಂದಿಗೆ ನಮ್ಮನ್ನು ಸಂಪರ್ಕಿಸಲಿಲ್ಲ.

ಆಂಬ್ಯುಲೆನ್ಸ್‌ಗಾಗಿ 8 ಸಾವಿರ ರೂ. ಕೇಳಿದ ಆರೋಪ: ''ಕಲಿಯಾಗಂಜ್ ನಿವಾಸಿ ಮತ್ತು ದಿನಗೂಲಿ ನೌಕರ ಅಸೀಮ್ ದೇವಶರ್ಮಾ ಶನಿವಾರ ರಾತ್ರಿ ತನ್ನ ಐದು ತಿಂಗಳ ಮಗನನ್ನು ಕಳೆದುಕೊಂಡರು. ಸೆಪ್ಟಿಸೆಮಿಯಾದಿಂದ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ. ಮಗುವಿನ ಶವವನ್ನು ಮನೆಗೆ ತರಲು ಆಂಬ್ಯುಲೆನ್ಸ್ ಅಗತ್ಯವಿತ್ತು. ಆಂಬ್ಯುಲೆನ್ಸ್‌ಗಾಗಿ 8 ಸಾವಿರ ರೂಪಾಯಿಗಳನ್ನು ಕೇಳಲಾಗಿತ್ತು ಎಂದು ಆರೋಪಿಸಲಾಗಿದೆ. ಆದರೆ, ಅಸೀಮ್‌ಗೆ ಆ ಹಣವನ್ನು ನೀಡಲು ಸಾಧ್ಯವಾಗಲಿಲ್ಲ. ಯಾವುದೇ ಆಯ್ಕೆಯಿಲ್ಲದೇ, ದುಃಖಿತರಾದ ತಂದೆ ಭಾನುವಾರ ಬೆಳಗ್ಗೆ ಮಗುವಿನ ಶವವನ್ನು ಚೀಲದಲ್ಲಿ ಹಾಕಿಕೊಂಡು ಮನೆಗೆ ತೆರಳಿದರು. ಇದು ರಾಜ್ಯದಲ್ಲಿ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ'' ಎಂದು ವೈದ್ಯಕೀಯ ಸೌಲಭ್ಯದ ರೋಗಿಗಳ ಕಲ್ಯಾಣ ಸಂಘದ ಅಧ್ಯಕ್ಷ ಗೌತಮ್ ದೇಬ್ ಹೇಳಿದರು.

ಆಸ್ಪತ್ರೆಗಳ ಸುತ್ತಲೂ ದಲ್ಲಾಳಿಗಳು ಸಕ್ರಿಯ - ಆಕ್ರೋಶ: ''ಇಂತಹ ಘಟನೆ ಏಕೆ ಸಂಭವಿಸುತ್ತದೆ ಎಂಬ ಪ್ರಶ್ನೆಗಳು ವಿವಿಧ ವಲಯಗಳಲ್ಲಿ ಹುಟ್ಟಿಕೊಂಡಿವೆ. ವೈದ್ಯಕೀಯ ವ್ಯವಸ್ಥೆಯಲ್ಲಿ ತೊಡಗಿರುವ ಅನೇಕ ಜನರು ಜಿಲ್ಲಾಡಳಿತ, ಆಸ್ಪತ್ರೆಯು ಈ ಘಟನೆಯ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ರಾಜ್ಯದ ಆಸ್ಪತ್ರೆಗಳ ಸುತ್ತಲೂ ದಲ್ಲಾಳಿಗಳು ಇನ್ನೂ ಸಕ್ರಿಯರಾಗಿದ್ದಾರೆ ಎಂದು ಸಂಘದ ಸದಸ್ಯರಲ್ಲಿ ಒಬ್ಬರು ಮತ್ತಿಗಾರ ನಕ್ಸಲ್ಬಾರಿ ಬಿಜೆಪಿ ಶಾಸಕ ಆನಂದ್‌ಮೋಯ್ ಬರ್ಮನ್ ಕಿಡಿಕಾರಿದರು.

ಘಟನೆ ಅತ್ಯಂತ ದುರದೃಷ್ಟಕರ: ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮತ್ತಿಗಾರ ನಕ್ಸಲ್ಬಾರಿ ಶಾಸಕ ಹಾಗೂ ರೋಗಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯ ಆನಂದ್​ಮೋಯ್ ಬರ್ಮನ್ ಅವರು, "ಈ ರೀತಿಯ ಘಟನೆ ಅತ್ಯಂತ ದುರದೃಷ್ಟಕರವಾಗಿದೆ. ಇದು ಆಸ್ಪತ್ರೆಯ ಅಧಿಕಾರಿಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಆದರೆ, ಹಲವು ಬಾರಿ ಮಾಹಿತಿ ನೀಡಿದ ನಂತರವೂ ಪೊಲೀಸ್ ಆಡಳಿತ ಶವದ ವಾಹನ, ಆಂಬ್ಯುಲೆನ್ಸ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ, ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಗುರುದ್ವಾರ ಸಂಕೀರ್ಣದಲ್ಲಿ ಮಹಿಳೆಗೆ ಗುಂಡಿಕ್ಕಿ ಹತ್ಯೆ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.