ಬೋಲ್ಪುರ್(ಪಶ್ಚಿಮ ಬಂಗಾಳ): ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಅವರ ಸಹೋದರ ಪತ್ನಿ ಬುಧವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಸೂಸೈಡ್ ನೋಟ್ ಬರೆದಿರುವ ಅವರು ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ವಂದನಾ ಸೇನ್ (65) ಆತ್ಮಹತ್ಯೆ ಮಾಡಿಕೊಂಡವರಾಗಿದ್ದು, ಅಮರ್ತ್ಯ ಸೇನ್ ಅವರ ಸೋದರ ಸಂಬಂಧಿಯಾದ ಶಂತವನು ಸೇನ್ ಅವರ ಪತ್ನಿಯಾಗಿದ್ದಾರೆ. ಶಂತವನು ಸೇನ್ ಅಮರ್ತ್ಯಸೇನ್ ಅವರ ಮನೆಯಾದ ಪ್ರಾತಿಚಿ ಪಕ್ಕದಲ್ಲೇ ವಾಸ ಮಾಡುತ್ತಿದ್ದಾರೆ.
![Nobel laureate Amartya Sens brothers wife commits suicide on Wednesday](https://etvbharatimages.akamaized.net/etvbharat/prod-images/13542003_thumb.jpg)
ಇಂದು ಅಮರ್ತ್ಯಸೇನ್ ಅವರ ಹುಟ್ಟಿದ ದಿನವಾಗಿದ್ದು, ಇದೇ ದಿನದಂತೆ ವಂದನಾ ಸೇನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಂತಿನಿಕೇತನ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮೃತದೇಹವನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ:ಕಾಕತಾಳೀಯವೋ, 'ಸತಿ'ಯ ಶಾಪವೋ: ಈ ಗ್ರಾಮದಲ್ಲಿ ದೀಪಾವಳಿಯೇ ಆಚರಿಸಲ್ಲ