ಪಣಜಿ, ಗೋವಾ: ಎಲ್ಲೆಡೆಯಲ್ಲೂ ಇಂಧನ ಬೆಲೆ ಹೆಚ್ಚಾಗಿದೆ. ಈ ಕುರಿತು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಪತ್ನಿ ಸುಲಕ್ಷಣಾ ಸಾವಂತ್ ತಮ್ಮ ಪತಿ ಆಗಾಗ ಬಳಸುವ 'ಭಿವ್‌ಪಾಚಿ ಗರಾಜ್ ನಾ' ಎಂಬ ಉತ್ತರವನ್ನು ನೀಡಿದ್ದಾರೆ. 'ಭಿವ್‌ಪಾಚಿ ಗರಾಜ್ ನಾ' ಎಂದರೆ 'ಚಿಂತೆಪಡುವ ಅಗತ್ಯವಿಲ್ಲ' ಎಂಬುದಾಗಿದ್ದು, ಪ್ರಮೋದ್ ಸಾವಂತ್ ಕೋವಿಡ್ ಸಮಯದ ವೇಳೆ ಈ ವಾಕ್ಯವನ್ನು ಯಥೇಚ್ಛವಾಗಿ ಬಳಸುತ್ತಿದ್ದರು. ಸಾವಂತ್ ಅವರ ಈ ವಾಕ್ಯ ಸಾಕಷ್ಟು ಟ್ರೋಲ್ಗಳಿಗೆ ಮತ್ತು ಮೀಮ್ಗಳಿಗೂ ಆಹಾರವಾಗಿತ್ತು. ಈಗ ಅದೇ ವಾಕ್ಯವನ್ನು ಪ್ರಮೋದ್ ಸಾವಂತ್ ಪತ್ನಿ ಸುಲಕ್ಷಣಾ ಸಾವಂತ್ ಹೇಳಿದ್ದಾರೆ.
ರಾಜ್ಯದಲ್ಲಿ ತೈಲಬೆಲೆ, ಸಿಲಿಂಡರ್‌ಗಳು ಮತ್ತು ಹಾಲಿನ ಬೆಲೆ ಏರಿಕೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸುಲಕ್ಷಣಾ ಸಾವಂತ್ ಬೆಲೆ ಏರಿಕೆಯನ್ನು ಸ್ವಲ್ಪ ಸಮಯದವರೆಗೆ ಸಹಿಸಿಕೊಳ್ಳಬೇಕಾಗುತ್ತದೆ. ಬೆಲೆಗಳು ಕೇವಲ ರಾಜ್ಯದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಏರಿಕೆಯಾಗಿದೆ. ಬೆಲೆ ಏರಿಕೆಗೆ ಪರಿಹಾರವೊಂದು ಇದ್ದೇ ಇರುತ್ತದೆ. ಬೆಲೆ ಏರಿಕೆಯನ್ನು ಕಡಿಮೆ ಮಾಡಲು ಸರ್ಕಾರ ಸಾಮಾಜಿಕ ಯೋಜನೆಗಳಿಗೆ ಒತ್ತು ನೀಡಿದೆ. ಈ ವಿಚಾರವಾಗಿ ಚಿಂತೆಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಚಿಂತೆಪಡುವ ಅಗತ್ಯವಿಲ್ಲ ಎಂಬ ಪದವನ್ನು ಈ ಮೊದಲು ಪ್ರಮೋದ್ ಸಾವಂತ್ ಅವರು ಬಳಸುತ್ತಿದ್ದು, ಪ್ರತಿಪಕ್ಷಗಳು ಸಾವಂತ್ ಅವರ ಕುರಿತು ವ್ಯಂಗ್ಯವಾಡಲು ಈ ವಾಕ್ಯ ಬಳಸುತ್ತಿದ್ದವು. ಅಂದಹಾಗೆ, ಗೋವಾದ ಪ್ರಮುಖ ಹಾಲು ಉತ್ಪಾದಕ ಸಹಕಾರಿ ಸಂಸ್ಥೆ ಗೋವಾ ಡೈರಿ ಹಾಲಿನ ದರವನ್ನು ಒಂದು ಲೀಟರ್ಗೆ ನಾಲ್ಕು ರೂಪಾಯಿ ಹೆಚ್ಚಿಸಿದೆ. ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಶನಿವಾರ 50 ರೂಪಾಯಿ ಹೆಚ್ಚಿಸಿದ್ದು, ಈಗ ಅದರ ಬೆಲೆ ಸುಮಾರು 1 ಸಾವಿರ ರೂಪಾಯಿ ಆಗಿದೆ.
ಇದನ್ನೂ ಓದಿ: ಸ್ಟಾಲಿನ್ ಸರ್ಕಾರಕ್ಕೆ ಒಂದು ವರ್ಷ: ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಉಚಿತ ಉಪಾಹಾರ ಯೋಜನೆ ಘೋಷಣೆ