ETV Bharat / bharat

ವರ್ಷದ 365 ದಿನವೂ ವಿದ್ಯಾರ್ಥಿಗಳಿಗೆ ಪಾಠ!: ನಾಸಿಕ್​​ನಲ್ಲಿದೆ ವಿಶಿಷ್ಟ ಶಾಲೆ

ನಾಸಿಕ್ ಜಿಲ್ಲೆಯ ತ್ರಯಂಬಕೇಶ್ವರ ತಾಲೂಕಿನ ಹಿವಾಲಿ ಜಿಲ್ಲಾ ಪರಿಷತ್ ಶಾಲೆ ವರ್ಷದ 365 ದಿನವೂ ತೆರೆದಿರುತ್ತದೆ. ಪ್ರತಿದಿನ 12 ಗಂಟೆಗಳ ಕಾಲ ತರಗತಿ ನಡೆಯುವ ಜಿಲ್ಲೆಯ ಏಕೈಕ ಶಾಲೆ ಇದಾಗಿದೆ.

nashik hiwali zilla parishad school
ಹಿವಾಲಿ ಜಿಲ್ಲಾ ಪರಿಷತ್ ಶಾಲೆ
author img

By

Published : Nov 30, 2022, 1:16 PM IST

Updated : Nov 30, 2022, 1:39 PM IST

ನಾಸಿಕ್(ಮಹಾರಾಷ್ಟ್ರ): ನಾಸಿಕ್​​ನಿಂದ 75 ಕಿ.ಮೀ ದೂರದಲ್ಲಿ ತ್ರಯಂಬಕೇಶ್ವರ ತಾಲೂಕಿನಲ್ಲಿ ಹಿವಾಲಿ ಎಂಬ ಹೆಸರಿನ ಗ್ರಾಮವಿದೆ. ಇಲ್ಲಿನ ಜಿಲ್ಲಾ ಪರಿಷತ್ ನಡೆಸುವ ಶಾಲೆಯಲ್ಲಿನ ಶಿಕ್ಷಣ ವ್ಯವಸ್ಥೆಯಿಂದಾಗಿ ಈ ಗ್ರಾಮ ದೇಶದ ಗಮನ ಸೆಳೆದಿದೆ. ಈ ಶಾಲೆಗೆ ಒಂದೇ ಒಂದು ರಜೆಯಿಲ್ಲ. 365 ದಿನವೂ ತೆರೆದಿರುವ ಶಾಲೆಯಲ್ಲಿ ಪ್ರತಿದಿನ ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ 12 ಗಂಟೆಗಳ ಕಾಲ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತದೆ.

ತಾರ್ಕಿಕ ಪ್ರಶ್ನೆಗಳಿಗೆ ನಿಖರ ಉತ್ತರ: 1 ರಿಂದ 5ನೇ ತರಗತಿವರೆಗಿನ ಈ ಶಾಲೆಯ ಎಲ್ಲ ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನ, ರಾಷ್ಟ್ರೀಯ ಹೆದ್ದಾರಿ, ಭಾರತೀಯ ಸಂವಿಧಾನದ ಎಲ್ಲಾ ವಿಧಿಗಳು, ಪ್ರಪಂಚದಾದ್ಯಂತದ ದೇಶಗಳ ರಾಜಧಾನಿಗಳನ್ನು ನೋಡದೆ ಹೇಳುತ್ತಾರೆ. ಅಲ್ಲದೇ ಈ ಶಾಲೆಯ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ವಿಷಯದಲ್ಲಿ ಕೇಳಲಾಗುವ ಗಣಿತ ಮತ್ತು ತಾರ್ಕಿಕ ಪ್ರಶ್ನೆಗಳಿಗೆ ನಿಖರ ಉತ್ತರ ನೀಡುತ್ತಾರೆ.

nashik hiwali zilla parishad school
ಹಿವಾಲಿ ಜಿಲ್ಲಾ ಪರಿಷತ್ ಶಾಲೆ

ಉದ್ಯೋಗಾಧಾರಿತ ಶಿಕ್ಷಣಕ್ಕೆ ಒತ್ತು: ಇಲ್ಲಿನ ಶಿಕ್ಷಕರು ವಿದ್ಯಾರ್ಥಿಗಳಿಗೆ ಕೇವಲ ಪುಸ್ತಕ ಜ್ಞಾನ ನೀಡದೆ ಉದ್ಯೋಗ ಆಧಾರಿತ ಶಿಕ್ಷಣ ನೀಡುವತ್ತ ಗಮನ ಹರಿಸುತ್ತಿದ್ದಾರೆ. ಒಂದು ದಿನದಲ್ಲಿ 8 ಗಂಟೆಗಳ ಪುಸ್ತಕ ಜ್ಞಾನ ಮತ್ತು ಉಳಿದ 4 ಗಂಟೆಗಳ ಕಾಲ ಉದ್ಯೋಗ ಆಧಾರಿತ ಶಿಕ್ಷಣ ನೀಡಲಾಗುತ್ತದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಪ್ಲಂಬರ್, ಫಿಟ್ಟರ್, ಎಲೆಕ್ಟ್ರಿಷಿಯನ್, ಕಾರ್ಪೆಂಟರ್, ಪೇಂಟಿಂಗ್ ಇತ್ಯಾದಿಗಳನ್ನು ಕಲಿಸಲಾಗುತ್ತದೆ.

ವರ್ಲಿ ಚಿತ್ರಕಲೆ ಪಾಠ: ಈ ಶಾಲೆಯ ವಿದ್ಯಾರ್ಥಿಗಳಿಗೆ ಯೂಟ್ಯೂಬ್ ಮೂಲಕ ವಿದ್ಯಾರ್ಥಿಗಳಿಗೆ ವರ್ಲಿ ಚಿತ್ರಕಲೆ ಪಾಠವನ್ನು ನೀಡಲಾಗಿದೆ. ಗ್ರಾಮೀಣ ಪ್ರದೇಶದ ಒಂದು ಸಾಂಪ್ರದಾಯಿಕ ಕಲೆಯೇ ವರ್ಲಿ ಚಿತ್ತಾರ.

ಅಧಿಕಾರಿಯಾಗುವ ಕನಸು: 'ವರ್ಷವಿಡೀ ಶಾಲೆಗೆ ಬರುತ್ತೇವೆ. ಶಾಲೆಯಲ್ಲಿಯೇ ಊಟದ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಪೋಷಕರು ಚಿಂತಿಸದೆ ಕೆಲಸಕ್ಕೆ ಹೋಗುತ್ತಾರೆ. ನಮ್ಮ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ. ಇದು ಶ್ರಮ, ಓದುವಿಕೆ, ಬರವಣಿಗೆ, ಪಠಣವನ್ನು ಒಳಗೊಂಡಿದೆ. ವೈದ್ಯ, ಐಎಸ್ ಅಧಿಕಾರಿ, ಪೊಲೀಸ್ ಅಧಿಕಾರಿಯಾಗುವ ಕನಸು ಕಾಣುತ್ತೇವೆ' ಎನ್ನುತ್ತಾರೆ ಇಲ್ಲಿನ ವಿದ್ಯಾರ್ಥಿಗಳು.

ಶಾಲೆಯ ವೈಶಿಷ್ಟ್ಯಗಳಿವು...:

  • ಶಾಲೆಯು 365 ದಿನ ತೆರೆದಿದ್ದು, ದಿನಕ್ಕೆ 12 ಗಂಟೆಗಳ ಕಾಲ ಪಾಠ ಮಾಡಲಾಗುತ್ತದೆ.
  • ಶಿಶುವಿಹಾರದಿಂದಲೇ ಮಕ್ಕಳಿಗೆ ಓದಲು ಮತ್ತು ಬರೆಯಲು ಕಲಿಸಲಾಗುತ್ತದೆ.
  • 100 ರಷ್ಟು ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
  • ಸಂವಿಧಾನದ ವಿಧಿಗಳು ವಿದ್ಯಾರ್ಥಿಗಳ ಅಧ್ಯಯನ ವಿಷಯ ಆಗಿದೆ.

ಇದನ್ನೂ ಓದಿ: ಕರಾವಳಿಯಲ್ಲಿ ಕನ್ನಡ ಶಾಲೆ ಉಳಿಸಿದ ಶಿಕ್ಷಕ: ಹಳೆ ವಿದ್ಯಾರ್ಥಿಗಳಿಂದ ವಿಶಿಷ್ಟ ಗುರು ಕಾಣಿಕೆ

Last Updated : Nov 30, 2022, 1:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.