ಗೋವಾ: ಗೋವಾದಲಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಸಭೆಗೆ ಇಂದು ಆಗಮಿಸಿದ ಸಂಘಟನೆಯ ಎಂಟು ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಖರ್ ಸ್ವಾಗತಿಸಿದ ರೀತಿ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ. ವಿದೇಶಾಂಗ ಸಚಿವರುಗಳ ಕೈಕುಲುಕದೇ ನಮ್ಮ ಭಾರತೀಯ ಸಂಸ್ಕೃತಿಯಂತೆ ಎರಡು ಕೈಗಳನ್ನು ಜೋಡಿಸಿ, 'ನಮಸ್ತೆ' ಎಂದು ಸಾಂಪ್ರದಾಯಿಕವಾಗಿ ಸ್ವಾಗತಿಸಿದ್ದಾರೆ. ಈ ಮೂಲಕ ಭಾರತೀಯತೆಯ ಸಂಸ್ಕಾರವನ್ನು ವಿದೇಶಾಂಗ ಸಚಿವರು ಎತ್ತಿ ಹಿಡಿದಿದ್ದಾರೆ.
-
SCO meeting in Goa: Jaishankar's 'Namaste' reciprocates with Qin Gang's 'fist and palm' salute
— ANI Digital (@ani_digital) May 5, 2023 " class="align-text-top noRightClick twitterSection" data="
Read @ANI Story | https://t.co/2SuGVWAQ6j#Jaishankar #SCO2023 #SCOSummit #China #QinGang pic.twitter.com/3LJXIDQQ5u
">SCO meeting in Goa: Jaishankar's 'Namaste' reciprocates with Qin Gang's 'fist and palm' salute
— ANI Digital (@ani_digital) May 5, 2023
Read @ANI Story | https://t.co/2SuGVWAQ6j#Jaishankar #SCO2023 #SCOSummit #China #QinGang pic.twitter.com/3LJXIDQQ5uSCO meeting in Goa: Jaishankar's 'Namaste' reciprocates with Qin Gang's 'fist and palm' salute
— ANI Digital (@ani_digital) May 5, 2023
Read @ANI Story | https://t.co/2SuGVWAQ6j#Jaishankar #SCO2023 #SCOSummit #China #QinGang pic.twitter.com/3LJXIDQQ5u
ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಮತ್ತು ಚೀನಾದ ವಿದೇಶಾಂಗ ಮಿನ್ ಕಿನ್ ಗ್ಯಾಂಗ್ ಸೇರಿದಂತೆ ಎಲ್ಲ ಪ್ರತಿನಿಧಿಗಳಿಗೆ ಅವರು 'ನಮಸ್ತೆ' ಎಂದು ಹೇಳಿ ಸ್ವಾಗತ ಕೋರಿದ್ದು, ಇಡೀ ಸಭೆಯಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಅದೇ ರೀತಿ ಭಾರತದ ವಿದೇಶಾಂಗ ಸಚಿವರ ಶುಭಾಶಯಕ್ಕೆ ಕಝಾಕಿಸ್ತಾನ್, ಕಿರ್ಗಿಸ್ತಾನ್, ರಷ್ಯಾ, ಪಾಕಿಸ್ತಾನ, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನದ ವಿದೇಶಾಂಗ ಸಚಿವರು ಸಹ ಸಮಾನವಾಗಿ ಪ್ರತಿಕ್ರಿಯಿಸಿದ್ದಾರೆ.
ಅದರಲ್ಲೂ ಸುಮಾರು 12 ವರ್ಷಗಳ ನಂತರ ಭಾರತಕ್ಕೆ ಭೇಟಿ ನೀಡಿದ ಪಾಕಿಸ್ತಾನದ ಮೊದಲ ವಿದೇಶಾಂಗ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾದ ಜರ್ದಾರಿ ಅವರ ಭೇಟಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಜೈಶಂಕರ್ ಅವರು ಜರ್ದಾರಿ ಅವರಿಗೆ ಶುಭಾಶಯ ಕೋರುವ ವಿಡಿಯೋ ಟ್ವಿಟರ್‌ನಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ. ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಪಾಕಿಸ್ತಾನದ 'ಒಳಗೊಳ್ಳುವಿಕೆ' ಕುರಿತು ಕೆಲವು ಕಠಿಣ ಚರ್ಚೆಯ ನಂತರ ಈ ವಿಡಿಯೋ ಇನ್ನಷ್ಟು ಶೇರ್ ಆಗತೊಡಗಿದೆ.
ಸಾಮಾನ್ಯವಾಗಿ ಹ್ಯಾಂಡ್ ಶೇಕ್ ಮಾಡುವ ಬದಲಾಗಿ ವಿಶೇಷವಾಗಿ ಸ್ವಾಗತಿಸಿರುವ ಜೈಶಂಖರ್ ಅವರ ಗೆಸ್ಚರ್ ಅನ್ನು ಟ್ವಿಟರ್ ಬಳಕೆದಾರರು ಶ್ಲಾಘಿಸಿದ್ದಾರೆ. ಪಾಕಿಸ್ತಾನದ ವಿದೇಶಾಂಗ ಸಚಿವರನ್ನು ಭಾರತೀಯ ರಾಜತಾಂತ್ರಿಕ ಜೆಪಿ ಸಿಂಗ್ (ಪಾಕಿಸ್ತಾನ-ಅಫ್ಘಾನಿಸ್ತಾನ-ಇರಾನ್ ಡೆಸ್ಕ್ ಜಂಟಿ ಕಾರ್ಯದರ್ಶಿ) ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಜೈಶಂಕರ್ ಅವರ ಆಹ್ವಾನದ ಮೇರೆಗೆ ಪಾಕಿಸ್ತಾನದ ರಾಜಕಾರಣಿ ಎಸ್‌ಸಿಒ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ.
ಭಾರತದ ಕರಾವಳಿ ರಾಜ್ಯಕ್ಕೆ ಆಗಮಿಸಿರುವ ಜರ್ದಾರಿ ಅವರು ಭಾರತಕ್ಕೆ ಆಗಮಿಸುತ್ತಿರುವ ಬಗ್ಗೆ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ವಿಡಿಯೋವೊಂದನ್ನು ಹಂಚಿಕೊಂಡಿತ್ತು. ಆ ವೀಡಿಯೋದಲ್ಲಿ ಸ್ನೇಹಪರ ದೇಶಗಳ ತಮ್ಮ ಸಹವರ್ತಿಗಳೊಂದಿಗೆ ರಚನಾತ್ಮಕ ಚರ್ಚೆಗಳನ್ನು ಎದುರು ನೋಡುತ್ತಿರುವುದಾಗಿ ಹೇಳಿದ್ದರು. ಶಾಂಘೈ ಸಹಕಾರ ಸಂಸ್ಥೆಯ ಸಭೆಯಲ್ಲಿ ಭಾಗವಹಿಸಲು ಗೋವಾಕ್ಕೆ ಆಗಮಿಸಲು ನನಗೆ ಸಂತೋಷವಾಗಿದೆ. ನಾನು ಎಸ್ಸಿಒನಲ್ಲಿ ಪಾಕಿಸ್ತಾನದ ನಿಯೋಗವನ್ನು ಪ್ರತಿನಿಧಿಸುತ್ತಿದ್ದೇನೆ. ಮತ್ತು ಎಸ್‌ಸಿಒ ಕೌನ್ಸಿಲ್ ಆಫ್ ಫಾರಿನ್ ಮಿನಿಸ್ಟರ್ಸ್ (CFM) ಯಶಸ್ವಿಯಾಗುತ್ತದೆ ಎಂದು ಭಾವಿಸುತ್ತೇನೆ ಎಂದು ಜರ್ದಾರಿ ತಿಳಿಸಿದ್ದರು. ಡಾ ಎಸ್ ಜೈಶಂಕರ್ ಅವರು ಶುಕ್ರವಾರದ ಸಭೆಗೆ ಎಸ್‌ಸಿಒ ಪ್ರಧಾನ ಕಾರ್ಯದರ್ಶಿ ಜಾಂಗ್ ಮಿಂಗ್ ಅವರನ್ನೂ ಸಾಂಪ್ರದಾಯಿಕವಾಗಿ ಸ್ವಾಗತಿಸಿದ್ದಾರೆ.
ಇದನ್ನೂ ಓದಿ: ಭಯೋತ್ಪಾದನೆಯನ್ನು ನಿಲ್ಲಿಸಲೇಬೇಕು: ಪಾಕ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ತೀವ್ರ ವಾಗ್ದಾಳಿ