ETV Bharat / bharat

KSRTC ವಿವಾದ : ರಾಜಿಯೂ ಇಲ್ಲ.. ಹೋರಾಟವೂ ಇಲ್ಲ.. ಕರ್ನಾಟಕಕ್ಕೆ ಕೇರಳ ಸಾರಿಗೆ ಸಂಸ್ಥೆ ಉತ್ತರ - ಕೆಎಸ್​ಆರ್​​ಟಿಸಿ ಟ್ರೇಡ್​​​​ ಮಾರ್ಕ್

ಈ ವಿವಾದ ಸಂಬಂಧ ಕಾರ್ಯದರ್ಶಿ ಮಟ್ಟದಲ್ಲಿ ಅಥವಾ ಮಂತ್ರಿಗಳ ಮಟ್ಟದಲ್ಲಿ ಸಭೆ ನಡೆಸಿ ಚರ್ಚಿಸಲಾಗುವುದು. ಈ ಕುರಿತು ಅಧಿಕೃತವಾಗಿ ಕರ್ನಾಟಕಕ್ಕೆ ತಿಳಿಸಲಾಗುವುದು..

KSRTC ವಿವಾದ
KSRTC ವಿವಾದ
author img

By

Published : Jun 5, 2021, 3:27 PM IST

Updated : Jun 5, 2021, 3:49 PM IST

ತಿರುವನಂತಪುರಂ (ಕೇರಳ): ರಾಜ್ಯ ಕೆಎಸ್​​ಆರ್​ಟಿಸಿ ಹಾಗೂ ಕೇರಳ ಸಾರಿಗೆ ಸಂಸ್ಥೆಗಳ ನಡುವಿನ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದೀಗ ಕೇರಳ ಕೆಎಸ್​ಆರ್​ಟಿಸಿ ಸಿಎಂಡಿ ಪ್ರತಿಕ್ರಿಯಿಸಿದ್ದಾರೆ.

ಕೆಎಸ್​ಆರ್​ಟಿಸಿ ಸಂಸ್ಥೆಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯೊಂದಿಗೆ ಯಾವುದೇ ರೀತಿಯ ಕಾನೂನು ಕ್ರಮಗಳ ಮೂಲಕ ಹೋರಾಟಕ್ಕೆ ಮುಂದಾಗಿಲ್ಲ ಎಂದಿದ್ದಾರೆ. ಈ ಕುರಿತು ಫೇಸ್​ಬುಕ್ ಪೋಸ್ಟ್​​ನಲ್ಲಿ ಸ್ಪಷ್ಟನೆ ನೀಡಿದ್ದು, ಕೆಎಸ್​ಆರ್​ಟಿಸಿ ಡೊಮೈನ್ ಹೆಸರಿನ ಕುರಿತು ಕರ್ನಾಟಕದೊಂದಿಗೆ ಯಾವುದೇ ಹೋರಾಟಕ್ಕೆ ಇಳಿಯುವುದಿಲ್ಲ.

no-fight-no-compromise-ksrtcs-response-to-karnataka
ಫೇಸ್​ಬುಕ್​​ನಲ್ಲಿ ಸ್ಪಷ್ಟನೆ ನೀಡಿದ ಕೇರಳ ಸಾರಿಗೆ ಸಂಸ್ಥೆ

ಅಲ್ಲದೆ ಸೂಕ್ತ ರೀತಿ ಸಮಸ್ಯೆಯನ್ನ ಪರಿಹರಿಸಿಕೊಳ್ಳುವತ್ತ ಸರ್ಕಾರ ಗಮನ ಹರಿಸಲಿದೆ ಎಂದಿದ್ದಾರೆ. ಈ ವಿವಾದ ಸಂಬಂಧ ಕಾರ್ಯದರ್ಶಿ ಮಟ್ಟದಲ್ಲಿ ಅಥವಾ ಮಂತ್ರಿಗಳ ಮಟ್ಟದಲ್ಲಿ ಸಭೆ ನಡೆಸಿ ಚರ್ಚಿಸಲಾಗುವುದು. ಈ ಕುರಿತು ಅಧಿಕೃತವಾಗಿ ಕರ್ನಾಟಕಕ್ಕೆ ತಿಳಿಸಲಾಗುವುದು ಎಂದಿದ್ದಾರೆ.

. ಕರ್ನಾಟಕಕ್ಕೆ ಕೇರಳ ಸಾರಿಗೆ ಸಂಸ್ಥೆ ಉತ್ತರ

ಕರ್ನಾಟಕ ಮತ್ತು ಕೇರಳ ಪ್ರಯಾಣದ ವಿಷಯದಲ್ಲಿ ಮಾತ್ರವಲ್ಲದೆ ಇತರ ಎಲ್ಲ ವಿಷಯಗಳಲ್ಲೂ ಪರಸ್ಪರ ಸಹಕಾರ ನೀಡುತ್ತಿವೆ. ಆದ್ದರಿಂದ ಈ ಬಗ್ಗೆ ಚರ್ಚಿಸಲಾಗುವುದು. ಆದರೆ, ಆನ್‌ಲೈನ್ ಡೊಮೇನ್‌ಗೆ ಸಂಬಂಧಿಸಿದಂತೆ ತೆಗೆದುಕೊಂಡ ನಿರ್ಧಾರವನ್ನು ಬದಲಾಯಿಸಲಾಗುವುದಿಲ್ಲ. 7 ವರ್ಷದ ಕಾನೂನು ಹೋರಾಟದ ನಂತರ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮವು ಕೆಎಸ್ಆರ್​​ಟಿಸಿ ಹೆಸರು ಪಡೆದಿದೆ ಎಂದಿದ್ದಾರೆ.

ಇದನ್ನೂ ಓದಿ: ‘KSRTC’ ಹೆಸರು ಕೈತಪ್ಪಿಲ್ಲ.. ಇದು ಸತ್ಯಕ್ಕೆ ದೂರವಾದ ವರದಿ : ಕೆಎಸ್‌ಆರ್‌ಟಿಸಿ ಎಂಡಿ ಸ್ಪಷ್ಟನೆ

Last Updated : Jun 5, 2021, 3:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.