ETV Bharat / bharat

ನಿಲ್ಲದ ಮಳೆ ಆರ್ಭಟ: ಶಬರಿಮಲೆಯಲ್ಲಿ ಮಾಸಿಕ ಪೂಜೆಗೆ ಭಕ್ತರಿಗೆ ಪ್ರವೇಶ ನಿಷೇಧಕ್ಕೆ ನಿರ್ಧಾರ

ಕೇರಳದಲ್ಲಿ ಭಾರಿ ಮಳೆ ಹಿನ್ನೆಲೆ 'ತುಲಾಮ್' ಮಾಸಿಕ ಪೂಜೆಗೆ ಭಕ್ತರಿಗೆ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ.

No darshan at Sabarimala for monthly poojas
ಭಕ್ತರಿಗೆ ಪ್ರವೇಶ ನಿಷೇಧಕ್ಕೆ ನಿರ್ಧಾರ
author img

By

Published : Oct 18, 2021, 3:52 PM IST

ತಿರುವನಂತಪುರ(ಕೇರಳ):ರಾಜ್ಯದಲ್ಲಿ ಭಾರಿ ಮಳೆ ಹಿನ್ನೆಲೆ 'ತುಲಾಮ್' ಮಾಸಿಕ ಪೂಜೆಗೆ ಭಕ್ತರಿಗೆ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ. ಸೋಮವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆ ಈ ತೀರ್ಮಾನ ಕೈಗೊಂಡಿದೆ.

ಅಕ್ಟೋಬರ್ 16 ರಂದು ಶಬರಿಮಲೆ ದೇವಸ್ಥಾನವನ್ನು ತೆರೆಯಲಾಯಿತು ಮತ್ತು ಅಕ್ಟೋಬರ್ 17ರಿಂದ ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು. ವರ್ಚುಯಲ್ ಕ್ಯೂ ಬುಕಿಂಗ್ ವ್ಯವಸ್ಥೆಯ ಮೂಲಕ ದೇವರ ದರ್ಶನಕ್ಕೆ ಬುಕ್ ಮಾಡಿದ ಅನೇಕ ಭಕ್ತರು ದೇವಸ್ಥಾನಕ್ಕೆ ಬಂದಿದ್ದರು. ಆದರೆ, ಕೇರಳದಲ್ಲಿ ವಿಪರೀತ ಮಳೆಯಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ. ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಉಂಟಾದ ಪ್ರವಾಹ ಮತ್ತು ಭೂಕುಸಿತವು ಅನೇಕರನ್ನು ಬಲಿ ಪಡೆದಿದೆ.

ಕಕ್ಕಿ ಅಣೆಕಟ್ಟು ಗೇಟ್​ಗಳನ್ನು ತೆರೆಯಲಾಗಿರುವುದರಿಂದ ಪಥನಂತಿಟ್ಟದಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ದೇವರ ದರ್ಶನಕ್ಕಾಗಿ ನಿಲಕ್ಕಲ್‌ಗೆ ಈಗಾಗಲೇ ಆಗಮಿಸಿದ ಭಕ್ತರು ಸುರಕ್ಷಿತವಾಗಿ ಹಿಂತಿರುಗಲು ಕ್ರಮ ಕೈಗೊಳ್ಳುವಂತೆ ಪಥನಂತಿಟ್ಟ ಜಿಲ್ಲಾಡಳಿತಕ್ಕೆ ತಿಳಿಸಲಾಗಿದೆ. ಪಂಬಾ ಸೇರಿದಂತೆ ನದಿಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತಿದೆ.

ದೇಗುಲದ ಬಳಿಯ ಅರಣ್ಯ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವುದು ಕೂಡ ಆ ಪ್ರದೇಶದಲ್ಲಿ ಭೂಕುಸಿತದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಬುಧವಾರದಿಂದ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದೆ ಮತ್ತು ಶಬರಿಮಲೆಗೆ ಭಕ್ತರಿಗೆ ಅವಕಾಶ ನೀಡುವುದು ಅಪಾಯಕಾರಿ ಎಂದು ಸಭೆಯಲ್ಲಿ ಚರ್ಚಿಸಲಾಗಿದೆ.

ಮಳೆಯ ಕಾರಣಕ್ಕೆ ಮಂಗಳವಾರದವರೆಗೆ ಭಕ್ತರನ್ನು ಶಬರಿಮಲೆಗೆ ಅನುಮತಿಸಬಾರದು ಎಂದು ಈ ಮೊದಲೇ ನಿರ್ಧರಿಸಲಾಗಿತ್ತು. ಇದೀಗ ಸಭೆಯಲ್ಲಿ ಮಾಸಿಕ ಪೂಜೆಗಳಿಗೆ ದರ್ಶನವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.