ETV Bharat / bharat

PM Modi: ಅವಿಶ್ವಾಸ ನಿರ್ಣಯ ನಮಗೆ ಅದೃಷ್ಟ; 2024ರಲ್ಲಿ NDA ಎಲ್ಲ ದಾಖಲೆ ಮುರಿಯಲಿದೆ-ಲೋಕಸಭೆಯಲ್ಲಿ ಪ್ರಧಾನಿ ಮೋದಿ - ಕಾಂಗ್ರೆಸ್

PM Modi Speech in Lok Sabha: ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

no-confidence-motion-pm-modi-speech-in-lok-sabha
ಪ್ರತಿಪಕ್ಷಗಳ ಅವಿಶ್ವಾಸ ನಮಗೆ ಶುಭ: ಲೋಕಸಭೆಯಲ್ಲಿ ಪ್ರಧಾನಿ ಮೋದಿ
author img

By

Published : Aug 10, 2023, 5:18 PM IST

Updated : Aug 10, 2023, 8:15 PM IST

ನವದೆಹಲಿ: ಮಣಿಪುರ ಹಿಂಸಾಚಾರ ಕುರಿತಾಗಿ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿಲುವಳಿಗೆ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಸುದೀರ್ಘ ಉತ್ತರ ನೀಡಿದರು. ''ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ನಮಗೆ ಅದೃಷ್ಟ. ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಎಲ್ಲ ದಾಖಲೆಗಳನ್ನು ಮುರಿದು ಜಯಭೇರಿ ಬಾರಿಸಲಿದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • "In a way, Opposition's No Confidence has always been lucky for us. Today, I can see that you (Opposition) have decided that NDA and BJP will come back in 2024 elections with a grand victory, breaking all previous records, with the blessings of the people.@narendramodi pic.twitter.com/Jk4FuaHaQO

    — SansadTV (@sansad_tv) August 10, 2023 " class="align-text-top noRightClick twitterSection" data=" ">

"ದೇವರು ತುಂಬಾ ಕರುಣಾಮಯಿ. ಆತ ಯಾವುದಾದರೂ ಮಾಧ್ಯಮದ ಮೂಲಕ ಮಾತನಾಡುತ್ತಾನೆ. ಈ ಅವಿಶ್ವಾಸ ನಿರ್ಣಯವನ್ನು ದೇವರ ಆಶೀರ್ವಾದ ಎಂದೇ ನಾನು ಭಾವಿಸುತ್ತೇನೆ. 2018ರಲ್ಲಿ ನಮ್ಮ ವಿರುದ್ಧ ಅವಿಶ್ವಾಸ ಪ್ರಸ್ತಾವ ತಂದಿದ್ದರು. ಅಂದು ನಾನು ಇದು ನಮ್ಮ ಮೇಲಿನ ಅವಿಶ್ವಾಸವಲ್ಲ, ಪ್ರತಿಪಕ್ಷಗಳ ಮೇಲಿನ ಅವಿಶ್ವಾಸ ಎಂದು ಹೇಳಿದ್ದೆ. ಜನತೆಯ ಬಳಿ ಹೋದಾಗ ಅವರು ಪ್ರತಿಪಕ್ಷಗಳ ಮೇಲೆಯೇ ಅವಿಶ್ವಾಸ ಘೋಷಣೆ ಮಾಡಿದರು. ದೇಶದ ಜನರು ಬಿಜೆಪಿ ಹಾಗೂ ಎನ್​ಡಿಎಗೆ ಹೆಚ್ಚಿನ ಸ್ಥಾನಗಳನ್ನು ನೀಡಿದ್ದರು. ಆದ್ದರಿಂದ ಪ್ರತಿಪಕ್ಷಗಳ ಅವಿಶ್ವಾಸ ನಮಗೆ ಅದೃಷ್ಟ'' ಎಂದು ಮೋದಿ ಹೇಳಿದರು.

''ಜನರು ನಿರ್ದಿಷ್ಟ ಉದ್ದೇಶಕ್ಕಾಗಿ ಅವರನ್ನು (ಪ್ರತಿಪಕ್ಷಗಳು) ಕಳುಹಿಸಿದ್ದಾರೆ. ಆದರೆ, ಜನರ ಭಾವನೆಗಳಿಗೆ ದ್ರೋಹ ಮಾಡುತ್ತಿದ್ದಾರೆ. ದೇಶದ ಒಳಿತು ಮತ್ತು ಭವಿಷ್ಯದ ಬಗ್ಗೆ ನಾವು ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಬೇಕಾದ ಈ ಸಮಯದಲ್ಲಿ ಪ್ರತಿಪಕ್ಷಗಳು ರಾಜಕೀಯ ಮಾಡಲು ಹೆಚ್ಚು ಆಸಕ್ತಿ ತೋರಿಸುತ್ತಿವೆ'' ಎಂದು ಟೀಕಿಸಿದರು.

''ಪ್ರತಿಪಕ್ಷಗಳಿಗೆ ದೇಶದ ಭವಿಷ್ಯದ ಬಗ್ಗೆ ಆಸಕ್ತಿಯಿಲ್ಲ. ಅವರಿಗೆ ತಮ್ಮ ಪಕ್ಷದ ಬಗ್ಗೆಯೇ ಹೆಚ್ಚು ಚಿಂತೆ. ನಾನು 2018ರಲ್ಲಿ ಪ್ರತಿಪಕ್ಷಗಳಿಗೆ, ಸ್ವಲ್ಪ ತಯಾರಾಗಿ ಬನ್ನಿ ಎಂದು ಹೇಳಿದ್ದೆ. 2023ನೇ ವರ್ಷ ಬಂದರೂ ಪ್ರತಿಪಕ್ಷಗಳು ತಯಾರಿ ಮಾಡಿಕೊಂಡಿಲ್ಲ. ಕಳೆದ ಐದು ವರ್ಷಗಳಷ್ಟು ಸಮಯ ಸಿಕ್ಕರೂ ಪ್ರತಿಪಕ್ಷಗಳು ತಯಾರಾಗಿಲ್ಲ. ಅವಿಶ್ವಾಸ ನಿರ್ಣಯ ನಿಮ್ಮ (ಪ್ರತಿಪಕ್ಷ) ಕಡೆಯಿಂದ ಬಂದರೂ, ನಮ್ಮ ಕಡೆಗಳಿಂದ ಬೌಂಡರಿ, ಸಿಕ್ಸರ್​ಗಳು ಸಿಡಿದವು'' ಎಂದು ಮೋದಿ ತಿಳಿಸಿದರು.

ಅವಿಶ್ವಾಸ ನಿಲುವಳಿಯನ್ನು ಪ್ರತಿಪಕ್ಷದ ನಾಯಕ ಅಧೀರ್ ರಂಜನ್​ ಚೌಧರಿ ಬದಲಿಗೆ ಉಪ ನಾಯಕ ಗೌರವ್​​ ಗೊಗೊಯ್​ ಮಂಡಿಸಿದ್ದನ್ನು ವ್ಯಂಗ್ಯವಾಡಿದ ಮೋದಿ, ''ಅಧೀರ್ ಬಾಬು ಅವರನ್ನು ಏಕೆ ಮೂಲೆಗುಂಪು ಮಾಡಲಾಗಿದೆ?. ಕೋಲ್ಕತ್ತಾದಿಂದ ಏನಾದರೂ ಕರೆ ಬಂದಿರಬಹುದೇ, ನನಗೆ ಗೊತ್ತಿಲ್ಲ'' ಎಂದರು.

ಇದನ್ನೂ ಓದಿ: ಪ್ರಧಾನಿ ಏನು ಭಗವಂತನೇ.. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಪ್ರಶ್ನೆ

''ನಮ್ಮ ಗಮನ ದೇಶದ ಅಭಿವೃದ್ಧಿಯತ್ತ ಇರಬೇಕು. ಇದು ಇಂದಿನ ಅಗತ್ಯ ಕೂಡಾ. ನಮ್ಮ ಯುವಕರಿಗೆ ಕನಸುಗಳನ್ನು ನನಸು ಮಾಡುವ ಶಕ್ತಿ ಇದೆ. ದೇಶದ ಜನರಿಗೆ ಭ್ರಷ್ಟಾಚಾರಮುಕ್ತ ಸರ್ಕಾರ, ಆಕಾಂಕ್ಷೆಗಳು ಮತ್ತು ಅವಕಾಶಗಳನ್ನು ನೀಡಿದ್ದೇವೆ'' ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

''ನಮ್ಮ ಏಕೈಕ ನಿರ್ಣಯ ಮತ್ತು ಗುರಿ ದೇಶದ ಅಭಿವೃದ್ಧಿಯಾಗಬೇಕು. ಆದರೆ, ಕೆಲವರು ಜಾಗತಿಕ ಮಟ್ಟದಲ್ಲಿ ನಮ್ಮ ಪ್ರತಿಷ್ಠೆ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಜಗತ್ತಿಗೆ ಸತ್ಯ ಗೊತ್ತಿದೆ'' ಎಂದರು.

''ಭಾರತದಲ್ಲಿ ಕಳೆದ ಐದು ವರ್ಷಗಳಲ್ಲಿ 13.5 ಕೋಟಿ ಜನರು ಬಡತನದಿಂದ ಮೇಲೆ ಬಂದಿದ್ದಾರೆ ಎಂದು ನೀತಿ ಆಯೋಗದ ವರದಿ ಹೇಳಿದೆ. ಭಾರತವು ಬಹುತೇಕ ಬಡತನವನ್ನು ಕೊನೆಗೊಳಿಸಿದೆ ಎಂದು ಐಎಂಎಫ್​ ತಿಳಿಸಿದೆ. ಸ್ವಚ್ಛ ಭಾರತ ಅಭಿಯಾನವು ಮೂರು ಲಕ್ಷ ಜನರ ಜೀವ ಉಳಿಸಲು ಸಹಾಯ ಮಾಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವಿಶ್ಲೇಷಣೆ ಮಾಡಿದೆ. ಈ ಅಭಿಮಾನದಿಂದ ಪ್ರತಿ ವರ್ಷ ಬಡ ಜನರಿಗೆ 50 ಸಾವಿರ ರೂಪಾಯಿ ಉಳಿತಾಯವಾಗುತ್ತಿದೆ'' ಎಂದು ಪ್ರಧಾನಿ ಮೋದಿ ಹೇಳಿದರು.

Last Updated : Aug 10, 2023, 8:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.