ನವದೆಹಲಿ: ಇಂದಿನಿಂದ ಎರಡನೇ ಹಂತದ ಬಜೆಟ್ ಅಧಿವೇಶನ ಆರಂಭಗೊಂಡಿದ್ದು, ಈ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ನೇ ಸಾಲಿನ ಜಮ್ಮು-ಕಾಶ್ಮೀರ ಬಜೆಟ್ ಮಂಡನೆ ಮಾಡಿದ್ದಾರೆ.
ಒಟ್ಟು 1.42 ಲಕ್ಷ ಕೋಟಿ ಕೋಟಿ ರೂ. ಬಜೆಟ್ ಮಂಡಿಸಿರುವ ನಿರ್ಮಲಾ ಸೀತಾರಾಮನ್, ಕಾಶ್ಮೀರಕ್ಕೆ ಹೆಚ್ಚುವರಿ ಅನುದಾನದ ಬೇಡಿಕೆ ಸಹ ಮಂಡಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶದ ಅಂದಾಜು ಸ್ವೀಕೃತಿಗಳು ಮತ್ತು ವೆಚ್ಚಗಳನ್ನ ಅಧಿಕೃತವಾಗಿ ಪ್ರಸ್ತುತಪಡಿಸಿರುವ ನಿರ್ಮಲಾ ಸೀತಾರಾಮನ್, ಬಜೆಟ್ ಮೇಲಿನ ಚರ್ಚೆ ನಡೆಸಲು ಕೆಲವೊಂದು ನಿಯಮ ಅಮಾನತುಗೊಳಿಸುವಂತೆ ಮನವಿ ಮಾಡಿದರು. ಆದರೆ, ಇದಕ್ಕೆ ಪ್ರತಿಪಕ್ಷದ ಸಂಸದ ಮನೀಶ್ ತಿವಾರಿ ಮತ್ತು ಎನ್ ಕೆ ಪ್ರೇಮಚಂದ್ರನ್ ವಿರೋಧಿಸಿದರು.
ನಿಯಮ ತಿದ್ದುಪಡಿ ಮಾಡುವ ಅಧಿಕಾರ ಸದನಕ್ಕೆ ಇಲ್ಲವೆಂದು ತಿವಾರಿ ವಾದ ಮಂಡಿಸಿದ್ದು, ಕಳೆದ ಮೂರು ವರ್ಷಗಳಿಂದ ಪ್ರವಾಸೋದ್ಯಮ ಹಾಗೂ ಕರಕುಶಲ ಕೈಗಾರಿಕೋದ್ಯಮ ಸಂಪೂರ್ಣವಾಗಿ ಸಂಕಷ್ಟಕ್ಕೆ ಸಿಲುಕಿದೆ. ಇದಕ್ಕೆ ಕೇಂದ್ರ ಸರ್ಕಾರ ಯಾವೆಲ್ಲ ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆ ಸದನಕ್ಕೆ ತಿಳಿಸುವಂತೆ ಪಟ್ಟು ಹಿಡಿದರು.