ETV Bharat / bharat

ಮಹಿಳಾ ದಿನಾಚರಣೆ ವಿಶೇಷ: ಸತತ ಎಂಟು ವರ್ಷಗಳ ಹೋರಾಟದಲ್ಲಿ ಗೆದ್ದ ನೊಂದ ತಾಯಿ, ವಕೀಲೆ!

author img

By

Published : Mar 8, 2021, 8:57 AM IST

ಎಷ್ಟೋ ಬಾರಿ ಬಿದ್ರು, ಸ್ಥಿರಗೊಂಡ್ರು, ಮತ್ತೆ ಮೇಲೆದ್ರು. ಮನಗುಂದದೆ ಸತ್ಯದ ವಿರುದ್ಧ ಕೊನೆಯವರೆಗೂ ಹೊರಾಡಿ ಸೋಲೊಪ್ಪಲಿಲ್ಲ. ಇದು ನಿರ್ಭಯವಾಗಿಯೇ ‘ನಿರ್ಭಯ’ಗಾಗಿ ನಡೆದ ಸಂರ್ಘಷದಲ್ಲಿ ಜಯ ಗಳಿಸಿದ ನಿರ್ಭಯ ತಾಯಿಯ ಕಥೆ.

Nirbhaya mother and Seema Kushwaha  nirbhaya mother asha devi  struggle of nirbhaya mother  struggle of nirbhaya case lawyer  women day special story on etv bharat delhi  ಮಹಿಳಾ ದಿನಾಚರಣೆ ವಿಶೇಷ  ನಿರ್ಭಯ ತಾಯಿ ಆಶಾ ದೇವಿ  ನಿರ್ಭಯ ತಾಯಿ ಆಶಾ ದೇವಿ ಮತ್ತು ವಕೀಲೆ ಸೀಮಾ ಕುಶ್ವಾಹ  ನಿರ್ಭಯ ತಾಯಿ ಆಶಾ ದೇವಿ ಸುದ್ದಿ
ಸತತ ಎಂಟು ವರ್ಷಗಳ ಹೋರಾಟದಲ್ಲಿ ಗೆದ್ದ ನೊಂದ ತಾಯಿ

ನವದೆಹಲಿ: ಅದು 2012ನೇ ವರ್ಷ. ಆ ಸುದ್ದಿ ಕೇಳಿ ಇಡೀ ಪ್ರಪಂಚವೇ ಬೆಚ್ಚಿಬಿದ್ದ ಘಟನೆ. ಈ ಘಟನೆ ನಡೆದು ಈಗಾಗಲೇ 8-9 ವರ್ಷ ಕಳೆದು ಹೋಗಿದೆ. ಆದ್ರೂ ಸಹ ಈ ಘಟನೆ ಇನ್ನೂ ಅಚ್ಚಳಿಯದೇ ನೆನಪಿನಲ್ಲಿದೆ. ನಾನು ಹೇಳುತ್ತಿರುವ ಘಟನೆ 16 ಡಿಸೆಂಬರ್​ 2012ರಲ್ಲಿ ನಡೆದ ನಿರ್ಭಯ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ.

ಈ ಅತ್ಯಾಚಾರ ಮತ್ತು ಅವಳು ಆಸ್ಪತ್ರೆಯಲ್ಲಿ ನರಳಿ - ನರಳಿ ಪ್ರಾಣಬಿಟ್ಟ ಘಟನೆ ಇಡೀ ಪ್ರಪಂಚವನ್ನೇ ಬೆಚ್ಚಿ ಬೀಳಿಸಿತ್ತು. ಅಪರಾಧಿಗಳ ವಿರುದ್ಧ ಇಡೀ ದೇಶವೇ ಆಕ್ರೋಶಗೊಂಡು ಒಗ್ಗಟ್ಟಾಗಿ ಪ್ರತಿಭಟಿಸಿತ್ತು. ಅದೇ ಸಮಯದಲ್ಲಿ ನಿರ್ಭಯ ತಾಯಿ ಕಗ್ಗತ್ತಲೆಯಲ್ಲಿ ಅರಳುತ್ತಿರುವ ಸೂರ್ಯನಂತೆ ಉದಯಿಸಿದರು. ನ್ಯಾಯಕ್ಕಾಗಿ ನ್ಯಾಯಾಲಯದ ಸುತ್ತ ತಿರುಗಿ ಜಯ ಗಳಿಸಿದರು. ಏಕೆಂದರೆ ಆ ತಾಯಿಗೆ ಮಗಳ ನೋವು ಗೊತ್ತಿತ್ತು.

ಇಂದು ಮಹಿಳೆಯ ದಿನ. ಇದರ ನಿಮಿತ್ತ ಒಬ್ಬ ತಾಯಿ ತನ್ನ ಮಗಳಿಗಾಗಿ ಪಟ್ಟ ಆ ಕಷ್ಟದ ಬಗ್ಗೆ ಮತ್ತೊಮ್ಮೆ ಹೇಳುತ್ತಿದ್ದೇವೆ. ಅತ್ಯಾಚಾರದ ನಂತರ ನಿರ್ಭಯಾ 12-13 ದಿನಗಳ ಕಾಲ ಜೀವಂತವಾಗಿದ್ದರು. ಆದರೆ, ಅಂತಹ ಸ್ಥಿತಿಯಲ್ಲಿದ್ದಾಗ ಆಕೆಗೆ ಒಂದು ಚಮಚ ನೀರು ನೀಡಲು ಸಾಧ್ಯವಾಗಲಿಲ್ಲ ಎಂದು ಆಶಾ ದೇವಿ ಹೇಳುತ್ತಾರೆ.

ಆಕೆ ನೀರು ಕೇಳುತ್ತಿದ್ದಳು. ಆದರೆ ನಮಗೆ ನೀರು ನೀಡಲು ಸಾಧ್ಯವಾಗಲಿಲ್ಲ. ಆ ಘಟನೆ ನನ್ನ ಹೃದಯದಲ್ಲಿ ಅಚ್ಚಳಿಯದೇ ಹಾಗೇ ಉಳಿದಿದೆ. ಮಗಳು ನಮ್ಮೊಂದಿಗೆ ಇಲ್ಲ. ಆದರೆ, ಮಹಿಳೆಯರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಯಾವಾಗಲೂ ಧ್ವನಿ ನೀಡುತ್ತೇನೆ ಎಂದು ಆಶಾ ದೇವಿ ಹೇಳುತ್ತಾರೆ.

’’ನಾನು ಜೀವನದಲ್ಲಿ ಏನು ಮಾಡುತ್ತೇನೆ ಗೊತ್ತಿಲ್ಲ. ಆದರೆ ಅನ್ಯಾಯವಾಗುವ ಪ್ರತಿಯೊಬ್ಬ ಹುಡುಗಿಯ ಬೆನ್ನಿಗೆ ನಿಲ್ಲುತ್ತೇನೆ. ಆಗೆಯೇ ನನ್ನ ಶಕ್ತಿ ಮೀರಿ ನ್ಯಾಯಕ್ಕಾಗಿ ಹೋರಾಡುತ್ತೇನೆ’’ ಎಂಬುದು ಆಶಾ ದೇವಿಯ ಮಾತಾಗಿದೆ.

ಜೈಲಿನ ಕೈಪಿಡಿ ಪ್ರಕಾರ ಅಪರಾಧಿಗಳು ಕೊನೆಯ ಕ್ಷಣದವರೆಗೂ ಬದುಕುವ ಅಧಿಕಾರವಿದೆ. ಒಂದಕ್ಕಿಂತ ಹೆಚ್ಚು ಅಪರಾಧಿಗಳಿದ್ರೆ, ಅಂತವರಿಗೆ ಏಕಕಾಲದಲ್ಲಿ ಶಿಕ್ಷೆ ನೀಡಲಾಗುತ್ತೆ. ಅಂತಹ ಪರಿಸ್ಥಿತಿಯಲ್ಲಿ ಆಶಾ ದೇವಿ ಅನೇಕ ಬಾರಿ ನೋವು ಅನುಭವಿಸಿದ್ದಾರೆ. ನಿರ್ಭಯಾ ಘಟನೆಯಿಂದ ನಾವು ಕಲಿಯಬೇಕಾಗಿದ್ದು ಬಹಳಷ್ಟಿದೆ.

’’ಸಂತ್ರಸ್ತರಿಗೆ ಯಾವುದೇ ಹಕ್ಕುಗಳು ದೊರೆಯುವುದಿಲ್ಲ. ನಾವು ಬಲಿಪಶುಗಳಂತೆ ಕಾಯುತ್ತಿರುತ್ತೇವೆ. ಅಪರಾಧಿಗಳು ಅರ್ಜಿ ಮೇಲೆ ಅರ್ಜಿ ಹಾಕುತ್ತಲೇ ಇರುತ್ತಾರೆ’’ - ಆಶಾ ದೇವಿ, ನಿರ್ಭಯಾ ತಾಯಿ

ಆಶಾ ದೇವಿಯ ಮನಸ್ಸು ಹಲವು ಬಾರಿ ದಿಗ್ಭ್ರಮೆಗೊಂಡಿತು. ಮಗಳಿಗೆ ನ್ಯಾಯ ಸಿಗುತ್ತದೆಯೋ ಇಲ್ಲವೋ ಎಂದು ಪ್ರತಿ ಬಾರಿಯೂ ಯೋಚಿಸುತ್ತಿದ್ದರು. ಅಪರಾಧಿಗಳಿಗೆ ಅನೇಕ ಬಾರಿ ಗಲ್ಲಿಗೇರಿಸುವುದನ್ನು ಮುಂದೂಡಲಾಯಿತು. ಆಗ ಅವರ ಮನಸ್ಸಿನಲ್ಲಿ ಹಲವು ಬಾರಿ ಪ್ರಶ್ನೆಗಳು ಹುಟ್ಟಿಕೊಂಡವು. ವ್ಯವಸ್ಥೆಯನ್ನು ಬದಲಾಯಿಸುವ ಬಗ್ಗೆ ಯೋಚಿಸಲು ಯಾರೂ ಸಿದ್ಧರಿಲ್ಲ ಎಂದು ಅವರು ತಿಳಿದಿದ್ದರು. ಆದರೆ ಅಂತಿಮವಾಗಿ ನ್ಯಾಯ ಸಿಕ್ಕಿದೆ. ಹೀಗಾಗಿ ಯಾರೇ ಅನ್ಯಾಯಕ್ಕೊಳಗಾಗಲಿ ಅವರ ನೆರವಿಗೆ ನಿಲ್ಲುತ್ತೇನೆ ಎಂದು ಆಶಾದೇವಿ ಹೇಳಿದ್ದಾರೆ,

'ನಾವು ಸಣ್ಣ ಘಟನೆಗಳತ್ತ ಗಮನ ಹರಿಸಿದರೆ, ದೊಡ್ಡ ಘಟನೆಗಳನ್ನು ನಿಲ್ಲಿಸಬಹುದು. ನೀವು ಅಪರಾಧವನ್ನು ನಿಲ್ಲಿಸುವುದರ ಬಗ್ಗೆ ಮಾತನಾಡಿ. - ಆಶಾ ದೇವಿ, ನಿರ್ಭಯಾ ಅವರ ತಾಯಿ '

ಈ ಕಷ್ಟ ಪ್ರಯಾಣದಲ್ಲಿ ನಿರ್ಭಯಾ ತಾಯಿಯನ್ನು ಬೆಂಬಲಿಸಿದ ಎರಡನೇ ಮಹಿಳೆ ಸೀಮಾ ಕುಶ್ವಾಹಾ. ಇವರು ನಿರ್ಭಯಾ ಪ್ರಕರಣದ ವಕೀಲೆ. ನಿರ್ಭಯ ಪ್ರಕರಣದಲ್ಲಿ ಹಗಲು-ರಾತ್ರಿಯೆನ್ನದೇ ನ್ಯಾಯ ಸಿಗುವವರಿಗೆ ಹೋರಾಟ ನಡೆಸಿದ್ದಾರೆ ಸೀಮಾ.

'ಮಗಳಿಗೆ ಬೇಕಾಗಿರುವುದು ನಿಬಂಧನೆಯಲ್ಲ. ಮರಣದಂಡನೆಗೆ ಕಾನೂನಿನಲ್ಲಿ ಅವಕಾಶವಿದೆ. ಶಿಕ್ಷೆ ಪಡೆದ ನಂತರವೂ ನೋವು ಇನ್ನೂ ಕಡಿಮೆಯಾಗಿಲ್ಲ‘ - ಸೀಮಾ ಕುಶ್ವಾಹ, ನಿರ್ಭಯಾ ಪ್ರಕರಣದ ವಕೀಲ '

ಹೀಗೆ ಇವರ ಹೋರಾಟ ಎಂಟು ವರ್ಷಗಳ ವರೆಗೆ ಸಾಗಿತು. ಕೊನೆಗೂ ಹಲವಾರು ವರ್ಷಗಳ ನಂತರ ಕಾನೂನು ಹೋರಾಟದಲ್ಲಿ ಅಂತಿಮವಾಗಿ ನಿರ್ಭಯಾಳ ಮೇಲೆ ಅತ್ಯಾಚಾರ ಎಸಗಿದ ಎಲ್ಲ ಆರೋಪಿಗಳಿಗೆ 2020 ರಲ್ಲಿ ಮರಣದಂಡನೆ ವಿಧಿಸಲಾಯಿತು. ತನ್ನ ಮಗಳ ವಿರುದ್ಧ ಏಕಾಂಗಿ ಹೋರಾಟ ನಡೆಸಿ ಗೆದ್ದ ಮಹಿಳೆ ಆಶಾ ದೇವಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.