ನವದೆಹಲಿ: ದೇಶವಿರೋಧಿ ಮತ್ತು ಭಯೋತ್ಪಾದನೆ, ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಜಮ್ಮು- ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಅಪರಾಧಿ ಎಂದು ದೆಹಲಿ ವಿಶೇಷ ನ್ಯಾಯಾಲಯ ಘೋಷಿಸಿದೆ.
ಇದಲ್ಲದೇ, ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ(ಯುಎಪಿಎ) ಅಡಿಯಲ್ಲೂ ಬರುವ ಪ್ರಕರಣಗಳಲ್ಲೂ ಮಲಿಕ್ ದೋಷಿಯಾಗಿದ್ದು, ಶಿಕ್ಷೆಯ ಪ್ರಮಾಣವನ್ನು ಮೇ 25 ರಂದು ಕೋರ್ಟ್ ಘೋಷಿಸಲಿದೆ. ಭಯೋತ್ಪಾದನಾ ಕೃತ್ಯ, ಭಯೋತ್ಪಾದನೆಗೆ ನಿಧಿ ಸಂಗ್ರಹಿಸುವುದು, ಕೃತ್ಯಕ್ಕೆ ಪಿತೂರಿ ಸೇರಿದಂತೆ ತನ್ನ ಮೇಲಿದ್ದ ಆರೋಪಗಳನ್ನು ಸ್ವತಃ ಮಲಿಕ್ ನ್ಯಾಯಾಲಯದ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ.
ಇದರ ವಿರುದ್ಧ ವಾದ ಮಂಡನೆ ಮಾಡುವುದಿಲ್ಲ. ತನ್ನೆಲ್ಲ ತಪ್ಪುಗಳನ್ನು ಒಪ್ಪಿಕೊಳ್ಳುತ್ತೇನೆ ಎಂದು ಮೇ 11 ರಂದು ತಿಳಿಸಿದ್ದ. 2019 ರಿಂದ ದೆಹಲಿಯ ತಿಹಾರ್ ಜೈಲಿನಲ್ಲಿ ಮಲಿಕ್ಗೆ ತನ್ನ ವಿರುದ್ಧದ ಗಂಭೀರ ಆರೋಪಗಳಿಂದಾಗಿ ಗರಿಷ್ಠ ಜೀವಾವಧಿ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.
ಓದಿ: ಡೋಂಗಿ ಬಾಬಾ ಹೇಳಿದ್ದಕ್ಕೆ ಬೆಂಕಿ ಮೇಲೆ ಕೈ - ಕಾಲು ಇಟ್ಟ ಯುವತಿ.. ಸುಟ್ಟ ಗಾಯಗಳಿಂದ ಆಸ್ಪತ್ರೆ ಪಾಲು