ಹೈದರಾಬಾದ್, ತೆಲಂಗಾಣ: ಹೈದರಾಬಾದ್ ಸುತ್ತ - ಮುತ್ತ ಪ್ರದೇಶಗಳಲ್ಲಿ ಚಿತ್ರ - ವಿಚಿತ್ರ ಘಟನೆಗಳು ನಡೆದಿದ್ದು, ಅವು ಕ್ಯಾಮೆರಾ ಕಣ್ಣಿಗೆ ಸಿಕ್ಕಿವೆ. ಅವುಗಳ ಬಗ್ಗೆ ತಿಳಿಯೋಣಾ ಬನ್ನಿ..
![News in pics Monkeys Troop on a building Hyderabad news in photos ಬಿಲ್ಡಿಂಗ್ ಹತ್ತಿದ ಮಂಗಗಳು ತ್ರಿಶೂಲ ಆಕಾರದಲ್ಲಿ ಮೆಣಸಿನ ಕಾಯಿ ಒಂದು ಫೋಟೋದಲ್ಲಿ ಸಾವಿರ ಪದಗಳು ಸೆರೆ ಹಿಡಿದ ಫೋಟೋಗಳು ಚಿತ್ರ ವಿಚಿತ್ರ ಘಟನೆಗಳು ಬಿಲ್ಡಿಂಗ್ ಹತ್ತಿದ ಮಂಗಗಳು ಮರದಲ್ಲಿ ಬಾವಲಿಗಳ ಕಲರವ ಹುಸೇನ್ ಸಾಗರದಲ್ಲಿ ಹಕ್ಕಿಗಳ ಮೋಜು ಮಸ್ತಿ ತ್ರಿಶೂಲ ರೂಪದಲ್ಲಿ ಮೆಣಸಿನಕಾಯಿ ಏಕತಾ ಮೂರ್ತಿಗೆ ಪ್ರಥಮ ವಾರ್ಷಿಕೋತ್ಸವ ವೆಂಕಟೇಶ್ವರ ದೇವಸ್ಥಾನದಲ್ಲಿ ಬ್ರಹ್ಮೋತ್ಸವ](https://etvbharatimages.akamaized.net/etvbharat/prod-images/17627300_monkey.jpg)
ಬಿಲ್ಡಿಂಗ್ ಹತ್ತಿದ ಮಂಗಗಳು: ತೆಲಂಗಾಣದ ಜೋಗುಲಾಂಬ ಗದ್ವಾಲ ಜಿಲ್ಲೆಯ ಉಂಡವಳ್ಳಿ ತಾಲೂಕಿನ ಕೇಂದ್ರದಲ್ಲಿ ಮಂಗಗಳ ಹಾವಳಿ ತೀವ್ರವಾಗಿದೆ. ಇಲ್ಲಿ ಸಾವಿರಾರು ಮಂಗಗಳಿದ್ದು, ಪ್ರತಿದಿನ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆ ಅವುಗಳನ್ನು ಓಡಿಸಲು.. ಗ್ರಾಮದಲ್ಲಿ ಬಬೂನ್ (ದಕ್ಷಿಣ ಏಷಿಯಾ ಖ೦ಡದ ಮ೦ಗ) ಖರೀದಿಸಿ ಸಾಕಿದ್ದಾರೆ. ಇತ್ತೀಚೆಗಷ್ಟೇ ಗ್ರಾಮದಲ್ಲಿ ತಿರುಗಾಡುತ್ತಿದ್ದ ಕೋತಿಗಳ ಗುಂಪೊಂದು ಬಬೂನ್‌ನನ್ನು ನೋಡಿ ಪಕ್ಕದ ಎರಡಂತಸ್ತಿನ ಮನೆಗೆ ಏಕಾಏಕಿ ಹತ್ತಿದಾಗ ತೆಗೆದ ಚಿತ್ರ ಇದಾಗಿದೆ.
![News in pics Monkeys Troop on a building Hyderabad news in photos ಬಿಲ್ಡಿಂಗ್ ಹತ್ತಿದ ಮಂಗಗಳು ತ್ರಿಶೂಲ ಆಕಾರದಲ್ಲಿ ಮೆಣಸಿನ ಕಾಯಿ ಒಂದು ಫೋಟೋದಲ್ಲಿ ಸಾವಿರ ಪದಗಳು ಸೆರೆ ಹಿಡಿದ ಫೋಟೋಗಳು ಚಿತ್ರ ವಿಚಿತ್ರ ಘಟನೆಗಳು ಬಿಲ್ಡಿಂಗ್ ಹತ್ತಿದ ಮಂಗಗಳು ಮರದಲ್ಲಿ ಬಾವಲಿಗಳ ಕಲರವ ಹುಸೇನ್ ಸಾಗರದಲ್ಲಿ ಹಕ್ಕಿಗಳ ಮೋಜು ಮಸ್ತಿ ತ್ರಿಶೂಲ ರೂಪದಲ್ಲಿ ಮೆಣಸಿನಕಾಯಿ ಏಕತಾ ಮೂರ್ತಿಗೆ ಪ್ರಥಮ ವಾರ್ಷಿಕೋತ್ಸವ ವೆಂಕಟೇಶ್ವರ ದೇವಸ್ಥಾನದಲ್ಲಿ ಬ್ರಹ್ಮೋತ್ಸವ](https://etvbharatimages.akamaized.net/etvbharat/prod-images/17627300_bavuli.jpg)
ಮರದಲ್ಲಿ ಬಾವಲಿಗಳ ಕಲರವ: ಎಪಿ ಮತ್ತು ಕರ್ನಾಟಕದ ಗಡಿಭಾಗವಾದ ಚಿತ್ತೂರು ಜಿಲ್ಲೆಯ ವಿ.ಕೋಟ ತಾಲೂಕಿನ ಚೆಲ್ಡಿಗಾನಿಪಲ್ಲಿಗೆ ಹೋಗುವ ಮಾರ್ಗದಲ್ಲಿ ರಸ್ತೆಯ ಇಕ್ಕೆಲಗಳಲ್ಲಿರುವ ಮರಗಳಲ್ಲಿ ನೂರಾರು ಬಾವಲಿಗಳು ಇವೆ. ಕೆಲವೊಮ್ಮೆ ಅವು ಆಕಾಶದಲ್ಲಿ ಹಾರಾಟ ನಡೆಸಿದಾಗ ಅಲ್ಲಿ ನೆರೆದಿದ್ದ ಜನರ ಕಣ್ಣುಗಳಿಗೆ ಹಬ್ಬ ನೀಡಿದಂತಾಗುತ್ತದೆ.
![News in pics Monkeys Troop on a building Hyderabad news in photos ಬಿಲ್ಡಿಂಗ್ ಹತ್ತಿದ ಮಂಗಗಳು ತ್ರಿಶೂಲ ಆಕಾರದಲ್ಲಿ ಮೆಣಸಿನ ಕಾಯಿ ಒಂದು ಫೋಟೋದಲ್ಲಿ ಸಾವಿರ ಪದಗಳು ಸೆರೆ ಹಿಡಿದ ಫೋಟೋಗಳು ಚಿತ್ರ ವಿಚಿತ್ರ ಘಟನೆಗಳು ಬಿಲ್ಡಿಂಗ್ ಹತ್ತಿದ ಮಂಗಗಳು ಮರದಲ್ಲಿ ಬಾವಲಿಗಳ ಕಲರವ ಹುಸೇನ್ ಸಾಗರದಲ್ಲಿ ಹಕ್ಕಿಗಳ ಮೋಜು ಮಸ್ತಿ ತ್ರಿಶೂಲ ರೂಪದಲ್ಲಿ ಮೆಣಸಿನಕಾಯಿ ಏಕತಾ ಮೂರ್ತಿಗೆ ಪ್ರಥಮ ವಾರ್ಷಿಕೋತ್ಸವ ವೆಂಕಟೇಶ್ವರ ದೇವಸ್ಥಾನದಲ್ಲಿ ಬ್ರಹ್ಮೋತ್ಸವ](https://etvbharatimages.akamaized.net/etvbharat/prod-images/17627300_sefed.jpg)
ಹುಸೇನ್ ಸಾಗರದಲ್ಲಿ ಹಕ್ಕಿಗಳ ಮೋಜು-ಮಸ್ತಿ: ಹೈದರಾಬಾದ್‌ನ ಸಂಜೀವಯ್ಯ ಪಾರ್ಕ್‌ನ ಚೆಂತಾ ಹುಸೇನ್ ಸಾಗರದ ನೀರಿನಲ್ಲಿ ಕೊಕ್ಕರೆ, ನವಿಲು ಮತ್ತಿತರ ಪಕ್ಷಿಗಳು ಕಾಣಿಸಿಕೊಂಡಿವೆ. ಪಕ್ಷಿಗಳು ಸೋಮವಾರ ಸಂಜೆ ಹಸಿರು ಮರಗಳು ಮತ್ತು ಹುಲ್ಲುಗಾವಲಿನಲ್ಲಿ ವಿಶ್ರಾಂತಿ ಪಡೆಯುತ್ತಿರುವಾಗ ಪ್ರವಾಸಿಗರ ಕ್ಯಾಮೆರಾಗೆ ಸಿಕ್ಕ ದೃಶ್ಯವಿದು.
![News in pics Monkeys Troop on a building Hyderabad news in photos ಬಿಲ್ಡಿಂಗ್ ಹತ್ತಿದ ಮಂಗಗಳು ತ್ರಿಶೂಲ ಆಕಾರದಲ್ಲಿ ಮೆಣಸಿನ ಕಾಯಿ ಒಂದು ಫೋಟೋದಲ್ಲಿ ಸಾವಿರ ಪದಗಳು ಸೆರೆ ಹಿಡಿದ ಫೋಟೋಗಳು ಚಿತ್ರ ವಿಚಿತ್ರ ಘಟನೆಗಳು ಬಿಲ್ಡಿಂಗ್ ಹತ್ತಿದ ಮಂಗಗಳು ಮರದಲ್ಲಿ ಬಾವಲಿಗಳ ಕಲರವ ಹುಸೇನ್ ಸಾಗರದಲ್ಲಿ ಹಕ್ಕಿಗಳ ಮೋಜು ಮಸ್ತಿ ತ್ರಿಶೂಲ ರೂಪದಲ್ಲಿ ಮೆಣಸಿನಕಾಯಿ ಏಕತಾ ಮೂರ್ತಿಗೆ ಪ್ರಥಮ ವಾರ್ಷಿಕೋತ್ಸವ ವೆಂಕಟೇಶ್ವರ ದೇವಸ್ಥಾನದಲ್ಲಿ ಬ್ರಹ್ಮೋತ್ಸವ](https://etvbharatimages.akamaized.net/etvbharat/prod-images/17627300_sefedffd.jpg)
ಈ ಮರವೇ ಸ್ಫೂರ್ತಿ: ಜೀವನದಲ್ಲಿ ಕೆಲವು ಏರಿಳಿತಗಳಿದ್ದರೂ ಕೆಲವರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹನುಮಕೊಂಡ ಸರ್ಕಿಟ್ ಗೆಸ್ಟ್ ಹೌಸ್ ಮುಖ್ಯರಸ್ತೆಯಲ್ಲಿ ರಸ್ತೆ ವಿಸ್ತರಣೆ ವೇಳೆ ಆಲದ ಮರವೊಂದು ಕೊಡಲಿಯಿಂದ ಕತ್ತರಿಸಿ, ಸುಟ್ಟು ಹಾಕಿದ್ದರು. ಆದರೂ ಸಹ ಈ ಮರ ಮೊಳಕೆಯೊಡೆದು ಎಲೆಗಳಿಂದ ಕಂಗೊಳಿಸುತ್ತಿದೆ. ಅಂದ್ರೆ.. ಎದೆಗುಂದದೆ ಜೀವನದಲ್ಲಿ ಮುನ್ನಡೆಯಬೇಕು ಎಂಬ ಸಂದೇಶವನ್ನು ಈ ಮರ ಸಾರುತ್ತಿದೆ..
![News in pics Monkeys Troop on a building Hyderabad news in photos ಬಿಲ್ಡಿಂಗ್ ಹತ್ತಿದ ಮಂಗಗಳು ತ್ರಿಶೂಲ ಆಕಾರದಲ್ಲಿ ಮೆಣಸಿನ ಕಾಯಿ ಒಂದು ಫೋಟೋದಲ್ಲಿ ಸಾವಿರ ಪದಗಳು ಸೆರೆ ಹಿಡಿದ ಫೋಟೋಗಳು ಚಿತ್ರ ವಿಚಿತ್ರ ಘಟನೆಗಳು ಬಿಲ್ಡಿಂಗ್ ಹತ್ತಿದ ಮಂಗಗಳು ಮರದಲ್ಲಿ ಬಾವಲಿಗಳ ಕಲರವ ಹುಸೇನ್ ಸಾಗರದಲ್ಲಿ ಹಕ್ಕಿಗಳ ಮೋಜು ಮಸ್ತಿ ತ್ರಿಶೂಲ ರೂಪದಲ್ಲಿ ಮೆಣಸಿನಕಾಯಿ ಏಕತಾ ಮೂರ್ತಿಗೆ ಪ್ರಥಮ ವಾರ್ಷಿಕೋತ್ಸವ ವೆಂಕಟೇಶ್ವರ ದೇವಸ್ಥಾನದಲ್ಲಿ ಬ್ರಹ್ಮೋತ್ಸವ](https://etvbharatimages.akamaized.net/etvbharat/prod-images/17627300_menasinagai.jpg)
ತ್ರಿಶೂಲ ರೂಪದಲ್ಲಿ ಮೆಣಸಿನಕಾಯಿ: ಏಲೂರು ಜಿಲ್ಲೆಯ ವೇಲೇರುಪಾಡು ತಾಲೂಕಿನ ಭೂದೇವಿಪೇಟೆ ಗ್ರಾಮದ ರೈತ ಪಿ.ಹರಿಬಾಲಕೃಷ್ಣ ಅವರು ತಮ್ಮ ಹೊಲದಲ್ಲಿ ಮೆಣಸಿನಕಾಯಿ ಬೆಳೆ ಹಾಕಿದ್ದಾರೆ. ಅವರ ಹೊಲದಲ್ಲಿ ತ್ರಿಶೂಲ ಆಕಾರ ಮೆಣಸಿನಕಾಯಿಯೊಂದ ಬೆಳೆದಿದ್ದು, ಇದನ್ನು ನೋಡಿದ ಹರಿಬಾಲಕೃಷ್ಣ ಕುಟುಂಬಸ್ಥರು ಅಚ್ಚರಿಗೊಂಡಿದ್ದಾರೆ. ಅಷ್ಟೇ ಅಲ್ಲ ಇದನ್ನು ಸ್ಥಳೀಯರು ಸಹ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.
![News in pics Monkeys Troop on a building Hyderabad news in photos ಬಿಲ್ಡಿಂಗ್ ಹತ್ತಿದ ಮಂಗಗಳು ತ್ರಿಶೂಲ ಆಕಾರದಲ್ಲಿ ಮೆಣಸಿನ ಕಾಯಿ ಒಂದು ಫೋಟೋದಲ್ಲಿ ಸಾವಿರ ಪದಗಳು ಸೆರೆ ಹಿಡಿದ ಫೋಟೋಗಳು ಚಿತ್ರ ವಿಚಿತ್ರ ಘಟನೆಗಳು ಬಿಲ್ಡಿಂಗ್ ಹತ್ತಿದ ಮಂಗಗಳು ಮರದಲ್ಲಿ ಬಾವಲಿಗಳ ಕಲರವ ಹುಸೇನ್ ಸಾಗರದಲ್ಲಿ ಹಕ್ಕಿಗಳ ಮೋಜು ಮಸ್ತಿ ತ್ರಿಶೂಲ ರೂಪದಲ್ಲಿ ಮೆಣಸಿನಕಾಯಿ ಏಕತಾ ಮೂರ್ತಿಗೆ ಪ್ರಥಮ ವಾರ್ಷಿಕೋತ್ಸವ ವೆಂಕಟೇಶ್ವರ ದೇವಸ್ಥಾನದಲ್ಲಿ ಬ್ರಹ್ಮೋತ್ಸವ](https://etvbharatimages.akamaized.net/etvbharat/prod-images/17627300_equlity.jpg)
ಏಕತಾ ಮೂರ್ತಿಗೆ ಪ್ರಥಮ ವಾರ್ಷಿಕೋತ್ಸವ ಸಂಭ್ರಮ: ಏಕತಾ ಮೂರ್ತಿ ಸ್ಪೂರ್ತಿ ಕೇಂದ್ರ ಶ್ರೀ ರಾಮಾನುಜಾಚಾರ್ಯ-108 ದಿವ್ಯದೇಶಗಳ ಪ್ರಥಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹೈದರಾಬಾದ್‌ನ ಉಪನಗರ ಶ್ರೀರಾಮನಗರದಲ್ಲಿ ಫೆಬ್ರವರಿ 2 ರಿಂದ 12 ರವರೆಗೆ ಬ್ರಹ್ಮೋತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದೆ. ಈ ಬಗ್ಗೆ ತ್ರಿದಂಡಿ ರಾಮಾನುಜ ಚೈನಾಜಿಯರ್ ಸ್ವಾಮಿ ತಿಳಿಸಿದ್ದಾರೆ.
![News in pics Monkeys Troop on a building Hyderabad news in photos ಬಿಲ್ಡಿಂಗ್ ಹತ್ತಿದ ಮಂಗಗಳು ತ್ರಿಶೂಲ ಆಕಾರದಲ್ಲಿ ಮೆಣಸಿನ ಕಾಯಿ ಒಂದು ಫೋಟೋದಲ್ಲಿ ಸಾವಿರ ಪದಗಳು ಸೆರೆ ಹಿಡಿದ ಫೋಟೋಗಳು ಚಿತ್ರ ವಿಚಿತ್ರ ಘಟನೆಗಳು ಬಿಲ್ಡಿಂಗ್ ಹತ್ತಿದ ಮಂಗಗಳು ಮರದಲ್ಲಿ ಬಾವಲಿಗಳ ಕಲರವ ಹುಸೇನ್ ಸಾಗರದಲ್ಲಿ ಹಕ್ಕಿಗಳ ಮೋಜು ಮಸ್ತಿ ತ್ರಿಶೂಲ ರೂಪದಲ್ಲಿ ಮೆಣಸಿನಕಾಯಿ ಏಕತಾ ಮೂರ್ತಿಗೆ ಪ್ರಥಮ ವಾರ್ಷಿಕೋತ್ಸವ ವೆಂಕಟೇಶ್ವರ ದೇವಸ್ಥಾನದಲ್ಲಿ ಬ್ರಹ್ಮೋತ್ಸವ](https://etvbharatimages.akamaized.net/etvbharat/prod-images/17627300_venktesh.jpg)
ವೆಂಕಟೇಶ್ವರ ದೇವಸ್ಥಾನದಲ್ಲಿ ಬ್ರಹ್ಮೋತ್ಸವ: ಸೋಮವಾರ ಸಂಜೆ ಹೈದರಾಬಾದ್ ಶೇಕ್‌ಪೇಟ್ ಓಯು ಕಾಲೋನಿಯ ವೆಂಕಟೇಶ್ವರ ದೇವಸ್ಥಾನದ ಬ್ರಹ್ಮೋತ್ಸವವು ಕಣ್ಣಿಗೆ ಹಬ್ಬ ನೀಡಿತ್ತು. ಸಾವಿರಾರೂ ದೀಪಗಳೊಂದಿಗೆ ದೇವಸ್ಥಾನವು ಜಗಮಗಿಸುತ್ತಿತ್ತು. ಅನೇಕ ಭಕ್ತರು ಇಲ್ಲಿಗೆ ಭೇಟಿ ನೀಡಿ ಸ್ವಾಮಿಗಳ ದರ್ಶನ ಪಡೆದರು.
ಓದಿ: ಗೋರಖ್ಪುರ ಪ್ರವೇಶಿಸಿದ ಶ್ರೀರಾಮ ಮಂದಿರ ಶಾಲಿಗ್ರಾಮ ಬಂಡೆಗಳು: ನಾಳೆ ಅಯೋಧ್ಯೆಯತ್ತ ಪಯಣ