ETV Bharat / bharat

ಹೊಸ ವರ್ಷ 2023: ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರ ಶುಭ ಹಾರೈಕೆ - ಮಲ್ಲಿಕಾರ್ಜುನ್ ಖರ್ಗೆ ಟ್ವೀಟ್​

ಇಂದು 2023, ಹೊಸ ವರ್ಷಾರಂಭ. ದೇಶದ ಜನತೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಹಾಗು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸೇರಿದಂತೆ ರಾಜಕೀಯ ಗಣ್ಯರು ಶುಭಾಶಯ ತಿಳಿಸಿದ್ದಾರೆ.

Modi
ಮೋದಿ
author img

By

Published : Jan 1, 2023, 9:45 AM IST

Updated : Jan 1, 2023, 9:51 AM IST

ನವದೆಹಲಿ: ಜಗತ್ತು 2022ನೇ ವರ್ಷವನ್ನು ಪೂರ್ಣಗೊಳಿಸಿ ಇಂದು 2023ನೇ ಇಸವಿಗೆ ಕಾಲಿಟ್ಟಿದೆ. ದೇಶದೆಲ್ಲೆಡೆ ಕಳೆದ ಮಧ್ಯರಾತ್ರಿಯಿಂದಲೇ ಭರ್ಜರಿ ಡ್ಯಾನ್ಸ್-ಪಾರ್ಟಿಗಳೊಂದಿಗೆ ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಗುತ್ತಿದೆ. ದೇಶದ ಜನತೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ವರಿಷ್ಠ​ ನಾಯಕ ರಾಹುಲ್​ ಗಾಂಧಿ, ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಹೆಚ್.​ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಹೊಸ ವರ್ಷಕ್ಕೆ ಶುಭ ಕೋರಿದ್ದಾರೆ.

  • Happy New Year to all! Greetings and best wishes to all fellow citizens and Indians living abroad. May the Year 2023 bring new inspirations, goals and achievements in our lives. Let us resolve to rededicate ourselves to the unity, integrity and inclusive development of the nation

    — President of India (@rashtrapatibhvn) January 1, 2023 " class="align-text-top noRightClick twitterSection" data=" ">

ರಾಷ್ಟ್ರದ ಏಕತೆ, ಸಮಗ್ರತೆಗೆ ಸಮರ್ಪಿಸಿಕೊಳ್ಳೋಣ- ರಾಷ್ಟ್ರಪತಿ: 'ದೇಶದ ಎಲ್ಲಾ ನಾಗರಿಕರು ಮತ್ತು ವಿದೇಶದಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ಹೊಸ ವರ್ಷದ ಶುಭಾಶಯಗಳು. 2023 ರ ವರ್ಷವು ನಮ್ಮ ಜೀವನದಲ್ಲಿ ಹೊಸ ಸ್ಫೂರ್ತಿ, ಗುರಿ ಮತ್ತು ಸಾಧನೆಗಳನ್ನು ತರಲಿ. ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಅಂತರ್ಗತ ಅಭಿವೃದ್ಧಿಗೆ ನಮ್ಮನ್ನು ನಾವು ಸಮರ್ಪಿಸಿಕೊಳ್ಳಲು ಸಂಕಲ್ಪ ಮಾಡೋಣ' ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್‌​ನಲ್ಲಿ ತಿಳಿಸಿದ್ದಾರೆ.

  • Have a great 2023! May it be filled with hope, happiness and lots of success. May everyone be blessed with wonderful health.

    — Narendra Modi (@narendramodi) January 1, 2023 " class="align-text-top noRightClick twitterSection" data=" ">

ದೇವರು ಎಲ್ಲರಿಗೂ ಉತ್ತಮ ಆರೋಗ್ಯ ಕರುಣಿಸಲಿ-ಪ್ರಧಾನಿ: ನರೇಂದ್ರ ಮೋದಿ ಅವರು, 'ಎಲ್ಲರಿಗೂ 2023 ರ ಹೊಸ ವರ್ಷದ ಶುಭ ಕಾಮನೆಗಳು. ಈ ವರ್ಷ ಹೊಸ ಭರವಸೆ, ಸಂತೋಷ ಮತ್ತು ಬಹಳಷ್ಟು ಯಶಸ್ಸನ್ನು ತಂದುಕೊಡಲಿ. ಪ್ರತಿಯೊಬ್ಬರಿಗೂ ದೇವರು ಉತ್ತಮ ಆರೋಗ್ಯ ಕರುಣಿಸುವಂತೆ ಆಶೀರ್ವದಿಸಲಿ' ಎಂದು ಹಾರೈಸಿದ್ದಾರೆ.

ಪ್ರೀತಿಯ ಅಂಗಡಿ ತೆರೆಯೋಣ- ರಾಹುಲ್ ಗಾಂಧಿ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಟ್ವೀಟಿಸಿ, '2023 ಆಶಾದಾಯಕವಾಗಿ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್​ ಬೆಂಬಲಿಸುವ ಮೂಲಕ ಪ್ರತಿ ಬೀದಿ, ಹಳ್ಳಿ ಮತ್ತು ಪ್ರತಿ ನಗರದಲ್ಲಿ ಪ್ರೀತಿಯ ಅಂಗಡಿ ತೆರೆಯೋಣ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು' ಎಂದಿದ್ದಾರೆ.

ದ್ವೇಷ ತೊರೆದು, ಭಾರತವನ್ನು ಒಗ್ಗೂಡಿಸೋಣ- ಖರ್ಗೆ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್​ ಮಾಡಿದ್ದು, 'ನನ್ನ ಪ್ರೀತಿಯ ನಾಗರಿಕರಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸುತ್ತೇನೆ. ಪ್ರತಿಯೊಬ್ಬರಿಗೂ ಈ ವರ್ಷ ಸಂತೋಷ ಮತ್ತು ಸಮೃದ್ಧಿಯಿಂದ ಕೂಡಿರಲೆಂದು ಬಯಸುತ್ತೇನೆ. 2022ರಲ್ಲಿ ಬಿಜೆಪಿ ಸರ್ಕಾರ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಬಿಜೆಪಿ ಮೋಸ ಮಾಡಿದೆ ಎಂಬುದು ಪ್ರತಿಯೊಬ್ಬ ಭಾರತೀಯನಿಗೂ ಗೊತ್ತು. ಪ್ರತಿಯೊಬ್ಬರು ದ್ವೇಷವನ್ನು ತೊರೆಯಿರಿ, ಭಾರತವನ್ನು ಒಗ್ಗೂಡಿಸಿ, ಜೈ ಹಿಂದ್' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಹಳೆ ವರ್ಷಕ್ಕೆ ಗುಡ್ ಬೈ, ಹೊಸ ವರ್ಷಕ್ಕೆ ಹಾಯ್! ಬೆಂಗಳೂರಿನಲ್ಲಿ ಮಧ್ಯರಾತ್ರಿ ಸಂಭ್ರಮ

ಸ್ವಾಭಿಮಾನದ ನಾಡು ಕಟ್ಟುವ ಸಂಕಲ್ಪ ಕೈಗೊಳ್ಳೋಣ- ಸಿದ್ದರಾಮಯ್ಯ: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, 'ಹಸಿವು, ಅಜ್ಞಾನ, ಅನಾರೋಗ್ಯ ಮುಕ್ತವಾದ ಸ್ವಾವಲಂಬಿ ಮತ್ತು ಸ್ವಾಭಿಮಾನದ ನಾಡು ಕಟ್ಟುವ ಸಂಕಲ್ಪ ಕೈಗೊಳ್ಳೋಣ. ಸುಳ್ಳನ್ನು ಸತ್ಯದಿಂದ, ಅನ್ಯಾಯವನ್ನು ನ್ಯಾಯದಿಂದ ಮತ್ತು ಅಧರ್ಮವನ್ನು ಧರ್ಮದಿಂದ ಎದುರಿಸುವ ಬದ್ದತೆಯ ಹೊಸವರ್ಷ ನಮ್ಮದಾಗಲಿ' ಎಂದು ಶುಭಕೋರಿದ್ದಾರೆ.

ಕನ್ನಡಿಗರ ಸ್ವಾಭಿಮಾನದ ಕಹಳೆ ಮೊಳಗಲಿದೆ- ಹೆಚ್‌ಡಿಕೆ: ನಾಡಿನ ಸಮಸ್ತ ಜನರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 2023ನೇ ವರ್ಷ ಕರ್ನಾಟಕದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಲಿದೆ ಹಾಗೂ ಕನ್ನಡಿಗರ ಸ್ವಾಭಿಮಾನದ ಕಹಳೆ ಮೊಳಗಲಿದೆ. ಎಲ್ಲಾ ಕನ್ನಡಿಗರಿಗೂ ಹೊಸ ವರ್ಷದಲ್ಲಿ ಒಳ್ಳೆಯದಾಗಲಿ ಹಾಗೂ ನಾಡಿನಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿ ಎಂದು ಹಾರೈಸುತ್ತೇನೆ ಎಂದು ಮಾಜಿ ಸಿಎಂ ಹೆಚ್.​ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ರಂಗೇರಿದ ಹೊಸ ವರುಷ ಸ್ವಾಗತ ಸಂಭ್ರಮ: ಹುಬ್ಬಳ್ಳಿಯಲ್ಲಿ ಕಪಲ್ಸ್​ ಡ್ಯಾನ್ಸ್​

Last Updated : Jan 1, 2023, 9:51 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.