ETV Bharat / bharat

ಹೊಸ ಚಿಹ್ನೆ ಶಿವಸೇನೆಗಾಗಿ ಕ್ರಾಂತಿಯನ್ನೇ ಮಾಡಲಿದೆ: ರಾವುತ್ - ಈಟಿವಿ ಭಾರತ ಕನ್ನಡ

ಬಹುಶಃ ಈ ಹೊಸ ಚಿಹ್ನೆಯು ಶಿವಸೇನೆಗೆ ಕ್ರಾಂತಿಯನ್ನು ಸೃಷ್ಟಿಸಲಿದೆ. ಹೆಸರಲ್ಲೇನಿದೆ ಎಂಬುದು ಎಲ್ಲರಿಗೂ ಗೊತ್ತು, ನಿಜವಾದ ಶಿವಸೇನೆ ಯಾರೆಂಬುದು ಎಲ್ಲರಿಗೂ ಗೊತ್ತು ಎಂದು ರಾವುತ್ ಹೇಳಿದರು.

ಹೊಸ ಚಿಹ್ನೆ ಶಿವಸೇನಾ ಕ್ರಾಂತಿಯನ್ನುಂಟು ಮಾಡಲಿದೆ: ರಾವುತ್
New symbol will revolutionize Shiv Sena: Raut
author img

By

Published : Oct 10, 2022, 3:55 PM IST

ಮುಂಬೈ: ಶಿವಸೇನೆಯ ತಮ್ಮ ಗುಂಪಿಗೆ ಸಿಗಲಿರುವ ಹೊಸ ಚಿಹ್ನೆಯು ಪಕ್ಷಕ್ಕಾಗಿ ಕ್ರಾಂತಿಯನ್ನೇ ಮಾಡಲಿದೆ ಎಂದು ಮುಖಂಡ ಸಂಜಯ್ ರಾವುತ್ ಹೇಳಿದ್ದಾರೆ. ಸದ್ಯ ಜೈಲಿನಲ್ಲಿರುವ ರಾವುತ್ ಅವರ ಜಾಮೀನು ಅರ್ಜಿಯ ಮೇಲೆ ಮುಂಬೈ ಸತ್ರ ನ್ಯಾಯಾಲಯದಲ್ಲಿ ಇಂದು ವಿಚಾರಣೆ ಇದೆ. ಇದಕ್ಕಾಗಿ ನ್ಯಾಯಾಲಯಕ್ಕೆ ಬಂದ ರಾವುತ್, ನ್ಯಾಯಾಲಯ ಆವರಣದಲ್ಲಿ ಶಿವಸೇನಾ ಕಾರ್ಯಕರ್ತನೊಬ್ಬನ ಪ್ರಶ್ನೆಗೆ ಉತ್ತರಿಸುತ್ತ ಮಾತನಾಡಿದರು.

ಚಿಹ್ನೆ ಬದಲಾಗಿರುವುದು ಇದೇ ಮೊದಲೇನಲ್ಲ. ಕಾಂಗ್ರೆಸ್‌ನಲ್ಲಿ ಇಂದಿರಾಗಾಂಧಿ ಕೂಡ ಇದೇ ಪರಿಸ್ಥಿತಿ ಎದುರಿಸಿದ್ದರು, ಅವರ ಚಿಹ್ನೆ ಕೂಡ 3 ಬಾರಿ ಬದಲಾಗಿತ್ತು. ಜನಸಂಘವೂ ಈ ಪರಿಸ್ಥಿತಿಯನ್ನು ಎದುರಿಸಿತ್ತು. ಹಾಗಾಗಿ ಇದು ಹೊಸದೇನಲ್ಲ. ಬಹುಶಃ ಈ ಹೊಸ ಚಿಹ್ನೆಯು ಶಿವಸೇನೆಗೆ ಕ್ರಾಂತಿಯನ್ನು ಸೃಷ್ಟಿಸಲಿದೆ. ಹೆಸರಲ್ಲೇನಿದೆ ಎಂಬುದು ಎಲ್ಲರಿಗೂ ಗೊತ್ತು, ನಿಜವಾದ ಶಿವಸೇನೆ ಯಾರು ಎಂಬುದು ಎಲ್ಲರಿಗೂ ಗೊತ್ತು ಎಂದು ರಾವುತ್ ಹೇಳಿದರು.

ಅಂಧೇರಿ ಚುನಾವಣೆಗೂ ಮುನ್ನ ಶಿಂಧೆ ಗುಂಪಿಗೆ ಬಿಲ್ಲುಬಾಣದ ಚಿಹ್ನೆ ಅಷ್ಟು ಸುಲಭವಾಗಿ ಸಿಗಲಾರದು. ಸದ್ಯ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ಆಕ್ರೋಶದ ವಾತಾವರಣವಿದೆ ಎಂದು ರಾವುತ್ ಹೇಳಿದ್ದಾರೆ.

ಇದನ್ನೂ ಓದಿ: ಅಂಧೇರಿ ಈಸ್ಟ್​ ಉಪಚುನಾವಣೆ: ಶಿವಸೇನೆ ಪಕ್ಷದ ಚಿನ್ಹೆ ಹೆಸರು ಬಳಕೆ ಸ್ಥಗಿತ ಮಾಡಿ ಚುನಾವಣಾ ಆಯೋಗ ಆದೇಶ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.