ETV Bharat / bharat

ಕೇಂದ್ರ ಪೊಲೀಸ್​ ಪಡೆಗಳ ಸಾಮಾಜಿಕ ಮಾಧ್ಯಮ ಬಳಕೆ ಮೇಲೆ ಕಠಿಣ ನಿಯಮ: ರೀಲ್ಸ್​, ವಿಡಿಯೋ, ಚಿತ್ರ ತೆಗೆಯುವಂತಿಲ್ಲ

author img

By ETV Bharat Karnataka Team

Published : Aug 26, 2023, 8:02 PM IST

ಕೇಂದ್ರ ಪೊಲೀಸ್ ಪಡೆಗಳು ಸಾಮಾಜಿಕ ಮಾಧ್ಯಮಗಳ ಬಳಕೆಯ ಮೇಲೆ ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ. ರೀಲ್ಸ್​ ಮಾಡುವುದು, ಸಮವಸ್ತ್ರದಲ್ಲಿ ಚಿತ್ರ, ವಿಡಿಯೋ ಮಾಡುವುದನ್ನು ನಿರ್ಬಂಧಿಸಲಾಗಿದೆ.

ಕೇಂದ್ರ ಪೊಲೀಸ್​ ಪಡೆಗಳು
ಕೇಂದ್ರ ಪೊಲೀಸ್​ ಪಡೆಗಳು

ನವದೆಹಲಿ: ಹನಿಟ್ರ್ಯಾಪಿಂಗ್, ದೇಶದ, ಸೇನೆಯ ಸೂಕ್ಷ್ಮ ವಿಚಾರಗಳ ಹಂಚಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೇಂದ್ರ ಪೊಲೀಸ್​ ಪಡೆಗಳಿಗೆ ಸಾಮಾಜಿಕ ಮಾಧ್ಯಮ ಬಳಕೆಯ ಮೇಲೆ ಕೆಲ ಕಠಿಣ ನಿರ್ಬಂಧಗಳನ್ನು ವಿಧಿಸಿದೆ. ಆನ್​ಲೈನ್​ ಬಳಕೆ, ರೀಲ್ಸ್​ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಕೇಂದ್ರ ಪೊಲೀಸ್​ ಪಡೆಗಳಾದ ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಗಡಿ ಭದ್ರತಾ ಪಡೆ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆಗಳ ಸಿಬ್ಬಂದಿ ಸಾಮಾಜಿಕ ಮಾಧ್ಯಮಗಳಲ್ಲಿ ತಾವು ಕೆಲಸ ಮಾಡುವ ಸ್ಥಳಗಳಲ್ಲಿಯೇ ಸಮವಸ್ತ್ರದ ಮೇಲೆಯೇ ರೀಲ್ಸ್​ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಅದರ ಬಳಕೆಯ ಮೇಲೆ ಹೊಸ ನಿಯಮಗಳನ್ನು ಜಾರಿ ಮಾಡಿದೆ.

ಸಿಬ್ಬಂದಿ ಸಮವಸ್ತ್ರದಲ್ಲಿ ವಿಡಿಯೋ ಮಾಡುವುದು, ಸೂಕ್ಷ್ಮ ಸ್ಥಳಗಳಲ್ಲಿ ತೆಗೆದ ಫೋಟೋಗಳನ್ನು ಹಂಚಿಕೊಳ್ಳುವುದರ ಜೊತೆಗೆ ಸ್ನೇಹತರಿಗೆ ರಿಕ್ವೆಸ್ಟ್​ ಕಳುಹಿಸುವುದನ್ನು ನಿರ್ಬಂಧಿಸಲಾಗಿದೆ. ಇದರೊಂದಿಗೆ ಹಲವು ನಿಯಮಗಳುಳ್ಳ ಮಾರ್ಗಸೂಚಿಯನ್ನು ಕೇಂದ್ರ ಗುಪ್ತಚರ ಸಂಸ್ಥೆಗಳು ಕೇಂದ್ರ ಅರೆಸೇನಾ ಪಡೆ ಮತ್ತು ಪೊಲೀಸ್ ಪಡೆಗಳಿಗೆ ಪತ್ರದ ಮೂಲಕ ರವಾನಿಸಲಾಗಿದೆ.

ರೀಲ್ಸ್​ ಮಾಡದಂತೆ ಪೊಲೀಸರಿಗೆ ಸೂಚನೆ: ಸಿಆರ್​ಪಿಎಫ್​, ಬಿಎಸ್​ಎಫ್​, ಐಟಿಪಿಬಿ ಪೊಲೀಸರು ತಮ್ಮ ಕೆಲಸದ ಸ್ಥಳಗಳಲ್ಲಿ ರೀಲ್ಸ್​ ಮಾಡುವಂತಿಲ್ಲ. ಸಮವಸ್ತ್ರದಲ್ಲಿರುವ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತಿಲ್ಲ. ಆನ್‌ಲೈನ್‌ನಲ್ಲಿ ಅಪರಿಚಿತ ವ್ಯಕ್ತಿಗಳೊಂದಿಗೆ ರಿಕ್ವೆಸ್ಟ್​ ಕಳುಹಿಸುವ ಮತ್ತು ಸ್ವೀಕರಿಸುವ ಹಾಗಿಲ್ಲ ಎಂದು ಕರಾರು ಹಾಕಿದೆ.

ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಪೊಲೀಸ್ ಪಡೆಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು, ಕರ್ತವ್ಯದಲ್ಲಿರುವಾಗ ಸಾಮಾಜಿಕ ಮಾಧ್ಯಮಗಳನ್ನು ಬಳಸಬೇಡಿ. ಸೂಕ್ಷ್ಮ ಮಾಹಿತಿಯನ್ನು ಪೋಸ್ಟ್ ಮಾಡಬೇಡಿ. ಸಮವಸ್ತ್ರದಲ್ಲಿ ರೀಲ್ಸ್​ಗಳು ಮತ್ತು ವಿಡಿಯೋಗಳನ್ನು ಮಾಡುವುದನ್ನು ನಿಲ್ಲಿಸಿ. ಹೆಚ್ಚಿನ ಭದ್ರತೆಯ ಪ್ರದೇಶಗಳಲ್ಲಿ ವಿಡಿಯೋಗಳನ್ನು ತೆಗೆದುಕೊಳ್ಳಬೇಡಿ ಎಂದು ಹೇಳಿದ್ದಾರೆ.

ಹನಿಟ್ರ್ಯಾಪ್​ ತಡೆಗೆ ಯತ್ನ: ಪೊಲೀಸರು ತಾವು ಕೆಲಸ ಮಾಡುವ ಸ್ಥಳಗಳಲ್ಲಿನ ವಿಡಿಯೋ, ಚಿತ್ರ ಹಂಚಿಕೊಳ್ಳುತ್ತಿರುವ ಕಾರಣ ವಿರೋಧ ದೇಶಗಳು ಮಹಿಳೆಯರನ್ನು ಛೂಬಿಟ್ಟು ಹನಿಟ್ರ್ಯಾಪ್​ ಮೂಲಕ ರಹಸ್ಯ ಮಾಹಿತಿಗಳನ್ನು ಸಂಗ್ರಹಣೆ ಮಾಡುತ್ತಿದ್ದಾರೆ. ಇಂತಹ ಹಲವು ಪ್ರಕರಣಗಳು ಈಗಾಗಲೇ ದಾಖಲಾಗಿ ತನಿಖೆಯ ಹಂತದಲ್ಲಿವೆ. ಇದನ್ನು ತಡೆಯುವ ಉದ್ದೇಶಕ್ಕಾಗಿ ಪೊಲೀಸ್ ಪಡೆಗಳಿಗೆ ಸಾಮಾಜಿಕ ಮಾಧ್ಯಮಗಳ ಬಳಕೆಯ ಮೇಲೆ ಕಠಿಣ ನಿಯಮಗಳನ್ನು ತರಲಾಗಿದೆ.

ಬಿಹಾರದಲ್ಲಿ ವ್ಯಕ್ತಿಯ ಬಂಧನ: ದೇಶದ ಸೂಕ್ಷ್ಮ ವಿಚಾರ ಮತ್ತು ಹಲವು ನಗರಗಳ ಚಿತ್ರ, ವಿಡಿಯೋಗಳನ್ನು ಪಾಕಿಸ್ತಾನದ ಮಹಿಳೆಯ ಜೊತೆಗೆ ಹಂಚಿಕೊಂಡ ಆರೋಪದ ಮೇಲೆ ಬಿಹಾರದ ವ್ಯಕ್ತಿಯೊಬ್ಬನನ್ನು ಕೋಲ್ಕತ್ತಾ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಶನಿವಾರ ಬಂಧಿಸಿದೆ. ಆರೋಪಿಯನ್ನು ಭಕ್ತ ವಂಶಿ ಝಾ ಎಂದು ಗುರುತಿಸಲಾಗಿದೆ. ಈತ ಸಂಪರ್ಕ ಹೊಂದಿದ್ದ ಮಹಿಳೆ ಪಾಕ್​ ಗುಪ್ತಚರ ಸಂಸ್ಥೆ ಐಎಸ್​ಐ ಗೂಢಾಚಾರಣಿ ಎಂದು ಗುರುತಿಸಲಾಗಿದೆ.(ಪಿಟಿಐ)

ಇದನ್ನೂ ಓದಿ: ಪಾಕ್​ ಗೂಢಾಚಾರಿಣಿ ಜೊತೆಗೆ ಸಂಪರ್ಕ: ಬಿಹಾರ ವ್ಯಕ್ತಿ ಬಂಧಿಸಿದ ಕೋಲ್ಕತ್ತಾ ಪೊಲೀಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.