ETV Bharat / bharat

Live updates: ದೇಶಕ್ಕೆ ಹೊಸ ಸಂಸತ್​ ಭವನ ಅರ್ಪಣೆ... 75 ರೂ ನಾಣ್ಯ, ವಿಶೇಷ ಅಂಚೆ ಚೀಟಿ ಅನಾವರಣಗೊಳಿಸಿದ ಮೋದಿ

ಹೊಸ ಸಂಸತ್​ ಕಟ್ಟಡ ಉದ್ಘಾಟನೆ ಆರಂಭ
ಹೊಸ ಸಂಸತ್​ ಕಟ್ಟಡ ಉದ್ಘಾಟನೆ ಆರಂಭ
author img

By

Published : May 28, 2023, 7:35 AM IST

Updated : May 28, 2023, 1:17 PM IST

12:55 May 28

75 ರೂ ನಾಣ್ಯ ಬಿಡುಗಡೆ

ನಾಲ್ಕು ಲೋಹಗಳ ಮಿಶ್ರಣದ 75 ರೂ ನಾಣ್ಯ ಹಾಗೂ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

12:22 May 28

ನೂತನ ಲೋಕಸಭೆಯಲ್ಲಿ ಕಾರ್ಯಕ್ರಮ

ನೂತನ ಸಂಸತ್ ಉದ್ಘಾಟನೆ ಬಳಿಕ ನೂತನ ಲೋಕಸಭೆಯಲ್ಲಿ ಕಾರ್ಯಕ್ರಮ. ಪ್ರಧಾನಿ ಮೋದಿ, ಲೋಕಸಭೆ ಸ್ಪೀಕರ್, ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಹಲವು ಗಣ್ಯರು ಭಾಗಿ.

08:18 May 28

ನೂತನ ಸಂಸತ್​ನ ಲಾಬಿಯಲ್ಲಿ 'ಸರ್ವಧರ್ಮ ಸಮ್ಮಿಲನ', ಪ್ರಾರ್ಥನೆ ಸಲ್ಲಿಕೆ

ಸಂಸತ್​ನ ಲಾಬಿಯಲ್ಲಿ 'ಸರ್ವಧರ್ಮ ಸಮ್ಮಿಲನ' ಕಾರ್ಯಕ್ರಮ

ಸಂಸತ್ತಿನ ನೂತನ ಕಟ್ಟಡದ ಲಾಬಿಯಲ್ಲಿ ಸರ್ವಧರ್ಮಗಳ ಸಮ್ಮಿಲನ ಕಾರ್ಯಕ್ರಮ ನಡೆಯುತ್ತಿದೆ. ಎಲ್ಲ ಧರ್ಮಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಧರ್ಮದ ಸಾರವನ್ನು ಬೋಧಿಸುತ್ತಿದ್ದಾರೆ. ಹಿಂದು, ಮುಸ್ಲಿಂ, ಕ್ರೈಸ್ತ, ಬೌದ್ಧ ಸೇರಿದಂತೆ ಎಲ್ಲ ಧಮರ್ಗಳ ಗುರುಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಸ್ಪೀಕರ್​ ಓಂ ಬಿರ್ಲಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವರುಗಳು ಭಾಗಿಯಾಗಿದ್ದಾರೆ.

08:06 May 28

ಸಂಸತ್​ ಕಟ್ಟಡ ಕಾರ್ಮಿಕರಿಗೆ ಸನ್ಮಾನಿಸಿದ ಪ್ರಧಾನಿ ಮೋದಿ

ಸಂಸತ್​ ಕಟ್ಟಡ ಕಾರ್ಮಿಕರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಪ್ರಧಾನಿ ಮೋದಿ ಅವರು ಶಾಲು ಮತ್ತು ಸ್ಮರಣಿಕೆ ನೀಡಿ ಕಾರ್ಮಿಕರಿಗೆ ಗೌರವ ಸಲ್ಲಿಸಿದರು.

08:05 May 28

ಸ್ಪೀಕರ್​ ಪೀಠದ ಬಳಿಕ 'ಸೆಂಗೋಲ್​' ಪ್ರತಿಷ್ಠಾಪಿಸಿದ ಪ್ರಧಾನಿ ಮೋದಿ

ರಾಜದಂಡ ಪಡೆದ ಪ್ರಧಾನಿ ಮೋದಿ ಅವರು ಅದನ್ನು ಸ್ಪೀಕರ್​ ಪೀಠದ ಬಳಿಕ ತೆರಳಿ ಪ್ರತಿಷ್ಠಾಪನೆ ಮಾಡಿದರು. ಈ ವೇಳೆ ಜೊತೆಗೆ ಸ್ಪೀಕರ್​ ಓಂ ಬಿರ್ಲಾ ಅವರು ಇದ್ದರು. ಇದರ ಬಳಿಕ ಪ್ರಧಾನಿ ಜ್ಯೋತಿ ಬೆಳಗಿಸಿ ಅಲ್ಲಿಂದ ತೆರಳಿದರು.

07:51 May 28

ಪ್ರಧಾನಿ ಮೋದಿಗೆ ರಾಜದಂಡ 'ಸೆಂಗೋಲ್​' ಹಸ್ತಾಂತರ

ನವದೆಹಲಿ: ಪೂಜಾ ಕಾರ್ಯಕ್ರಮದ ಬಳಿಕ ಚಿನ್ನದ ರಾಜದಂಡವಾದ ಸೆಂಗೋಲ್​ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸಲಾಯಿತು. ಪ್ರಧಾನಿ ಮೋದಿ ಅವರು ಇದನ್ನು ಸ್ಪೀಕರ್​ ಪೀಠದ ಬಳಿ ಪ್ರತಿಷ್ಠಾಪಿಸಿದರು.

07:41 May 28

ಉದ್ಘಾಟನಾ ಪೂಜಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿ

ನವದೆಹಲಿ: ಪ್ರಧಾನಿ ಮೋದಿ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ನೂತನ ಸಂಸತ್ ಭವನದ ಉದ್ಘಾಟನೆಯ ಪೂಜೆ ಆರಂಭಿಸಿದರು. ಸುಮಾರು ಒಂದು ಗಂಟೆ ಕಾಲ ಪೂಜೆ ಕಾರ್ಯಕ್ರಮ ನಡೆಯಲಿದೆ. ಪೂಜೆಯ ನಂತರ ಪ್ರಧಾನ ಮಂತ್ರಿಯವರು ಚಿನ್ನದ ರಾಜದಂಡವಾದ 'ಸೆಂಗೋಲ್' ಅನ್ನು ಸ್ವೀಕರಿಸಲಿದ್ದಾರೆ. ಬಳಿಕ ಅದನ್ನು ಹೊಸ ಸಂಸತ್ತಿನ ಸ್ಪೀಕರ್​ ಪೀಠದ ಬಳಿಕ ಪ್ರತಿಷ್ಠಾಪಿಸಲಿದ್ದಾರೆ.

07:21 May 28

ಹೊಸ ಸಂಸತ್​ ಕಟ್ಟಡದತ್ತ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

  • #WATCH | PM Narendra Modi arrives at the new Parliament building for the inauguration ceremony

    The ceremony will begin with a puja which will continue for about an hour. pic.twitter.com/C2feClTUA8

    — ANI (@ANI) May 28, 2023 " class="align-text-top noRightClick twitterSection" data=" ">

ನವದೆಹಲಿ: ಸೆಂಟ್ರಲ್ವಿಸ್ತಾ ಯೋಜನೆಯ ಭಾಗವಾಗಿ ನಿರ್ಮಾಣವಾಗಿರುವ ಹೊಸ ಸಂಸತ್​ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಲಿದ್ದಾರೆ. ಪೂಜಾ, ಹವನ ಕಾರ್ಯಕ್ರಮಗಳು ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಕಟ್ಟಡದತ್ತ ಆಗಮಿಸಿದ್ದಾರೆ. ಸ್ಪೀಕರ್​ ಓಂ ಬಿರ್ಲಾ ಅವರು ಜೊತೆಗಿದ್ದಾರೆ.

Last Updated : May 28, 2023, 1:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.