ನವದೆಹಲಿ: ಹೊಸ ಕ್ರಿಮಿನಲ್ ಕಾನೂನು ಮಸೂದೆಗಳು ಸಂವಿಧಾನದ ಆಶಯಕ್ಕೆ ಅನುಗುಣವಾಗಿವೆ. ದೇಶದ ಜನರ ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಇವುಗಳನ್ನು ರೂಪಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಲೋಕಸಭೆಗೆ ತಿಳಿಸಿದ್ದಾರೆ. ಸದನದಲ್ಲಿ ಮಂಡಿಸಲಾದ ಭಾರತೀಯ ನ್ಯಾಯ (ಎರಡನೇ) ಸಂಹಿತೆ-2023, ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತೆ-2023 ಮತ್ತು ಭಾರತೀಯ ಸಾಕ್ಷ್ಯ (ಎರಡನೇ)-2023 ಮಸೂದೆಗಳ ಕುರಿತು ಮಾತನಾಡಿದ ಶಾ, ಹೊಸ ಶಾಸನಗಳು ಬ್ರಿಟಿಷ್ ಕಾಲದ ಕಾನೂನುಗಳನ್ನು ಬದಲಿಸಲಿವೆ ಎಂದು ಸ್ಪಷ್ಟಪಡಿಸಿದರು.
-
#WATCH | Delhi: Home Minister Amit Shah in Lok Sabha says, "...For poor, the biggest challenge to get justice is the financial challenge...For years 'Tareekh pe tareekh' keep going. Police hold the judicial system responsible. The government holds the police and judiciary… pic.twitter.com/B2EFtlhMzP
— ANI (@ANI) December 20, 2023 " class="align-text-top noRightClick twitterSection" data="
">#WATCH | Delhi: Home Minister Amit Shah in Lok Sabha says, "...For poor, the biggest challenge to get justice is the financial challenge...For years 'Tareekh pe tareekh' keep going. Police hold the judicial system responsible. The government holds the police and judiciary… pic.twitter.com/B2EFtlhMzP
— ANI (@ANI) December 20, 2023#WATCH | Delhi: Home Minister Amit Shah in Lok Sabha says, "...For poor, the biggest challenge to get justice is the financial challenge...For years 'Tareekh pe tareekh' keep going. Police hold the judicial system responsible. The government holds the police and judiciary… pic.twitter.com/B2EFtlhMzP
— ANI (@ANI) December 20, 2023
ಗುಂಪು ಹಲ್ಲೆಗಳು ಅಪರಾಧ: ''ಮೋದಿ ನಾಯಕತ್ವದಲ್ಲಿ ಭಾರತೀಯತೆ, ಭಾರತೀಯ ಸಂವಿಧಾನ ಮತ್ತು ಜನರ ಯೋಗಕ್ಷೇಮಕ್ಕೆ ಒತ್ತು ನೀಡುವ ಮಸೂದೆಗಳನ್ನು ನಾನು ತಂದಿದ್ದೇನೆ. ಸಂವಿಧಾನದ ಆಶಯದಂತೆ ಕಾನೂನುಗಳನ್ನು ಬದಲಾಯಿಸಲಾಗುತ್ತಿದೆ. ಜನರಿಗೆ ನ್ಯಾಯ ನೀಡುವಲ್ಲಿ ತಂತ್ರಜ್ಞಾನದ ಬಳಕೆಯನ್ನು ಈ ಮಸೂದೆಗಳು ಉತ್ತೇಜಿಸುತ್ತವೆ. ಗುಂಪು ಹಲ್ಲೆಗಳನ್ನೂ ಮಸೂದೆಗಳಲ್ಲಿ ಅಪರಾಧವೆಂದು ಸೇರಿಸಲಾಗಿದೆ'' ಎಂದು ಅಮಿತ್ ಶಾ ತಿಳಿಸಿದರು. ಮುಂದುವರೆದು ಮಾತನಾಡಿದ ಅವರು, ''ಬ್ರಿಟಿಷರ ಕಾಲದ ಕಾನೂನುಗಳು ವಿದೇಶಿ ಆಡಳಿತವನ್ನು ರಕ್ಷಿಸುವ ಗುರಿ ಹೊಂದಿದ್ದವು. ಹೊಸ ಮಸೂದೆಗಳು ಜನಕೇಂದ್ರಿತವಾಗಿವೆ'' ಎಂದು ವಿವರಿಸಿದರು.
ಇದನ್ನೂ ಓದಿ: ಬ್ರಿಟಿಷರ ಕಾಲದ IPC, CrPC, Evidence Actಗೆ ಗುಡ್‌ಬೈ! ಲೋಕಸಭೆಯಲ್ಲಿ ಹೊಸ 3 ಮಸೂದೆ ಮಂಡಿಸಿದ ಅಮಿತ್ ಶಾ
1860ರ ಭಾರತೀಯ ದಂಡ ಸಂಹಿತೆ (ಐಪಿಸಿ), 1973ರ ಕ್ರಿಮಿನಲ್ ಪ್ರಕ್ರಿಯ ಸಂಹಿತೆ (ಸಿಆರ್ಪಿಸಿ) ಮತ್ತು 1872ರ ಭಾರತೀಯ ಸಾಕ್ಷ್ಯ ಕಾಯ್ದೆಗಳ ಬದಲಿಗೆ ಕೇಂದ್ರ ಮೂರು ಹೊಸ ಮಸೂದೆಗಳನ್ನು ರೂಪಿಸಿದೆ. ಈ ಮಸೂದೆಗಳನ್ನು ಕಳೆದ ವಾರ ಲೋಕಸಭೆಯಲ್ಲಿ ಗೃಹ ಸಚಿವರು ಮಂಡಿಸಿದ್ದು, ಮಂಗಳವಾರದಿಂದ ಚರ್ಚೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಈ ಹಿಂದೆ ಮಂಡಿಸಿದ್ದ ಮಸೂದೆಗಳು ವಾಪಸ್: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಈ ಹಿಂದಿನ ಐಪಿಸಿ, ಸಿಆರ್ಪಿಸಿ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳ ಬದಲಿಸುವ ಈ ಮೂರು ಹೊಸ ಮಸೂದೆಗಳನ್ನು ಮೊದಲಿಗೆ ಆಗಸ್ಟ್ 11ರಂದು ಅಮಿತ್ ಶಾ ಮಂಡಿಸಿದ್ದರು. ಆದರೆ, ಇವುಗಳನ್ನು ಸ್ಥಾಯಿ ಸಮಿತಿಗೆ ವಹಿಸಲಾಗಿತ್ತು. ಕರಡು ವರದಿಗೆ ಸಮಿತಿ ತಡೆ ನಿಂತಿತ್ತು. ಇದೀಗ ಅಂದು ಮಂಡಿಸಿದ್ದ ಮೂರು ಮಸೂದೆಗಳನ್ನು ಗೃಹ ಸಚಿವರು ಹಿಂಪಡೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ''ಕೆಲವು ಬದಲಾವಣೆಗಳನ್ನು ಮಾಡಬೇಕಾಗಿರುವುದರಿಂದ ಈ ಹಿಂದೆ ಮಂಡಿಸಿದ್ದ ಮಸೂದೆಗಳನ್ನು ಹಿಂಪಡೆದು ಮೂರು ಹೊಸ ಬಿಲ್‌ಗಳನ್ನು ಪರಿಚಯಿಸಲಾಗಿದೆ. ಈ ಮಸೂದೆಗಳನ್ನು ಸ್ಥಾಯಿ ಸಮಿತಿ ಪರಿಶೀಲಿಸಿದ್ದು, ಅಧಿಕೃತ ತಿದ್ದುಪಡಿಗಳನ್ನು ತರುವ ಬದಲು ಮತ್ತೆ ಮಸೂದೆಗಳನ್ನು ತರಲು ನಿರ್ಧರಿಸಲಾಗಿದೆ'' ಎಂದು ಮಾಹಿತಿ ನೀಡಿದರು. (ಎಎನ್ಐ)
ಇದನ್ನೂ ಓದಿ: ಹೊಸ ಕ್ರಿಮಿನಲ್ ಕಾನೂನು ಮಸೂದೆಗಳ ಕರಡು ವರದಿಗೆ ಸಂಸದೀಯ ಸ್ಥಾಯಿ ಸಮಿತಿ ತಡೆ