ಶಿವಗಂಗಾ(ತಮಿಳುನಾಡು): ರಾಜ್ಯಸಭೆ ಚುನಾಚಣೆಯಲ್ಲಿ ತಮಿಳುನಾಡಿನ ಪರವಾಗಿ ಆಯ್ಕೆಯಾಗಿರುವುದರಿಂದ ತಮಿಳುನಾಡು ರಾಜಕೀಯದತ್ತ ಹೆಚ್ಚು ಗಮನ ಹರಿಸಲು ಅವಕಾಶ ಸಿಕ್ಕಿದೆ ಎಂದು ಕಾರೈಕುಡಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಹಣಕಾಸು ಸಚಿವ, ನೂತನ ರಾಜ್ಯಸಭಾ ಸದಸ್ಯ ಪಿ. ಚಿದಂಬರಂ ಹೇಳಿದರು.
ಕಾರೈಕುಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನೆಡೆ ಇಲ್ಲ. ಒಂದು ವೇಳೆ ಪಕ್ಷದಲ್ಲಿ ಕುಟುಂಬದ ಸದಸ್ಯರಿದ್ದರೆ, ಸ್ವಜನಪಕ್ಷಪಾತವಾದರೆ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದರು. ಒಂದೇ ಕುಟುಂಬದವರಿಗೆ ರಾಜಕೀಯ ಸ್ಥಾನಮಾನಗಳು ಸಿಗುತ್ತವೆ ಎಂಬುದು ಕೇವಲ ಕಾಗ್ರೆಸ್ನಲ್ಲಿ ಮಾತ್ರವಲ್ಲ, ಬಿಜೆಪಿ ಸೇರಿದಂತೆ ಇತರ ಪಕ್ಷಗಳಲ್ಲೂ ಇದೆ. ಆ ಪ್ರಕ್ರಿಯೆ ಬದಲಾಗಬೇಕಿದೆ, ಬದಲಾಗುತ್ತದೆ ಕೂಡ. ಪರಿವರ್ತನೆಗಾಗಿ ಕಾಂಗ್ರೆಸ್ ಪಕ್ಷ ಕ್ರಮ ಕೈಗೊಳ್ಳಬೇಕು ಎಂದು ಆಶಿಸುತ್ತೇನೆ ಎಂದರು.
ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಕೇಸ್ನಲ್ಲಿ ಸೋನಿಯಾ - ರಾಹುಲ್ಗೆ ಸಮನ್ಸ್.. ಕಾಂಗ್ರೆಸ್ನಿಂದ ನಾಳೆ ದೇಶಾದ್ಯಂತ ಸುದ್ದಿಗೋಷ್ಠಿ
ತಮಿಳುನಾಡು ಸರ್ಕಾರ ಈವರೆಗೆ ಒಂದು ವರ್ಷದಲ್ಲಿ ಯಾವುದೇ ತಪ್ಪು ನಿರ್ಧಾರ ಕೈಗೊಂಡಿಲ್ಲ. ಮುಖ್ಯಮಂತ್ರಿಗಳು ಪ್ರತಿಯೊಂದು ನಿರ್ಧಾರವನ್ನು ಗಂಭೀರವಾಗಿ ಹಾಗೂ ಉತ್ತಮವಾಗಿ ತೆಗೆದುಕೊಳ್ಳುತ್ತಾರೆ. ದೇಶೀಯ ಆಡಳಿತದಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.