ETV Bharat / bharat

ಮದರಸಾಗಳಲ್ಲಿನ ಮುಸ್ಲಿಮೇತರ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುವಂತೆ ರಾಜ್ಯಗಳಿಗೆ NCPCR ಸೂಚನೆ - ಮದರಸಾಗಳ ಬಗ್ಗೆ ತನಿಖೆ

ಮದರಸಾಗಳು ಒಂದು ಸಂಸ್ಥೆಗಳಾಗಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವಲ್ಲಿ ಪ್ರಾಥಮಿಕವಾಗಿ ಜವಾಬ್ದಾರನಾಗಿರುತ್ತವೆ. ಸರ್ಕಾರದಿಂದ ಅನುದಾನಿತ ಅಥವಾ ಮಾನ್ಯತೆ ಪಡೆದಿರುವ ಆ ಮದರಸಾಗಳು ಮಕ್ಕಳಿಗೆ ಧಾರ್ಮಿಕ ಮತ್ತು ಸ್ವಲ್ಪ ಮಟ್ಟಿಗೆ ಔಪಚಾರಿಕ ಶಿಕ್ಷಣ ನೀಡುತ್ತಿವೆ ಎಂದು ಎನ್​ಸಿಪಿಸಿಆರ್ ಹೇಳಿದೆ.

ಮದರಸಾಗಳಲ್ಲಿನ ಮುಸ್ಲಿಮೇತರ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುವಂತೆ ರಾಜ್ಯಗಳಿಗೆ ಎನ್​ಸಿಪಿಸಿಆರ್ ಸೂಚನೆ
ncpcr-instructs-states-to-admit-non-muslim-children-in-madrasas-to-other-schools
author img

By

Published : Dec 9, 2022, 4:25 PM IST

ನವ ದೆಹಲಿ: ಮುಸ್ಲಿಂ ಧರ್ಮಕ್ಕೆ ಸೇರದ ಮಕ್ಕಳಿಗೆ ಪ್ರವೇಶ ನೀಡುತ್ತಿರುವ ಎಲ್ಲ ಸರ್ಕಾರಿ ಅನುದಾನಿತ ಮತ್ತು ಮಾನ್ಯತೆ ಪಡೆದ ಮದರಸಾಗಳ ಬಗ್ಗೆ ತನಿಖೆ ನಡೆಸುವಂತೆ ಮಕ್ಕಳ ಹಕ್ಕುಗಳ ರಕ್ಷಣೆಯ ಉಚ್ಚ ಸಂಸ್ಥೆ ಎನ್​ಸಿಪಿಸಿಆರ್ (NCPCR) ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.

ಮುಸ್ಲಿಮೇತರ ಸಮುದಾಯಗಳಿಗೆ ಸೇರಿದ ಮಕ್ಕಳು ಸರ್ಕಾರಿ ಅನುದಾನಿತ ಅಥವಾ ಮಾನ್ಯತೆ ಪಡೆದ ಮದರಸಾಗಳಿಗೆ ಹಾಜರಾಗುತ್ತಿದ್ದಾರೆ. ಕೆಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅವರಿಗೆ ವಿದ್ಯಾರ್ಥಿವೇತನವನ್ನು ಸಹ ನೀಡುತ್ತಿವೆ ಎಂದು ಆಯೋಗಕ್ಕೆ ತಿಳಿದುಬಂದಿದೆ ಎಂದು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (NCPCR) ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಉಲ್ಲೇಖಿಸಿದ್ದಾರೆ.

ಇದು ಪೋಷಕರ ಒಪ್ಪಿಗೆಯಿಲ್ಲದೆ ಮಕ್ಕಳನ್ನು ಯಾವುದೇ ಧಾರ್ಮಿಕ ಬೋಧನೆಯಲ್ಲಿ ಭಾಗವಹಿಸಲು ಶಿಕ್ಷಣ ಸಂಸ್ಥೆಗಳನ್ನು ನಿರ್ಬಂಧಿಸುವ ಭಾರತ ಸಂವಿಧಾನದ 28 (3) ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಮದರಸಾಗಳು ಒಂದು ಸಂಸ್ಥೆಗಳಾಗಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವಲ್ಲಿ ಪ್ರಾಥಮಿಕವಾಗಿ ಜವಾಬ್ದಾರನಾಗಿರುತ್ತವೆ. ಸರ್ಕಾರದಿಂದ ಅನುದಾನಿತ ಅಥವಾ ಮಾನ್ಯತೆ ಪಡೆದಿರುವ ಆ ಮದರಸಾಗಳು ಮಕ್ಕಳಿಗೆ ಧಾರ್ಮಿಕ ಮತ್ತು ಸ್ವಲ್ಪ ಮಟ್ಟಿಗೆ ಔಪಚಾರಿಕ ಶಿಕ್ಷಣ ನೀಡುತ್ತಿವೆ ಎಂದು ತಿಳಿದುಬಂದಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಮೇಲಿನ ವಾಸ್ತವಾಂಶಗಳ ದೃಷ್ಟಿಯಿಂದ, ನಿಮ್ಮ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮುಸ್ಲಿಮೇತರ ಮಕ್ಕಳನ್ನು ಸೇರಿಸಿಕೊಳ್ಳುವ ಎಲ್ಲಾ ಸರ್ಕಾರಿ ಅನುದಾನಿತ/ಮನ್ನಣೆ ಪಡೆದ ಮದರಸಾಗಳ ಬಗ್ಗೆ ವಿಚಾರಣೆ ನಡೆಸುವಂತೆ ಆಯೋಗವು ತನ್ನ ಅಧಿಕಾರವನ್ನು ಚಲಾಯಿಸಿ ಶಿಫಾರಸು ಮಾಡುತ್ತದೆ ಎಂದು ಪತ್ರದಲ್ಲಿ ಸೂಚಿಸಲಾಗಿದೆ. ವಿಚಾರಣೆಯು ಅಂಥ ಮದರಸಾಗಳಿಗೆ ಹಾಜರಾಗುವ ಮಕ್ಕಳ ದೈಹಿಕ ಪರಿಶೀಲನೆಯನ್ನು ಒಳಗೊಂಡಿರಬೇಕು. ವಿಚಾರಣೆಯ ನಂತರ, ಔಪಚಾರಿಕ ಶಿಕ್ಷಣ ನೀಡುವ ಶಾಲೆಗಳಿಗೆ ಆ ಮಕ್ಕಳನ್ನು ಸೇರಿಸಬೇಕೆಂದು NCPCR ಪತ್ರದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಜನರಿಂದಲೇ ಮದರಸಾ ಉಡೀಸ್​.. ಅಸ್ಸೋಂನಲ್ಲಿ ಮತ್ತೊಂದು ಅಕ್ರಮ ಮದರಸಾ ನೆಲಸಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.