ETV Bharat / bharat

ರಾಹುಲ್ ಗಾಂಧಿ ವಿರುದ್ಧ ಕೈಗೊಂಡ ಕ್ರಮಗಳೇನು?.. ಕಾರಣ ಕೇಳಿ ಎಫ್‌ಬಿಗೆ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗ ನೋಟಿಸ್ - ರಾಹುಲ್ ಗಾಂಧಿಯವರ ಇನ್‌ಸ್ಟಾಗ್ರಾಮ್ ಖಾತೆ

ವಾಯವ್ಯ ದೆಹಲಿಯಲ್ಲಿ ಅತ್ಯಾಚಾರ ಹಾಗೂ ಹತ್ಯೆಗೆ ಒಳಗಾದ ಒಂಬತ್ತು ವರ್ಷದ ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಚಿತ್ರವನ್ನು ಹಂಚಿಕೊಂಡ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯ ಖಾತೆಯನ್ನು "ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ" ಒಂದು ವಾರದ ನಂತರ, ಟ್ವಿಟರ್ ಅದನ್ನು ಶನಿವಾರ ಮರು ಸ್ಥಾಪಿಸಿದೆ..

ಫೇಸ್‌ಬುಕ್‌ಗೆ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗ ನೋಟಿಸ್

author img

By

Published : Aug 14, 2021, 3:09 PM IST

ನವದೆಹಲಿ : ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಶನಿವಾರ ಫೇಸ್‌ಬುಕ್‌ಗೆ ರಾಹುಲ್ ಗಾಂಧಿಯವರು ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋ ಕುರಿತು ಕ್ರಿಯಾ ವರದಿ ನೀಡುವಂತೆ ತಿಳಿಸಿದೆ.

ಫೇಸ್‌ಬುಕ್‌ಗೆ ಬರೆದ ಪತ್ರದಲ್ಲಿ, ಎನ್‌ಸಿಪಿಸಿಆರ್ ಸಿಪಿಸಿಆರ್ ಕಾಯ್ದೆಯ ಸೆಕ್ಷನ್ 13 ಮತ್ತು 14ರ ಅಡಿಯಲ್ಲಿನ ಕಾರ್ಯಗಳು ಮತ್ತು ಅಧಿಕಾರಗಳ ಅನುಸಾರವಾಗಿ ಫೇಸ್‌ಬುಕ್ ಈ ವಿಷಯದಲ್ಲಿ ತೆಗೆದುಕೊಂಡ ಕ್ರಮದ ವಿವರಗಳ ಬಗ್ಗೆ ಮಾಹಿತಿ ಕೇಳಿದೆ.

ಫೇಸ್ ಬುಕ್ ಇಂಡಿಯಾ(ನಂಬಿಕೆ ಮತ್ತು ಸುರಕ್ಷತೆ) ಮುಖ್ಯಸ್ಥ ಸತ್ಯ ಯಾದವ್ ಅವರು, ಆಯೋಗದ ಮುಂದೆ ಆಗಸ್ಟ್ 17ರಂದು ಸಂಜೆ 5 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುವಂತೆ, ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗ ನೋಟಿಸ್ ನೀಡಿದೆ. ಈ ಮೂಲಕ ಫೇಸ್‌ಬುಕ್ ಮುಖ್ಯಸ್ಥರು ರಾಹುಲ್ ಗಾಂಧಿ ವಿರುದ್ಧ ಕೈಗೊಂಡಿರುವ ಕಠಿಣ ಕ್ರಮಗಳ ಬಗ್ಗೆ ವಿವರಿಸಬೇಕಾಗುತ್ತದೆ.

ಓದಿ: ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗ: ರಾಗಾ ವಿರುದ್ಧ FIR ದಾಖಲಿಸಲು ಹೈಕೋರ್ಟ್​ಗೆ ಅರ್ಜಿ

ರಾಹುಲ್ ಗಾಂಧಿಯವರ ಇನ್‌ಸ್ಟಾಗ್ರಾಮ್ ಖಾತೆಯಿಂದ ಅಪ್ರಾಪ್ತೆಯ ಕುಟುಂಬಸ್ಥರ ಫೋಟೋಗಳನ್ನು ತೆಗೆದು ಹಾಕುವಂತೆ ಮತ್ತು ರಾಹುಲ್ ಗಾಂಧಿ ವಿರುದ್ಧ ಕ್ರಮಕೈಗೊಳ್ಳುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಫೇಸ್​ಬುಕ್ ಅನ್ನು ಒತ್ತಾಯಿಸಿ ಪತ್ರ ಬರೆದಿದೆ.

ಖಾತೆ ಅಮಾನತುಗೊಳಿಸಿದ್ದ ಟ್ವಿಟರ್ : ಬಾಲಾಪರಾಧಿ ನ್ಯಾಯ (ಮಕ್ಕಳ ರಕ್ಷಣೆ ಮತ್ತು ರಕ್ಷಣೆ) ಕಾಯ್ದೆ, 2015ರ ಉಲ್ಲಂಘನೆಗಾಗಿ ಅವರ ಪ್ರೊಫೈಲ್ ವಿರುದ್ಧ 'ಸೂಕ್ತ ಕ್ರಮ' ತೆಗೆದುಕೊಳ್ಳುವಂತೆ ಕೇಳಲಾಗಿತ್ತು.

ಈ ಹಿಂದೆ, ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ಮೈಕ್ರೋಬ್ಲಾಗಿಂಗ್ ಸೈಟ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ, ಟ್ವಿಟರ್ ಕಾಂಗ್ರೆಸ್ ಪಕ್ಷದ ಖಾತೆಗಳನ್ನು ಅಮಾನತುಗೊಳಿಸಿತು. ಇಂದು ಮುಂಜಾನೆ, ರಾಹುಲ್ ಗಾಂಧಿ ಮೈಕ್ರೋಬ್ಲಾಗಿಂಗ್ ಸೈಟ್ "ಪಕ್ಷಪಾತದ ವೇದಿಕೆ" ಎಂದು ಆರೋಪಿಸಿದರು.

"ಒಂದು ಕಂಪನಿಯು ತನ್ನ ವ್ಯಾಪಾರವನ್ನು ನಮ್ಮ ರಾಜಕೀಯವನ್ನು ವ್ಯಾಖ್ಯಾನಿಸುತ್ತಿದೆ ಮತ್ತು ರಾಜಕಾರಣಿಯಾಗಿ, ನನಗೆ ಅದು ಇಷ್ಟವಿಲ್ಲ. ಇದು ದೇಶದ ಪ್ರಜಾಪ್ರಭುತ್ವದ ರಚನೆಯ ಮೇಲಿನ ದಾಳಿಯಂತೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.

ಕಾಂಗ್ರೆಸ್ ಪಕ್ಷ ಮತ್ತು ಅದರ ಹಲವು ನಾಯಕರ ಖಾತೆಗಳನ್ನು ನಿರ್ಬಂಧಿಸುವ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ ಟ್ವಿಟರ್ ತನ್ನ ಸೇವೆಯಲ್ಲಿ ಪ್ರತಿಯೊಬ್ಬರಿಗೂ ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ತನ್ನ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಓದಿ:ಅತ್ಯಾಚಾರ ಸಂತ್ರಸ್ತೆಯ ಪೋಷಕರ ಫೋಟೋ ಹಂಚಿಕೊಂಡ ಆರೋಪ ; ರಾಹುಲ್‌ ಗಾಂಧಿ ಟ್ವೀಟ್‌ ಅಳಿಸಿದ ಟ್ವಿಟರ್‌

ಒಂದು ಹೇಳಿಕೆಯಲ್ಲಿ, ಟ್ವಿಟರ್ ವಕ್ತಾರರು ಮೈಕ್ರೋಬ್ಲಾಗಿಂಗ್ ಸೈಟ್ ತನ್ನ ನಿಯಮಗಳನ್ನು ಉಲ್ಲಂಘಿಸಿದರೆ ಪೂರ್ವಭಾವಿಯಾಗಿ ಕ್ರಮ ಕೈಗೊಳ್ಳುವುದನ್ನು ಮುಂದುವರಿಸುತ್ತದೆ ಎಂದು ಹೇಳಿದರು. "ನಮ್ಮ ಸೇವೆಯಲ್ಲಿರುವ ಎಲ್ಲರಿಗೂ ಟ್ವಿಟರ್ ನಿಯಮಗಳನ್ನು ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ಜಾರಿಗೊಳಿಸಲಾಗಿದೆ.

ನಮ್ಮ ನಿಯಮಗಳನ್ನು ಉಲ್ಲಂಘಿಸುವಂತಹ ಚಿತ್ರವನ್ನು ಪೋಸ್ಟ್ ಮಾಡಿದ ಹಲವಾರು ಟ್ವೀಟ್‌ಗಳಲ್ಲಿ ನಾವು ಪೂರ್ವಭಾವಿಯಾಗಿ ಕ್ರಮ ಕೈಗೊಂಡಿದ್ದೇವೆ ಮತ್ತು ನಮ್ಮ ವ್ಯಾಪ್ತಿಯ ಜಾರಿ ಆಯ್ಕೆಗಳಿಗೆ ಅನುಗುಣವಾಗಿ ಇದನ್ನು ಮುಂದುವರಿಸಬಹುದು" ಎಂದಿದೆ.

22 ಕಾಂಗ್ರೆಸ್ ನಾಯಕರ ಟ್ವಿಟರ್ ಖಾತೆ ಮರುಸ್ಥಾಪನೆ : ವಾಯವ್ಯ ದೆಹಲಿಯಲ್ಲಿ ಅತ್ಯಾಚಾರ ಹಾಗೂ ಹತ್ಯೆಗೆ ಒಳಗಾದ ಒಂಬತ್ತು ವರ್ಷದ ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಚಿತ್ರವನ್ನು ಹಂಚಿಕೊಂಡ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯ ಖಾತೆಯನ್ನು "ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ" ಒಂದು ವಾರದ ನಂತರ, ಟ್ವಿಟರ್ ಅದನ್ನು ಶನಿವಾರ ಮರು ಸ್ಥಾಪಿಸಿದೆ.

ಮೈಕ್ರೋ ಬ್ಲಾಗಿಂಗ್ ವೇದಿಕೆಯು ರಣದೀಪ್ ಸುರ್ಜೇವಾಲಾ, ಅಜಯ್ ಮಾಕೆನ್, ಕೆಸಿ ವೇಣುಗೋಪಾಲ್, ಮಾಣಿಕ್ಕಂ ಟಾಗೋರ್, ಸುಶ್ಮಿತಾ ದೇವ್, ಪವಾ ಖೇರಾ ಮತ್ತು ಕಾಂಗ್ರೆಸ್ ಪಕ್ಷದ ಅಧಿಕೃತ ಹ್ಯಾಂಡಲ್ ಸೇರಿದಂತೆ 22 ಕಾಂಗ್ರೆಸ್ ನಾಯಕರ ಖಾತೆಗಳನ್ನು ಮರು ಸ್ಥಾಪಿಸಿತು.

ಓದಿ: ಆಗಸ್ಟ್ 14 ಇನ್ಮುಂದೆ 'ವಿಭಜನೆಯ ಭಯಾನಕತೆಯ ನೆನಪಿನ ದಿನ': ಪ್ರಧಾನಿ ಮೋದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.