ETV Bharat / bharat

ಬಾಲಿವುಡ್​ ನಿರ್ಮಾಪಕ ಇಮ್ತಿಯಾಜ್ ಖತ್ರಿ ಮನೆ, ಕಚೇರಿ ಮೇಲೆ ಮುಂದುವರಿದ ಎನ್​​ಸಿಬಿ ದಾಳಿ - NCB now raids filmmaker Imtiaz Khatri's house and office

ಮಹಾನಗರಿಯಲ್ಲಿ ಎನ್​​ಸಿಬಿ ದಾಳಿ ಮುಂದುವರಿದಿದ್ದು, ಕ್ರೂಸ್ ಶಿಪ್(Cruise ship)​​ನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಾಲಿವುಡ್​​​ ನಿರ್ಮಾಪಕ ಇಮ್ತಿಯಾಜ್ ಖತ್ರಿ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.

NCB office
ಎನ್​ಸಿಬಿ ಕಚೇರಿ
author img

By

Published : Oct 9, 2021, 6:43 PM IST

ಮುಂಬೈ: ಕ್ರೂಸ್ ಶಿಪ್(Cruise ship)​​ನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಾಲಿವುಡ್​ ನಿರ್ಮಾಪಕ ಇಮ್ತಿಯಾಜ್​ ಖತ್ರಿ ಮನೆ ಮತ್ತು ಕಚೇರಿ ಮೇಲೆ ಎನ್​ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಲ್ಲಿನ ಬಾಂದ್ರಾದಲ್ಲಿರುವ ಮನೆ ಮತ್ತು ಕಚೇರಿಯಲ್ಲಿ ಪರಿಶೀಲನೆ ಮುಂದುವರೆದಿದೆ.

ರೆವ್ ಪಾರ್ಟಿ ಪ್ರಕರಣದಲ್ಲಿ ಭಾಗಿಯಾಗಿದ್ದ ಅಚಿತ್ ಕುಮಾರ್ ಅವರ ವಿಚಾರಣೆಯಲ್ಲಿ ಇಮ್ತಿಯಾಜ್ ಖಾತ್ರಿಯ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಎನ್​ಸಿಬಿ ವಿಚಾರಣೆ ಮುಂದಾಗಿದೆ. ಮುಂಬೈನ ಉದ್ಯಮಿಯೊಬ್ಬರ ಪುತ್ರನಾಗಿರುವ ಇಮ್ತಿಯಾಜ್​ ಖತ್ರಿಗೆ ಬಾಲಿವುಡ್​ನ ಹಲವು ಮಂದಿ ಜೊತೆ ಸಂಪರ್ಕ ಇದೆ.

ಕಳೆದ ವರ್ಷ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಇಮ್ತಿಯಾಜ್ ಖತ್ರಿ ಹೆಸರು ಕೇಳಿ ಬಂದಿತ್ತು. ಆದರೆ, ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಮತ್ತೊಮ್ಮೆ ಅವರ ಹೆಸರು ಮುನ್ನೆಲೆಗೆ ಬಂದಿದೆ.

ವಿವಿಐಪಿ ಯೂನಿವರ್ಸಲ್​ ಎಂಟರ್​ಟೇನ್ಮೆಂಟ್​ ಕಂಪನಿ ಮೂಲಕ ನಿರ್ಮಾಪಕನಾಗಿ ಇಮ್ತಿಯಾಜ್​ ಖತ್ರಿ ಗುರುತಿಸಿಕೊಂಡಿದ್ದರು. ಹಲವು ಸೆಲೆಬ್ರಿಟಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಾರೆ ಎಂಬ ಆರೋಪವೂ ಇವರ ಮೇಲೆ ಇದೆ. ಈ ಹಿನ್ನೆಲೆಯಲ್ಲಿ ಎನ್​ಸಿಬಿ ದಾಳಿ ನಡೆಸಿದೆ. ಶಾರುಖ್​ ಪುತ್ರನಿಗೆ ಡ್ರಗ್ಸ್​ ಪೂರೈಕೆ ಮಾಡಿರಬಹುದು ಎಂಬ ಶಂಕೆ ಕೂಡ ಮೂಡಿದೆ. ಪೂರ್ತಿ ವಿಚಾರಣೆ ಬಳಿಕ ಸತ್ಯ ಹೊರ ಬರಬೇಕಿದೆ.

ಇದನ್ನೂ ಓದಿ: ಆರ್ಯನ್ ಖಾನ್​ಗೆ ಬೇಲ್ ನಿರಾಕರಣೆ: ಬಿಕ್ಕಿ ಬಿಕ್ಕಿ ಅತ್ತ ಅಮ್ಮ ಗೌರಿ ಖಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.