ETV Bharat / bharat

ಒಟ್ಟಿಗೆ ಇನ್ಸ್​ಪೆಕ್ಟರ್​​ ಹುದ್ದೆ ಗಿಟ್ಟಿಸಿಕೊಂಡ ಸಹೋದರಿಯರು: ಬಡ ಕುಟುಂಬದ ಹೆಣ್ಣು ಮಕ್ಕಳ ಅದ್ಭುತ ಸಾಧನೆ - ಸಹೋದರಿಯರು ಇನ್ಸ್​ಪೆಕ್ಟರ್ ಹುದ್ದೆ

ಬಿಹಾರ ಪೊಲೀಸ್ ಇಲಾಖೆಗೆ ಕಳೆದ ಕೆಲ ತಿಂಗಳ ಹಿಂದೆ ನಡೆದ ಪರೀಕ್ಷೆಯ ಫಲಿತಾಂಶ ಬಹಿರಂಗಗೊಂಡಿದ್ದು, ಇದೀಗ ಬಡ ವ್ಯಾಪಾರಿಯ ಹೆಣ್ಣು ಮಕ್ಕಳಿಬ್ಬರು ಒಟ್ಟಿಗೆ ಇನ್ಸ್​ಪೆಕ್ಟರ್​ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ.

Two Sisters Became Inspector in Bihar Police

author img

By

Published : Jul 15, 2022, 9:11 PM IST

ನವಾಡ (ಬಿಹಾರ): ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಬಯಕೆ, ಹಂಬಲ ಇದ್ದರೆ, ನಮ್ಮ ಹಾದಿಯಲ್ಲಿ ಯಾವುದೇ ತೊಂದರೆಗಳು ಬಂದರೂ ಅಡ್ಡಿಯಾಗುವುದಿಲ್ಲ. ಈಗಾಗಲೇ ಅಂತಹ ಅನೇಕ ಉದಾಹರಣೆಗಳು ನಮ್ಮ ಕಣ್ಮುಂದೆ ಇದೆ. ಇವೆಲ್ಲದರ ಮಧ್ಯೆ ಇದೀಗ ಬಿಹಾರದ ನವಾಡ್​​ನಲ್ಲೂ ಅಂತಹ ಘಟನೆ ನಡೆದಿದ್ದು, ಬಡ ಕುಟುಂಬದಲ್ಲಿ ಬೆಳೆದ ಸಹೋದರಿಯರಾದ ಪೂಜಾ, ಪ್ರಿಯಾ ಇದೀಗ ಇನ್ಸ್​ಪೆಕ್ಟರ್​ ಆಗಿ ಆಯ್ಕೆಯಾಗಿದ್ದಾರೆ.

ಬಿಹಾರದ ಇನ್ಸ್​​ಪೆಕ್ಟರ್​ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಕೆಲ ದಿನಗಳಲ್ಲಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ನವಾಡ ಜಿಲ್ಲೆಯವರಾದ ಸಹೋದರಿಯರಿಬ್ಬರು ಒಟ್ಟಿಗೆ ಈ ಸಾಧನೆ ಮಾಡಿದ್ದು, ಇತರ ಹೆಣ್ಣು ಮಕ್ಕಳಿಗೂ ಸ್ಪೂರ್ತಿಯಾಗಿದೆ. ಈ ಸಹೋದರಿಯರ ತಂದೆ ಸಣ್ಣ ಅಂಗಡಿ ನಡೆಸುತ್ತಿದ್ದಾರೆ.

ಇದನ್ನೂ ಓದಿರಿ: 'ದಿ ಕಾಶ್ಮೀರಿ ಫೈಲ್ಸ್' ಹೀರೋ ದರ್ಶನ್ ಕುಮಾರ್ ಜೊತೆ ಈಟಿವಿ ಭಾರತ ಸಂದರ್ಶನ

ಪೂಜಾ-ಪ್ರಿಯಾ ಸಾಧನೆ: ಜಿಲ್ಲೆಯ ಪ್ರಕಿಬರವಾನ್​ ಮಾರ್ಕೆಟ್ ನಿವಾಸಿಗಳಾದ ಮದನ್​ ಸಾವೋ ಮತ್ತು ರೇಖಾದೇವಿ ಅವರ ಪುತ್ರಿಯರಾದ ಪೂಜಾ ಕುಮಾರಿ ಮತ್ತು ಪ್ರಿಯಾ ಕುಮಾರಿ ಇನ್ಸ್​ಪೆಕ್ಟರ್​ ತಯಾರಿ ನಡೆಸುತ್ತಿದ್ದರು. ಪೂಜಾ ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದು, ಪ್ರಿಯಾ ಎರಡನೇ ಪ್ರಯತ್ನದಲ್ಲಿ ತಮ್ಮ ಗುರಿ ಮುಟ್ಟಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಬಿಹಾರ ಪೊಲೀಸ್ ಇಲಾಖೆ ತಯಾರಿ ನಡೆಸುತ್ತಿದ್ದ ಇಬ್ಬರೂ ಕನಿಷ್ಠ ಸಬ್​ ಇನ್ಸ್​ಪೆಕ್ಟರ್​ ಆಗಬೇಕೆಂಬ ಕನಸು ಕಾಣುತ್ತಿದ್ದರು. ಅಧ್ಯಯನದ ಜೊತೆ ದೈಹಿಕ ತಯಾರಿ ನಡೆಸುತ್ತಿದ್ದ ಇವರು, ಒಂದು ಹೆಜ್ಜೆ ಮೇಲಿಟ್ಟಿದ್ದಾರೆ. ಹಳ್ಳಿಯಲ್ಲೇ ಪ್ರಾಥಮಿಕ ಶಿಕ್ಷಣ ಪಡೆದುಕೊಂಡಿರುವ ಇಬ್ಬರು, ತದನಂತರ ಪ್ಲಸ್​ 2 ಶಿಕ್ಷಣವನ್ನ ಕೃಷಕ್​ ಮಹಾವಿದ್ಯಾಲಯ ದೇವಾಹದಲ್ಲಿ ಪಡೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.