ETV Bharat / bharat

ಮನಿ ಲಾಂಡ್ರಿಂಗ್​ ಕೇಸ್​: ಸಚಿವ ನವಾಬ್ ಮಲಿಕ್​​ರನ್ನು 3 ದಿನ ಇಡಿ ವಶಕ್ಕೆ ಒಪ್ಪಿಸಿದ ಕೋರ್ಟ್​​​​ - ನವಾಬ್ ಮಲಿಕ್ ವಿರುದ್ಧ ಸೇಡು ತೀರಿಸಿಕೊಂಡ ಬಿಜೆಪಿ

ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ನಿನ್ನೆ ನವಾಬ್​​ ಮಲಿಕ್‌ ಅವರಿಗೆ ಸಮನ್ಸ್ ನೀಡಿತ್ತು..

nawab-malik
ನವಾಬ್ ಮಲಿಕ್
author img

By

Published : Feb 23, 2022, 3:44 PM IST

Updated : Feb 23, 2022, 9:09 PM IST

ಸೋಲಾಪುರ : ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಸಿಪಿ ನಾಯಕ ಹಾಗೂ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರನ್ನು ಪಿಎಂಎಲ್‌ಎ ನ್ಯಾಯಾಲಯವು ಮಾರ್ಚ್ 3 ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ವಹಿಸಿದೆ.

ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಬಂಧನ

ಇಡಿ ಅಧಿಕಾರಿಗಳಿಂದ ಬಂಧನಕ್ಕೆ ಒಳಪಟ್ಟ ನಂತರ ಮಾತನಾಡಿದ ನವಾಬ್ ಮಲಿಕ್​, 'ನಾವು ಬಂಧಿತರಾಗಿದ್ದೇವೆ. ಆದರೆ, ಹೆದರುವುದಿಲ್ಲ. ಹೋರಾಡಿ ಗೆಲ್ಲುತ್ತೇವೆ' ಎಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾವೂದ್ ಸೋದರಿ ಹಸಿನಾ ಪಾರ್ಕ್​ ಮನೆ ಮೇಲೆ ಇಡಿ ದಾಳಿ ನಡೆಸಿತ್ತು. ಅಲ್ಲದೇ, ಇಂದು ದಾವೂದ್​ ಸೋದರ ಇಕ್ಬಾಲ್​ ಕಸ್ಕರ್ ಅವರನ್ನು ವಶಕ್ಕೆ ಪಡೆದಿತ್ತು. ಇದಾದ ನಂತರ ಅವರನ್ನು ವಿಚಾರಣೆಗೊಳಪಡಿಸಿ ಬಂಧನಕ್ಕೆ ಒಳಪಡಿಸಿದ್ದಾರೆ.

ಮಾಹಿತಿ ಪ್ರಕಾರ, ಇಡಿಯಿಂದ ವಿಚಾರಣೆಗೆ ಒಳಗಾಗಿರುವ ಮಲಿಕ್​ ಅವರಿಗೆ ಬ್ಯಾಂಕ್​ ವ್ಯವಹಾರ, ಹಣ ವರ್ಗಾವಣೆ, ಆಸ್ತಿ ಡೀಲ್​​ ಬಗ್ಗೆ ಮಾಹಿತಿ ಕೇಳಲಾಗಿತ್ತು ಎಂಬುದು ತಿಳಿದುಬಂದಿದೆ.

ಭೂಗತ ಜಗತ್ತಿನಲ್ಲಿ ನಡೆಯುತ್ತಿರುವ ಹಲವಾರು ಲಿಂಕ್​, ಹವಾಲಾ ಚಟುವಟಿಕೆ ಸೇರಿದಂತೆ ಮನಿ ಲ್ಯಾಂಡ್ರಿಂಗ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಹುಡುಕಾಟ ನಡೆಸುತ್ತಿದೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ರಾಜಕೀಯ ಲಿಂಕ್​ಗಳನ್ನು ಸಹ ಪತ್ತೆ ಹಚ್ಚಲು ಇಡಿ ಪ್ರಯತ್ನಿಸುತ್ತಿದೆ. ಈ ಹಿಂದೆ ಮನಿ ಲ್ಯಾಂಡ್ರಿಂಗ್ ಪ್ರಕರಣದ ಕುರಿತ ಇಡಿ ತನಿಖೆಯು ರಾಜಕೀಯ ಪ್ರೇರಿತ ಎಂದು ನವಾಬ್​ ಮಲಿಕ್​ ಹೇಳಿದ್ದರು.

ಓದಿ: ನವಾಬ್ ಮಲಿಕ್ ವಿಚಾರಣೆ ಮುನ್ನ ಇಡಿ ಯಾವುದೇ ಮಾಹಿತಿ ನೀಡಿರಲಿಲ್ಲ: ಜಯಂತ್ ಪಾಟೀಲ್​​

Last Updated : Feb 23, 2022, 9:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.