ETV Bharat / bharat

ತೌಕ್ತೆ ಅಬ್ಬರ: ನೌಕಾಪಡೆಯಿಂದ ಬಾರ್ಜ್​ನ 177 ಜನರ ರಕ್ಷಣೆ - ನೌಕಾಪಡೆಯಿಂದ ಬಾರ್ಜ್​ನ 177 ಜನರ ರಕ್ಷಣೆ

ತೌಕ್ತೆ ಚಂಡಮಾರುತ ಪಶ್ಚಿಮ ಕರಾವಳಿಯಲ್ಲಿ ಘರ್ಜಿಸುತ್ತಿದ್ದು, ಸಮುದ್ರದ ಆರ್ಭಟಕ್ಕೆ ಸಿಲುಕಿದ 177 ಜನರನ್ನು ಭಾರತೀಯ ನೌಕಾಪಡೆ ಸೋಮವಾರ ರಾತ್ರಿ ಸ್ಥಳಾಂತರಿಸಿದೆ.

navy-rescues-60-people-onboard-barge-adrift-off-mumbai

author img

By

Published : May 18, 2021, 3:22 PM IST

ನವದೆಹಲಿ: ಮುಂಬೈ ಕರಾವಳಿಯ ಬಾರ್ಜ್​ನಲ್ಲಿ ಸಿಲುಕಿದ್ದ 177 ಜನರನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ.

ಅರೇಬಿಯನ್ ಸಮುದ್ರದ ಮೇಲೆ 'ತೌಕ್ತೆ' ರುದ್ರನರ್ತನ ಮಾಡುತ್ತಿದ್ದು, ಇದರ ತೀವ್ರತೆಗೆ ಮುಂಬೈ ಕರಾವಳಿಯಲ್ಲಿ ಬಾರ್ಜ್​ ಸಿಲುಕಿವೆ. ಬಾರ್ಜ್​ ಪಿ 305 ನಲ್ಲಿ ಒಟ್ಟು 177 ಜನರನ್ನು ಇಂದು 11:30 ರವರೆಗೆ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ. ಐಎನ್‌ಎಸ್ ಕೊಚ್ಚಿ ಮತ್ತು ಐಎನ್‌ಎಸ್ ಕೋಲ್ಕತಾ ದ ಬೆಂಬಲದೊಂದಿಗೆ ಅತ್ಯಂತ ಸವಾಲಿನ ಪರಿಸ್ಥಿತಿಯಲ್ಲಿ ರಕ್ಷಣಾ ಕಾರ್ಯ ಮಾಡಿರುವುದು ಗಮನಾರ್ಹ.

ಚಂಡಮಾರುತದ ಈ ಪರಿಸ್ಥಿತಿಬ ಎದುರಿಸಲು 11 ಡೈವಿಂಗ್ ತಂಡಗಳನ್ನು ಯಾವುದೇ ಸಂದರ್ಭದಲ್ಲಿ ಕೆಲಸ ಮಾಡಲು ನಿಯೋಜಿಸಲಾಗಿದೆ . ಹಾಗೆ 12 ಪ್ರವಾಹ ರಕ್ಷಣಾ ತಂಡಗಳು ಮತ್ತು ವೈದ್ಯಕೀಯ ತಂಡಗಳನ್ನು ಕೂಡ ತಕ್ಷಣದ ಪ್ರತಿಕ್ರಿಯೆಗೆ ನಿಯೋಜನೆ ಮಾಡಲಾಗಿದೆ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ.

ಅಗತ್ಯವಿದ್ದರೆ ಸೈಕ್ಲೋನ್ ನಂತರದ ತುರ್ತು ಮೂಲಸೌಕರ್ಯ ರಿಪೇರಿ ಕೆಲಸಗಳನ್ನು ಕೈಗೊಳ್ಳಲು ದುರಸ್ತಿ ಮತ್ತು ರಕ್ಷಣಾ ತಂಡಗಳನ್ನೂ ಈಗಾಗಲೇ ರಚಿಸಲಾಗಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.