ETV Bharat / bharat

ರೈತರು ವರ್ಷಪೂರ್ತಿ ಪ್ರತಿಭಟನೆಗೆ ಕುಳಿತಿದ್ರು, ಪ್ರಧಾನಿಗೆ 15 ನಿಮಿಷ ಕಾಯಲು ಆಗಲಿಲ್ಲ: ಸಿಧು - ಪಂಜಾಬ್​ನಲ್ಲಿ ನಮೋ ಭದ್ರತಾ ಲೋಪ

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿದ ರೈತರು ಕಳೆದ ಒಂದು ವರ್ಷದಿಂದ ಗಡಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆದರೆ, ನಿನ್ನೆ ಕೇವಲ 15 ನಿಮಿಷಗಳ ಕಾಲ ಫ್ಲೈಓವರ್​​ನಲ್ಲಿ ಸಿಲುಕೊಂಡಿದ್ದಕ್ಕಾಗಿ ಪ್ರಧಾನಿ ಮೋದಿ ತೊಂದರೆ ಅನುಭವಿಸಿದ್ದಾರೆ ಎಂದು ನವಜೋತ್​ ಸಿಂಗ್​ ಸಿಧು ವಾಗ್ದಾಳಿ ನಡೆಸಿದರು.

Navjot Sidhu attack on pm modi
Navjot Sidhu attack on pm modi
author img

By

Published : Jan 6, 2022, 3:44 PM IST

ಚಂಡೀಗಢ(ಪಂಜಾಬ್​): ದೆಹಲಿ ಗಡಿಯಲ್ಲಿ ರೈತರು ಒಂದು ವರ್ಷದಿಂದ ಪ್ರತಿಭಟನೆಗೆ ಕುಳಿತಿದ್ದರು. ಆದರೆ, ನಿನ್ನೆ ಕೇವಲ 15 ನಿಮಿಷಗಳ ಕಾಲ ಕಾಯಲು ಪ್ರಧಾನಿಗೆ ಆಗಲಿಲ್ಲ, ಇದರಿಂದ ಅವರಿಗೆ ತೊಂದರೆ ಆಗಿದೆ. ಈ ರೀತಿಯ ಎರಡು ಮಾನದಂಡ ಏಕೆ? ಎಂದು ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷ ನವಜೋತ್ ಸಿಂಗ್​ ಸಿಧು ಪ್ರಶ್ನಿಸಿದ್ದಾರೆ.

ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದ್ದೀರಿ. ಆದರೆ, ಇದೀಗ ಅವರ ಬಳಿ ಇರುವುದನ್ನೂ ಸಹ ಕಿತ್ತುಕೊಂಡಿದ್ದೀರಿ ಎಂಡು ಟೀಕಿಸಿರುವ ಅವರು, ನಿನ್ನ ಪ್ರಧಾನಿ ಮೋದಿ ಮಾಡಿರುವುದು ಒಂದು ನಾಟಕ. ರ್‍ಯಾಲಿ ಆಯೋಜನೆಗೊಂಡಿದ್ದ ಸ್ಥಳದಲ್ಲೇ ಜನರು ಇರಲಿಲ್ಲ. ಇದೇ ಕಾರಣಕ್ಕಾಗಿ ಪ್ರಧಾನಿ ಈ ರೀತಿ ನಡೆದುಕೊಂಡಿದ್ದಾರೆ ಎಂದರು.

ಇದನ್ನೂ ಓದಿ: ಜೈಲು ಅಧಿಕಾರಿಗಳಿಗೆ ಹೆದರಿ ಮೊಬೈಲ್​ ಫೋನ್​​ ನುಂಗಿದ ಕೈದಿ

ನಿನ್ನೆ ಹುಸೇನಿವಾಲಾದಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕದಿಂದ ಫಿರೋಜ್‌ಪುರಕ್ಕೆ ಪ್ರಧಾನಿ ರಸ್ತೆ ಮಾರ್ಗವಾಗಿ ಸಂಚರಿಸುತ್ತಿದ್ದರು. ಈ ವೇಳೆ ಬೆಂಗಾವಲು ಪಡೆಯೊಂದಿಗೆ ಮೋದಿ ಫ್ಲೈಓವರ್‌ವೊಂದರಲ್ಲೇ ಸುಮಾರು 20 ನಿಮಿಷಗಳ ಕಾಲ ಕಳೆಯಬೇಕಾಯಿತು. ಪ್ರತಿಭಟನಾಕಾರರು ರಸ್ತೆಯಲ್ಲಿ ಅಡಚಣೆ ಉಂಟು ಮಾಡಿದ್ದೇ ಇದಕ್ಕೆ ಕಾರಣ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದರ ಬೆನ್ನಲ್ಲೇ ರ್‍ಯಾಲಿ ರದ್ದುಗೊಳಿಸಲಾಗಿತ್ತು.

ಪಂಜಾಬ್​ನಲ್ಲಿ ಪ್ರಧಾನಿ ಅವರಿಗೆದುರಾದ ಭದ್ರತಾ ಲೋಪ ಕಾಂಗ್ರೆಸ್​-ಬಿಜೆಪಿ ನಡುವಿನ ಮಾತಿನ ಸಮರಕ್ಕೆ ವೇದಿಕೆಯಾಗಿದ್ದು, ಆರೋಪ-ಪ್ರತ್ಯಾರೋಪ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.