ETV Bharat / bharat

ರಾಷ್ಟ್ರೀಯ ಸ್ಮಾರ್ಟ್​ ಸಿಟಿ ಪ್ರಶಸ್ತಿ: ಕರ್ನಾಟಕದ ಈ 3 ನಗರಗಳು ಆಯ್ಕೆ - ಸ್ವಚ್ಛತೆ ಹಾಗೂ ಸುಸ್ಥಿರ ವಾತಾವರಣ

ಪ್ರಸ್ತುತ ಸಾಲಿನ ರಾಷ್ಟ್ರೀಯ ಸ್ಮಾರ್ಟ್​ ಸಿಟಿ ಪ್ರಶಸ್ತಿಗೆ ರಾಜ್ಯದ ಮೂರು ನಗರಗಳು ಆಯ್ಕೆಯಾಗಿವೆ.

ಶಿವಮೊಗ್ಗ
ಶಿವಮೊಗ್ಗ
author img

By ETV Bharat Karnataka Team

Published : Aug 25, 2023, 10:55 PM IST

ನವದೆಹಲಿ: ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ನೀಡುವ 2022ನೇ ಸಾಲಿನ ಅತ್ಯುತ್ತಮ 'ರಾಷ್ಟ್ರೀಯ ಸ್ಮಾರ್ಟ್​ ಸಿಟಿ ಪ್ರಶಸ್ತಿ'ಯಲ್ಲಿ ಇಂದೋರ್ ಮೊದಲ ಸ್ಥಾನ ಪಡೆದುಕೊಂಡಿದೆ. ಅನುಕ್ರಮವಾಗಿ ಸೂರತ್ ಹಾಗೂ ಆಗ್ರಾ ನಗರಗಳಿಗೆ ಎರಡನೇ ಮತ್ತು ಮೂರನೇ ಸ್ಥಾನ ಸಿಕ್ಕಿದೆ. ಹಾಗೆಯೇ ರಾಜ್ಯದಿಂದ ಮೂರು ನಗರಗಳು ಪ್ರಶಸ್ತಿಗೆ ಭಾಜನವಾಗಿವೆ. ನಗರ ಪರಿಸರ ವಿಭಾಗದಲ್ಲಿ ಶಿವಮೊಗ್ಗ, ನವೀನ ಕಲ್ಪನೆ ವಿಭಾಗದಲ್ಲಿ ಹುಬ್ಬಳ್ಳಿ-ಧಾರವಾಡ ಹಾಗೂ ವಲಯ ಸ್ಮಾರ್ಟ್​ ಸಿಟಿ ವಿಭಾಗದಲ್ಲಿ ಬೆಳಗಾವಿ ಆಯ್ಕೆಯಾಗಿದೆ.

ವಿವಿಧ ವಿಭಾಗಗಳ ಪ್ರಶಸ್ತಿಯನ್ನು ಸಚಿವಾಲಯ ಶುಕ್ರವಾರ ಬಿಡುಗಡೆಗೊಳಿಸಿತು. ಪ್ರಶಸ್ತಿಯನ್ನು ಸೆಪ್ಟೆಂಬರ್​ 27ರಂದು ಇಂದೋರ್​ನಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ನೀಡಲಿದ್ದಾರೆ.

ಇದರೊಂದಿಗೆ ಇತರೆ ವಿಭಿನ್ನ ವಿಭಾಗದಲ್ಲಿ ಇತರೆ ನಗರಗಳು 66 ಪ್ರಶಸ್ತಿಗಳನ್ನು ಪಡೆದಿವೆ. ಉತ್ತಮ ರಾಜ್ಯ ಪ್ರಶಸ್ತಿಯಲ್ಲಿ ಮಧ್ಯಪ್ರದೇಶಕ್ಕೆ ಮೊದಲ ಸ್ಥಾನ ಸಿಕ್ಕಿದೆ. ಎರಡನೇ ಸ್ಥಾನ ತಮಿಳುನಾಡಿಗೆ ಬಂದಿದೆ. ಇದೇ ರೀತಿ ಮೂರನೇ ಸ್ಥಾನವನ್ನು ರಾಜಸ್ಥಾನ ಹಾಗೂ ಉತ್ತರಪ್ರದೇಶ ಜಂಟಿಯಾಗಿ ಪಡೆದಿವೆ.

ಕೇಂದ್ರಾಡಳಿತ ವಿಭಾಗದಲ್ಲಿ ಚಂಡೀಗಢ ಮೊದಲ ಸ್ಥಾನವನ್ನು ಪಡೆದಿದೆ. ಇ-ಆಡಳಿತ ಸೇವೆಯನ್ನು ಗುರುತಿಸಿ ಉತ್ತಮ ಸರ್ಕಾರದ ವಿಭಾಗದಲ್ಲಿ ಮತ್ತೊಂದು ಪ್ರಶಸ್ತಿ ಕೊಡಲಾಗಿದೆ. ನರೇಂದ್ರ ಮೋದಿ ಅವರ ಸ್ಮಾರ್ಟ್​ ಸಿಟಿ ಮಿಷನ್​ ಯೋಜನೆಯಡಿಯಲ್ಲಿ ಸುಮಾರು 100 ಸಿಟಿಗಳು ಅಭಿವೃದ್ದಿಯಾಗಿವೆ. ಇದರಲ್ಲಿ ರಾಜ್ಯದ ಮೂರು ನಗರಗಳು ಪ್ರಶಸ್ತಿಗೆ ಆಯ್ಕೆಯಾಗಿವೆ.

ಇಂದೋರ್ ದೇಶದ ಸ್ವಚ್ಛ ನಗರಿ: ಸತತ ಆರನೇ ಬಾರಿಯೂ ಇಂದೋರ್​ ಭಾರತದ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 'ಉತ್ತಮ ಮಾದರಿ ರಸ್ತೆ' ನಿರ್ಮಾಣಕ್ಕಾಗಿ 'ಉತ್ತಮ ವಾತಾವರಣ ನಿರ್ಮಾಣ' ವಿಭಾಗದಲ್ಲಿ ಕೊಯಮತ್ತೂರ್​ ಉತ್ತಮ ಸಿಟಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಆರ್ಥಿಕತೆಯ ವಿಭಾಗದಲ್ಲಿ ಜಬಲ್ಪುರ ಮೊದಲ ಸ್ಥಾನ ಪಡೆದಿದ್ದರೆ, ಎರಡು ಹಾಗೂ ಮೂರನೇ ಸ್ಥಾನವನ್ನು ಇಂದೋರ್ ಹಾಗೂ ಲಕ್ನೋ ಪಡೆದಿವೆ. ಅದೇ ರೀತಿ ಸಚಿವಾಲಯ ಪ್ರಕಾರ, 'ಪಬ್ಲಿಕ್ ಬೈಕ್ ಶೇರಿಂಗ್​ ಜೊತೆಗೆ ಸೈಕಲ್ ಟ್ರ್ಯಾಕ್ಸ್​'ಗೆ ಚಲನಶೀಲತೆಯ ವಿಭಾಗದಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಚಂಢೀಗಡ ಪಡೆದುಕೊಂಡಿದೆ.

'ಗಾಳಿಯ ಗುಣಮಟ್ಟ ಅಭಿವೃದ್ಧಿ ಹಾಗೂ ಅಹಿಲ್ಯಾ ವಾನ್​ ಮತ್ತು ವರ್ಟಿಕಲ್ ಗಾರ್ಡನ್​' ಕಾರಣಕ್ಕಾಗಿ 'ನಗರ ಎನ್ವಿರಾನ್​ಮೆಂಟ್' ವಿಭಾಗದಲ್ಲಿ ಇಂದೋರ್​​ಗೆ​ ಮತ್ತೊಂದು ಉತ್ತಮ ಸಿಟಿ ಪ್ರಶಸ್ತಿಯೂ ಲಭಿಸಿದೆ.

ಸಂರಕ್ಷಣಾ ಸ್ಥಳದ ಅಭಿವೃದ್ಧಿ ಹಾಗೂ ಹಳೆಯ ನಗರಗಳಿಗೆ ಇ-ಆಟೋ ಪೂರೈಕೆ ಉಪಕ್ರಮಕ್ಕೆ ಶಿವಮೊಗ್ಗ ಹಾಗೂ ಜಮ್ಮು ಮತ್ತು ಕಾಶ್ಮೀರ ಪ್ರಶಸ್ತಿ ಪಡೆದಿವೆ.

ಜೂನ್ 25, 2015ರಂದು ಸ್ಮಾರ್ಟ್​ ಸಿಟಿ ಮಿಷನ್​ ಲೋಕಾರ್ಪಣೆಗೊಂಡಿದೆ. ಇದರ ಮುಖ್ಯ ಉದ್ದೇಶ ಮೂಲಸೌಕರ್ಯಗಳನ್ನು ಒದಗಿಸುವುದು, ಸ್ವಚ್ಛತೆ ಹಾಗೂ ಸುಸ್ಥಿರ ವಾತಾವರಣ ಮತ್ತು ಜನರಿಗೆ ಉತ್ತಮ ಗುಣಮಟ್ಟದ ಜೀವನವನ್ನು ತ್ವರಿತ ಪರಿಹಾರದ ಮೂಲಕ ನೀಡುವುದಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಮಾದರಿ ಬದಲಾವಣೆಯ ಮೂಲಕ ದೇಶದಲ್ಲಿ ನಗರದ ಅಭಿವೃದ್ಧಿಯನ್ನು ಉತ್ತಮಗೊಳಿಸುವುದು ಈ ಪಾರದರ್ಶಕ ಮಿಷನ್​ನ ಉದ್ದೇಶ. ಇಲ್ಲಿಯವರೆಗೆ ಮಿಷನ್​ನ ಅಡಿಯಲ್ಲಿ ರೂ. 1,10,365 ಕೋಟಿ ವೆಚ್ಚದಲ್ಲಿ 6,041 ಯೋಜನೆಗಳು ಸಂಪೂರ್ಣವಾಗಿವೆ. ಜೂನ್​ 30, 2024ರ ವೇಳೆಗೆ 60, 095 ಕೋಟಿ ಮೌಲ್ಯದ 1,894 ಯೋಜನೆಗಳು ಪೂರ್ಣಗೊಳ್ಳಲಿವೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಇದನ್ನೂ ಓದಿ: ಶಿವಮೊಗ್ಗದ ವಾಹನ ಸವಾರರೇ ಎಚ್ಚರ: ನಿಮ್ಮ ಮೇಲಿದೆ ಆಧುನಿಕ ತಂತ್ರಜ್ಞಾನದ ಕ್ಯಾಮರಾಗಳ ಕಣ್ಣು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.