ಸತ್ನಾ(ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ ಚಲಾವಣೆಯಾಗುವ ಪ್ರತಿಯೊಂದು ಮತವೂ ಕೂಡ 'ತ್ರಿಶಕ್ತಿ'ಗಳಿಗೆ ಬಲ ನೀಡಲಿದೆ. ಒಂದನೆಯದು, ಮಧ್ಯಪ್ರದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚಿಸಲಿದೆ. ಎರಡನೆಯದು, ಕೇಂದ್ರದಲ್ಲಿ ಪ್ರಧಾನಿಗೆ ಬಲ ತುಂಬಲಿದೆ. ಮೂರನೆಯದು, ರಾಜ್ಯದಲ್ಲಿ 'ಭ್ರಷ್ಟ' ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರ ಉಳಿಸಲಿದೆ. ಇದರರ್ಥ ಒಂದು ಮತ, ಮೂರು ಅದ್ಭುತಗಳು. ಇದೊಂದು ರೀತಿ 'ತ್ರಿಶಕ್ತಿ' ಎಂದು ಪ್ರಧಾನಿ ನರೇಂದ್ರ ಮೋದಿ ಮತ ಪ್ರಚಾರ ಸಭೆ ಉದ್ದೇಶಿಸಿ ಹೇಳಿದ್ದಾರೆ.
-
भाजपा सरकार ने देश के गरीब के अपने पक्के घर के सपनें को पूरा करने के लिए दिन-रात एक कर दिया है।
— BJP (@BJP4India) November 9, 2023 " class="align-text-top noRightClick twitterSection" data="
बीते 10 वर्षों में हमने 4 करोड़ से अधिक गरीब परिवारों को पक्के घर दिए हैं।
हम तो भक्ति में डूबे हुए लोग हैं- जिस भक्ति से भव्य राम मंदिर मंदिर बनाते हैं, उसी भक्ति से 4 करोड़ गरीबों… pic.twitter.com/5wA96BRaks
">भाजपा सरकार ने देश के गरीब के अपने पक्के घर के सपनें को पूरा करने के लिए दिन-रात एक कर दिया है।
— BJP (@BJP4India) November 9, 2023
बीते 10 वर्षों में हमने 4 करोड़ से अधिक गरीब परिवारों को पक्के घर दिए हैं।
हम तो भक्ति में डूबे हुए लोग हैं- जिस भक्ति से भव्य राम मंदिर मंदिर बनाते हैं, उसी भक्ति से 4 करोड़ गरीबों… pic.twitter.com/5wA96BRaksभाजपा सरकार ने देश के गरीब के अपने पक्के घर के सपनें को पूरा करने के लिए दिन-रात एक कर दिया है।
— BJP (@BJP4India) November 9, 2023
बीते 10 वर्षों में हमने 4 करोड़ से अधिक गरीब परिवारों को पक्के घर दिए हैं।
हम तो भक्ति में डूबे हुए लोग हैं- जिस भक्ति से भव्य राम मंदिर मंदिर बनाते हैं, उसी भक्ति से 4 करोड़ गरीबों… pic.twitter.com/5wA96BRaks
ಪಂಚರಾಜ್ಯ ಚುನಾವಣೆಗಳ ಪೈಕಿ ಮಧ್ಯಪ್ರದೇಶದಲ್ಲಿ ನವೆಂಬರ್ 17ರಂದು ಮತದಾನ ನಡೆಯಲಿದೆ. ಇಂದು ಸತ್ನಾದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, ''ನಮ್ಮ ಸರ್ಕಾರ ಬಡವರಿಗಾಗಿ ನಾಲ್ಕು ಕೋಟಿ ಪಕ್ಕಾ ಮನೆಗಳನ್ನು ನಿರ್ಮಿಸಿದೆ. ಸತ್ನಾದಲ್ಲಿ ಬಡವರಿಗೆ 1.32 ಲಕ್ಷ ಮನೆಗಳು ದೊರೆತಿವೆ. ಆದರೆ, ನನಗಾಗಿ ಒಂದು ಮನೆಯನ್ನೂ ಮಾಡಿಕೊಳ್ಳಲಿಲ್ಲ'' ಎಂದರು.
ಇದನ್ನೂ ಓದಿ: ಹೈಕಮಾಂಡ್ ಸೂಚನೆಯಂತೆ ಚುನಾವಣಾ ರಾಜಕೀಯದಿಂದ ಸದಾನಂದಗೌಡ ನಿವೃತ್ತಿ: ಬಿ ಎಸ್ ಯಡಿಯೂರಪ್ಪ
''ದೇಶದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಕಲಿ ಫಲಾನುಭವಿಗಳಿಗೆ ಕಡಿವಾಣ ಹಾಕಲಾಗಿದೆ. ಸರ್ಕಾರದ ಯೋಜನೆಗಳ ಲಾಭ ಪಡೆಯುತ್ತಿದ್ದ ಕಾಂಗ್ರೆಸ್ ಸೃಷ್ಟಿಸಿದ್ದ 10 ಕೋಟಿ ನಕಲಿ ಫಲಾನುಭವಿಗಳನ್ನು ದಾಖಲೆಗಳಿಂದ ತೆಗೆದುಹಾಕಲಾಗಿದೆ. ಅದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರು ನನ್ನನ್ನು ನಿಂದಿಸುತ್ತಿದ್ದಾರೆ. ಏಕೆಂದರೆ, ನಮ್ಮ ಸರ್ಕಾರದ ಈ ಕ್ರಮದಿಂದ ಕಾಂಗ್ರೆಸ್‌ನವರಿಗೆ ಬಲವಾದ ಹೊಡೆತ ಬಿದ್ದಿದೆ. ಸರ್ಕಾರವು ಜನರ 2.75 ಲಕ್ಷ ಕೋಟಿ ಉಳಿತಾಯ ಮಾಡಿದೆ'' ಎಂದು ಮಾಹಿತಿ ನೀಡಿದರು.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ''ಇತ್ತೀಚಿನ ದಿನಗಳಲ್ಲಿ ನಾನು ಎಲ್ಲಿಗೆ ಹೋದರೂ ಅಯೋಧ್ಯೆಯಲ್ಲಿ ರಾಮನ ಮಂದಿರ ನಿರ್ಮಾಣದ ಬಗ್ಗೆ ಮಾತನಾಡಲಾಗುತ್ತಿದೆ. ದೇಶದೆಲ್ಲೆಡೆ ಸಂತಸದ ಅಲೆ ಎದ್ದಿದೆ. ಇದೇ ವೇಳೆ, ನಾವು ಹೊಸ ಸಂಸತ್ತಿನ ಕಟ್ಟಡ ನಿರ್ಮಿಸಿದ್ದರೆ, 30,000 ಪಂಚಾಯತ್ ಕಟ್ಟಡಗಳನ್ನೂ ನಿರ್ಮಿಸಿದ್ದೇವೆ'' ಎಂದು ಹೇಳಿದರು.
ಮಂದುವರೆದು ಮಾತನಾಡಿ, ''ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದಿಂದಾಗಿ ಬಡವರಿಗೆ ಲಕ್ಷಗಟ್ಟಲೆ ಮನೆಗಳನ್ನು ನಿರ್ಮಿಸಿದ ರಾಜ್ಯಗಳಲ್ಲಿ ಮಧ್ಯಪ್ರದೇಶವೂ ಒಂದು ಎಂಬುವುದೇ ನನಗೆ ಸಂತೋಷ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಾರಂಭವಾದ ಬಡವರಿಗೆ ಉಚಿತ ಪಡಿತರ ಯೋಜನೆಯನ್ನು ಡಿಸೆಂಬರ್ ನಂತರ ಮುಂದಿನ ಐದು ವರ್ಷಗಳವರೆಗೆ ವಿಸ್ತರಿಸುವ ಸಂಕಲ್ಪವನ್ನೂ ನಾವು ಮಾಡಿದ್ದೇವೆ'' ಎಂದು ಮೋದಿ ವಿವರಿಸಿದರು.
ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಮತ್ತು ರಾಜ್ಯಸಭಾ ಸದಸ್ಯ ದಿಗ್ವಿಜಯ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿ, ''ಇಬ್ಬರು ನಾಯಕರು ಪರಸ್ಪರ ಬಟ್ಟೆ ಹರಿದುಕೊಳ್ಳುವುದರಲ್ಲಿ ತೊಡಗಿದ್ದಾರೆ. ಅಲ್ಲದೇ, ತಮ್ಮ ಬೆಂಬಲಿಗರಿಗೂ ಪರಸ್ಪರ ಬಟ್ಟೆ ಹರಿದುಕೊಳ್ಳುವಂತೆಯೂ ಹೇಳುತ್ತಿದ್ದಾರೆ'' ಎಂದು ವ್ಯಂಗ್ಯವಾಡಿದರು.